ಸರ್ಕಾರಿ ಉಪನ್ಯಾಸಕಿ ಮನೆಯಲ್ಲೇ ಕಳ್ಳಬಟ್ಟಿ ತಯಾರಿಕಾ ಕೇಂದ್ರ

ಮಂಗಳೂರು: ಕೊರೊನಾ ಕಾಟದ ನಡುವೆ ಕುಡುಕರು ಕಂಗೆಟ್ಟಿದ್ದಾರೆ. ಮದ್ಯಪ್ರಿಯರು ಮದ್ಯವಿಲ್ಲದೆ ಮಂಕಾಗಿದ್ದಾರೆ. ಹೀಗಾಗಿ ಈ ಸಂದರ್ಭವನ್ನು ಬಳಸಿಕೊಂಡು ಕಳ್ಳಬಟ್ಟಿ ತಯಾರಿಕೆ ಮಾಡುವುದು ಹೆಚ್ಚಾಗಿದೆ. ವೈನ್ಸ್, ಬಾರ್​ಗಳು ಬಂದ್ ಆಗಿರುವುದರಿಂದ ಈ ರೀತಿಯ ಕಳ್ಳದಾರಿಯನ್ನ ಹಿಡಿದಿದ್ದಾರೆ. ಸರ್ಕಾರಿ ಉಪನ್ಯಾಸಕಿ ಮನೆಯಲ್ಲೇ ಕಳ್ಳಬಟ್ಟಿ ತಯಾರಿಕಾ ಕೇಂದ್ರ ಸ್ಥಾಪನೆಯಾಗಿದೆ. ಮಾಹಿತಿ ಮೇರೆಗೆ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೊಡ್ಮಾಣ್ ಕೋಡಿ ಗ್ರಾಮದ ಸಮ್ಮರ್ ವೈನ್ಸ್ ಮಾಲೀಕನ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಮಾಲೀಕ ನೊಬರ್ಟ್ ಡಿಸೋಜಾ ಸೇರಿದಂತೆ ಮೂವರನ್ನು […]

ಸರ್ಕಾರಿ ಉಪನ್ಯಾಸಕಿ ಮನೆಯಲ್ಲೇ ಕಳ್ಳಬಟ್ಟಿ ತಯಾರಿಕಾ ಕೇಂದ್ರ

Updated on: Apr 19, 2020 | 12:30 PM

ಮಂಗಳೂರು: ಕೊರೊನಾ ಕಾಟದ ನಡುವೆ ಕುಡುಕರು ಕಂಗೆಟ್ಟಿದ್ದಾರೆ. ಮದ್ಯಪ್ರಿಯರು ಮದ್ಯವಿಲ್ಲದೆ ಮಂಕಾಗಿದ್ದಾರೆ. ಹೀಗಾಗಿ ಈ ಸಂದರ್ಭವನ್ನು ಬಳಸಿಕೊಂಡು ಕಳ್ಳಬಟ್ಟಿ ತಯಾರಿಕೆ ಮಾಡುವುದು ಹೆಚ್ಚಾಗಿದೆ. ವೈನ್ಸ್, ಬಾರ್​ಗಳು ಬಂದ್ ಆಗಿರುವುದರಿಂದ ಈ ರೀತಿಯ ಕಳ್ಳದಾರಿಯನ್ನ ಹಿಡಿದಿದ್ದಾರೆ.

ಸರ್ಕಾರಿ ಉಪನ್ಯಾಸಕಿ ಮನೆಯಲ್ಲೇ ಕಳ್ಳಬಟ್ಟಿ ತಯಾರಿಕಾ ಕೇಂದ್ರ ಸ್ಥಾಪನೆಯಾಗಿದೆ. ಮಾಹಿತಿ ಮೇರೆಗೆ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೊಡ್ಮಾಣ್ ಕೋಡಿ ಗ್ರಾಮದ ಸಮ್ಮರ್ ವೈನ್ಸ್ ಮಾಲೀಕನ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಮಾಲೀಕ ನೊಬರ್ಟ್ ಡಿಸೋಜಾ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮಾಲೀಕ ಡಿಸೋಜಾ ಸರ್ಕಾರಿ ಉಪನ್ಯಾಸಕಿಯ ಮಗ. ಅಧಿಕಾರಿಗಳು 1,200 ಲೀ. ಬೆಲ್ಲದ ಕೊಳೆ, ಕಳ್ಳಬಟ್ಟಿ ತಯಾರಿಸುವ ಸಾಮಗ್ರಿ. 950 ಕೆಜಿ ಬೆಲ್ಲ, 500 ಲೀಟರ್ ನಕಲಿ ವೈನ್, 300 ಲೀಟರ್ ಬಟಾಟೆ ಮಿಶ್ರಣ ವಶಕ್ಕೆ ಪಡೆದಿದ್ದಾರೆ.