ಪ್ರವೀಣ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದ ಪ್ರಮೋದ್ ಮುತಾಲಿಕ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 19, 2022 | 6:25 PM

ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶ ನಿರ್ಬಂಧ ತೆರವಾದ ಹಿನ್ನೆಲೆ ಇಂದು ಭೇಟಿ ನೀಡಿದ್ದು, ಪ್ರವೀಣ್ ತಾಯಿ, ತಂದೆ ಹಾಗೂ ಪತ್ನಿಗೆ ಸಾಂತ್ವನ ಹೇಳಿದರು.

ಪ್ರವೀಣ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದ ಪ್ರಮೋದ್ ಮುತಾಲಿಕ್
ಪ್ರವೀಣ್ ‌ನೆಟ್ಟಾರು‌ ಮನೆಗೆ ಪ್ರಮೋದ್ ಮುತಾಲಿಕ್ ಭೇಟಿ.
Follow us on

ಮಂಗಳೂರು: ಹತ್ಯೆಯಾದ ಪ್ರವೀಣ್ ‌ನೆಟ್ಟಾರು‌ ಮನೆಗೆ ಇಂದು ಪ್ರಮೋದ್ ಮುತಾಲಿಕ್ ಭೇಟಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್ ನಿವಾಸಕ್ಕೆ ಹತ್ಯೆಯ ಹಲವು ದಿನಗಳ ಬಳಿಕ‌ ಮುತಾಲಿಕ್ ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶ ನಿರ್ಬಂಧ ತೆರವಾದ ಹಿನ್ನೆಲೆ ಇಂದು ಭೇಟಿ ನೀಡಿದ್ದು, ಪ್ರವೀಣ್ ತಾಯಿ, ತಂದೆ ಹಾಗೂ ಪತ್ನಿಗೆ ಸಾಂತ್ವನ ಹೇಳಿದರು. ಪ್ರವೀಣ್ ಸಮಾಧಿ ಸ್ಥಳಕ್ಕೆ ಭೇಟಿ ಕೊಟ್ಟು ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಪ್ರವೀಣ್ ಕುಟುಂಬಸ್ಥರ ಭೇಟಿ ಬಳಿಕ ಪ್ರಮೋದ್ ಮುತಾಲಿಕ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಪ್ರವೀಣ್ ಸಾವನ್ನು ಕಾರ್ಯಕರ್ತರಾದ ನಾವು ವ್ಯರ್ಥವಾಗಲು ಬಿಡಲ್ಲ. ಸರ್ಕಾರ ಏನು ಮಾಡುತ್ತೋ ಬಿಡುತ್ತೋ ನಮಗೆ ಗೊತ್ತಿಲ್ಲ. ಆದರೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗೋವರೆಗೆ ನಾವು ವಿರಮಿಸಲ್ಲ. ಇಂಥ ಇಸ್ಲಾಮಿಕ್ ‌ಗೂಂಡಾಗಳಿಗೆ ಭಾರತದ ನೆಲದಲ್ಲಿ ಅವಕಾಶ ಮಾಡಿ ಕೊಡಲ್ಲ ಎಂದು ಹೇಳಿದರು.

ಆರೋಪಿಗಳಿಗೆ ಬೇಲ್ ಕೊಟ್ಟರೆ ಹಿಂದೂ ಸಮಾಜ ಬಿಡಲ್ಲ. ಅವರ ಮೇಲೆ ಕೋಕಾ ಕಾಯಿದೆ ಹೇರುವ ಕೆಲಸ ‌ಸರ್ಕಾರ ಮಾಡಲಿ. ಪ್ರವೀಣ್ ಕುಟುಂಬಕ್ಕೆ ಸಿಎಂ ಕೆಲಸ ಕೊಡುವ ಭರವಸೆ ಕೊಟ್ಟಿದ್ದಾರೆ. ಆದರೆ ಇದು ಭರವಸೆ ಆಗಬಾರದು, ಹಿಂದೆಯೂ ಭರವಸೆ ಕೊಟ್ಟು ಈಡೇರಿಸಿಲ್ಲ. ಶರತ್ ಮಡಿವಾಳ, ಪರೇಶ್ ಮೇಸ್ತಾ ವಿಚಾರದಲ್ಲಿ ‌ಹೀಗೇ ಆಗಿದೆ. ಭರವಸೆ ‌ಈಡೇರಿಸದೇ ಇದ್ದರೆ ನಿಮ್ಮ ‌ಮನೆಯ ಎದುರು ಧರಣಿ ಮಾಡ್ತೇವೆ. ಧರಣಿ ಜೊತೆಗೆ ನಿಮ್ಮ ‌ಮುಖಕ್ಕೆ ಮಸಿ ಬಳೀತಿವಿ ಎಂದು ಹೇಳಿದರು.

ಪ್ರವೀಣ್ ನೆಟ್ಟಾರು ಸೋದರನಿಂದ ಕೊಲೆ ಬೆದರಿಕೆ:  

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜುಲೈ 26ರಂದು ನಡೆದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸೋದರನಿಂದ ಹಿಂದೂ ಕಾರ್ಯಕರ್ತನಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಬೆದರಿಕೆ ಹಾಕಿದವನ ಬಂಧನಕ್ಕೆ ಆಗ್ರಹಿಸಿ ಬೆಳ್ಳಾರೆ ಠಾಣೆ ಎದುರು‌ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ.

ಪ್ರವೀಣ್ ನೆಟ್ಟಾರು ಕೊಲೆ ಆರೋಪಿ ಶಫಿಕ್ ಸೋದರ ಸಫ್ರಿದ್‌ ಹಿಂದೂ ಕಾರ್ಯಕರ್ತನಿಗೆ ಜೀವ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಫೋನ್ ಕರೆ ಮಾಡಿ ಹಿಂದೂ ಕಾರ್ಯಕರ್ತ ಪ್ರಶಾಂತ್ ರೈ ಎಂಬುವವರಿಗೆ ಬೆದರಿಕೆ ಹಾಕಿದ್ದಾನಂತೆ. ಪ್ರಶಾಂತ್ ರೈ, ಸಫ್ರಿದ್ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಫ್ರಿದ್ ಬಂಧನಕ್ಕೆ ಆಗ್ರಹಿಸಿ ಠಾಣೆ ಮುಂದೆ ಹಿಂದೂ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.