ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣ ನೆಪದಲ್ಲಿ ಎನ್​ಐಎ ದುರ್ಬಳಕೆ, ಮುಸ್ಲಿಂ ಮುಖಂಡರೆ ಟಾರ್ಗೆಟ್: ಪಿಎಫ್​ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 07, 2022 | 1:10 PM

ಬೆಳಗಾವಿಯ ಅರ್ಬಾಜ್, ಶಮೀರ್ ಕೇಸ್ NIAಗೆ ವಹಿಸಿಲ್ಲ. ಮುಸ್ಲಿಂ ಯುವಕರ ಹತ್ಯೆಯಲ್ಲಿ ಆರ್​​ಎಸ್​ಎಸ್​ ಕೈವಾಡ ಇದೆ. ವಿಧಾನಸಭಾ ಚುನಾವಣೆ ಮುಂದಿಟ್ಟು ನಿನ್ನೆ 30ಕ್ಕೂ ಅಧಿಕ ಕಡೆ ಎನ್​​ಐಎ ಅಧಿಕಾರಿಗಳಿಂದ ದಾಳಿ‌ ಮಾಡಿದ್ದಾರೆ.

ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣ ನೆಪದಲ್ಲಿ ಎನ್​ಐಎ ದುರ್ಬಳಕೆ, ಮುಸ್ಲಿಂ ಮುಖಂಡರೆ ಟಾರ್ಗೆಟ್: ಪಿಎಫ್​ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್
ಮೃತ ಪ್ರವೀಣ್ ನೆಟ್ಟಾರು
Follow us on

ಮಂಗಳೂರು: ಪ್ರವೀಣ್ ಕೊಲೆ ಪ್ರಕರಣ ನೆಪದಲ್ಲಿ ಎನ್​ಐಎ ದುರ್ಬಳಕೆ ಮಾಡುತ್ತಿದೆ. PFI ನಾಯಕರು ಅನ್ನೋ ಕಾರಣಕ್ಕೆ ಟಾರ್ಗೆಟ್ ಮಾಡ್ತಿದ್ದಾರೆ. ಮುಸ್ಲಿಂ ಮುಖಂಡರನ್ನ ಟಾರ್ಗೆಟ್ ಮಾಡಲಾಗ್ತಿದೆ ಎಂದು ನಗರದಲ್ಲಿ ಪಿಎಫ್​ಐ ಮುಖಂಡರ ಸುದ್ದಿಗೋಷ್ಠಿ ಪಿಎಫ್​ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಹೇಳಿಕೆ ನೀಡಿದರು. ಶಿವಮೊಗ್ಗದ ಹರ್ಷ, ಪ್ರವೀಣ್ ಕೇಸ್ NIAಗೆ ವಹಿಸಲಾಗಿದೆ. ಆದರೆ ಇದರಲ್ಲಿ ಸರ್ಕಾರ ದ್ವಿಮುಖ ನೀತಿ ಅನುಸರಿಸ್ತಿದೆ. ಬೆಳಗಾವಿಯ ಅರ್ಬಾಜ್, ಶಮೀರ್ ಕೇಸ್ NIAಗೆ ವಹಿಸಿಲ್ಲ. ಮುಸ್ಲಿಂ ಯುವಕರ ಹತ್ಯೆಯಲ್ಲಿ ಆರ್​​ಎಸ್​ಎಸ್​ ಕೈವಾಡ ಇದೆ. ವಿಧಾನಸಭಾ ಚುನಾವಣೆ ಮುಂದಿಟ್ಟು ನಿನ್ನೆ 30ಕ್ಕೂ ಅಧಿಕ ಕಡೆ ಎನ್​​ಐಎ ಅಧಿಕಾರಿಗಳಿಂದ ದಾಳಿ‌ ಮಾಡಿದ್ದಾರೆ. ಬಿಜೆಪಿ ಸರ್ಕಾರ ವೈಫಲ್ಯತೆ‌ ಮುಚ್ಚಿ ಹಾಕಲು ಎನ್ಐಎ ದಾಳಿ ಮಾಡಿದ್ದು, ಪಿಎಫ್​ಐ ವಿರುದ್ಧ NIA, ಇಡಿ ಛೂಬಿಟ್ಟು ಕಿರುಕುಳ ನೀಡ್ತಿದ್ದಾರೆ ಎಂದು ಆರೋಪಿಸಿದರು.

ಪ್ರವೀಣ್ ‌ನೆಟ್ಟಾರು ಪ್ರಕರಣ ಸ್ಥಳೀಯ ಮಟ್ಟದ ಪ್ರತೀಕಾರದ ಪ್ರಕರಣ. ಸ್ಥಳೀಯ ಪೊಲೀಸರೇ ಇದರ ಆರೋಪಿಗಳನ್ನ ಬಂಧಿಸಿದ್ದಾರೆ. ಈ ಘಟನೆಯನ್ನ ಭಯೋತ್ಪಾದನೆ ಘಟನೆ ಅಂತ ತಿರುಚಲು ಎನ್.ಎ.ಗೆ ಅಸೈನ್ ಮೆಂಟ್ ಕೊಡಲಾಗಿದೆ. ಎನ್.ಐ.ಎ ದಾಳಿ ವೇಳೆ ಭಯೋತ್ಪಾದಕನ ಹಿಡಿಯೋ ರೀತಿ ವಾತಾವರಣ ಸೃಷ್ಟಿಸಲಾಗಿದೆ. ಪ್ರವೀಣ್ ಕೇಸ್ ಅಂತಾರಾಜ್ಯ ನಂಟಿನ ಕೇಸ್ ಅಂತ ಗೃಹ ಸಚಿವರು ಹೇಳಿದ್ದರು. ಆದರೆ ಆರೋಪಿಗಳ ಬಂಧನ ಆದ ನಂತರ ಅದು ಸ್ಥಳೀಯರು ಅಂತ ಗೊತ್ತಾಗಿದೆ. ನಾವು ಇದನ್ನ ಕಾನೂನಾತ್ಮಕವಾಗಿ ಎದುರಿಸಲಿದ್ದೇವೆ. ಸರ್ಕಾರಕ್ಕೆ ಪ್ರವೀಣ್ ಕೇಸಲ್ಲಿ ಮಾತ್ರ ಯಾಕೆ ಆಸಕ್ತಿ? ಮಸೂದ್ ಮತ್ತು ಫಾಜಿಲ್ ಕೇಸ್‌ನಲ್ಲಿ ಯಾಕಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣ: ಪುತ್ತೂರು, ಸುಳ್ಯದ ಹಲವೆಡೆ ಎನ್​ಐಎ ದಾಳಿ

ಪ್ರವೀಣ್, ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಹತ್ಯೆ‌ ನಡೆದಿದೆ ಅಂತ ಮಾಧ್ಯಮಗಳಲ್ಲಿ ಬಂದಿದೆ. ನಮ್ಮ ತಾಲೂಕು ಘಟಕದ ಕೆಲ ನಾಯಕರ ಮನೆಗಳಿಗೆ ದಾಳಿ ಮಾಡಿದ್ದಾರೆ. ಕೆಲ ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆದಿದ್ದಾರೆ ಅಂತ ಎನ್.ಐ.ಎ ಹೇಳಿದೆ. ಆದರೆ ಅದನ್ನ ಬೆಂಗಳೂರಿನಿಂದ ತಂದ್ರಾ? ದೆಹಲಿಯಿಂದ ತಂದ್ರಾ ಅಂತ ಎನ್ ಐಎ ಹೇಳಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ಹಾಲ್ ಗಳಲ್ಲಿ ನಮ್ಮ ಸಭೆಗಳು ನಡೆಯುತ್ತೆ. ಅದೇ ರೀತಿ ಪೊಲೀಸರಿಗೆ ‌ಮಾಹಿತಿ ನೀಡಿ ಮಿತ್ತೂರಿನ ಕಮ್ಯುನಿಟಿ ಹಾಲ್​ನಲ್ಲೂ ಸಭೆ ಮಾಡಿದ್ದೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.