ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿ ಯುವತಿಯನ್ನು ಕೊಚ್ಚಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಜಯಶ್ರೀ ಕೊಲೆಯಾದ 24 ಗಂಟೆಯೊಳಗೆ ಸಂಪ್ಯಾ ಗ್ರಾಮಾಂತರ ಠಾಣೆ ಪೊಲೀಸರು ಕನಕಮಜಲು ಗ್ರಾಮದ ನಿವಾಸಿ ಉಮೇಶ್ ಎನ್ನುವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಯಶ್ರೀ ದೂರ ಮಾಡಿದ್ದಕ್ಕೆ ಅಸಮಾಧಾನಗೊಂಡು ಕೊಲೆ ಮಾಡಿರುವುದಾಗಿ ಆರೋಪಿ ಉಮೇಶ್ ಪೊಲೀಸರ ತನಿಖೆ ವೇಲೆ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ: ಮಂಗಳೂರು: ಹಾಡಹಗಲೇ ಮನೆಗೆ ನುಗ್ಗಿ ಯುವತಿಗೆ ಚೂರಿ ಇರಿದು ಹತ್ಯೆ
ಕೆಲವು ದಿನಗಳಿಂದ ಜಯಶ್ರೀಯನ್ನು ಪ್ರೀತಿಸುತ್ತಿದ್ದ ಉಮೇಶ್, ಆಗಾಗ ಜಯಶ್ರೀ ಮನೆಗೆ ಬಂದು ಹೋಗುತ್ತಿದ್ದ. ಆದ್ರೆ, ಇಬ್ಬರ ನಡುವೆ ನಡುವೆ ಏನಾಗಿತ್ತೋ ಏನೋ 2022ರ ನವೆಂಬರ್ನಿಂದ ಜಯಶ್ರೀ ಉಮೇಶ್ನಿಂದ ದೂರವಾಗಿದ್ದಳು. ಇದರಿಂದ ಕೋಪಗೊಂಡಿದ್ದ ಉಮೇಶ್, ಇಂದು(ಜನವರಿ 17) ಆಕೆಯ ಮನೆಗೆ ನುಗ್ಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರಿನ ಕಂಪ ಮನೆಯಲ್ಲಿ ಯುವತಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿ ಚೂರಿಯಿಂದ ಇರಿದು ಜಯಶ್ರೀ (23) ಎಂಬ ಯುವತಿಯನ್ನು ಕೊಲೆ ಮಾಡಿದ್ದ. ವಿಷಯ ತಿಳಿದು ಸಂಪ್ಯಾ ಗ್ರಾಮಾಂತರ ಪೊಲೀಸರು, ಶ್ವಾನ ದಳ, ಬೆರಳಚ್ಚು ತಜ್ಞರ ತಂಡ ದೌಡಾಯಿಸಿದ್ದರು.
ಇನ್ನು ಮೃತ ಯುವತಿ ತಾಯಿ ಉಮೇಶ್ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಳು. ಇದೀಗ ಪೊಲೀಸ್ ತನಿಖೆ ವೇಳೆ ಉಮೇಶನೇ ಜಯಶ್ರೀಯನ್ನ ಕೊಚ್ಚಿ ಕೊಂದಿದ್ದಾನೆ ಎಂದು ತಿಳಿದುಬಂದಿದೆ.
Published On - 12:32 am, Wed, 18 January 23