ಪುತ್ತೂರಿನಲ್ಲೊಂದು ಅಮಾನವೀಯ ಘಟನೆ: ಮೃತ ಕಾರ್ಮಿಕನ ಶವ ರಸ್ತೆ ಬದಿ ಮಲಗಿಸಿ ಹೋದ ಮಾಲೀಕ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 18, 2024 | 12:29 PM

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಮೃತಪಟ್ಟ ಕೂಲಿ ಕಾರ್ಮಿಕನ ಶವವನ್ನು ಮಾಲೀಕ ರಸ್ತೆ ಬದಿ ಮಲಗಿಸಿ ಹೋಗಿರುವಂತಹ ಘಟನೆ ನಡೆದಿದೆ. ಸದ್ಯ ಈ ಘಟನೆ ಹಲವಾರು ಅನುಮಾನಗಳು ಹುಟ್ಟುಕೊಂಡಿವೆ. ಸದ್ಯ ತಲೆ ಮರೆಸಿಕೊಂಡಿರುವ ಮಾಲೀಕ ಬಂಧನಕ್ಕೆ ಜನರು ಆಗ್ರಹಿಸಿದ್ದಾರೆ.

ಪುತ್ತೂರಿನಲ್ಲೊಂದು ಅಮಾನವೀಯ ಘಟನೆ: ಮೃತ ಕಾರ್ಮಿಕನ ಶವ ರಸ್ತೆ ಬದಿ ಮಲಗಿಸಿ ಹೋದ ಮಾಲೀಕ
ಪುತ್ತೂರಿನಲ್ಲೊಂದು ಅಮಾನವೀಯ ಘಟನೆ: ಮೃತ ಕಾರ್ಮಿಕನ ಶವ ರಸ್ತೆ ಬದಿ ಮಲಗಿಸಿ ಹೋದ ಮಾಲೀಕ
Follow us on

ಮಂಗಳೂರು, ನವೆಂಬರ್​ 18: ಮೃತಪಟ್ಟ ಕೂಲಿ ಕಾರ್ಮಿಕನ (Labor) ಶವವನ್ನು ಮಾಲೀಕ ರಸ್ತೆ ಬದಿ ಮಲಗಿಸಿ ಹೋಗಿರುವಂತಹ ಅಮಾನವೀಯ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕಳೆದ  ಶನಿವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪುತ್ತೂರು ಚಿಕ್ಕಮೂಡ್ನೂರು ಗ್ರಾಮದ ಶಿವಪ್ಪ(70 ) ಮೃತ ಕಾರ್ಮಿಕ.

ಮೃತದೇಹ ಗಮನಿಸಿದ ಮಗಳು ಹಾಗೂ ಪತ್ನಿ

ಸಾಲ್ಮರ ತಾವ್ರೋ ಇಂಡಸ್ಟ್ರೀಸ್​ ಸಂಸ್ಥೆಯ ಮಾಲಕ ಹೆನ್ರಿ, ಗಾರೆ ಕೆಲಸಕ್ಕೆ ಕಾರ್ಮಿಕ ಶಿವಪ್ಪರನ್ನು ಕರೆಸಿಕೊಂಡಿದ್ದ. ಆದರೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಶಿವಪ್ಪ ಮೃತಪಟ್ಟಿದ್ದಾರೆ. ಬಳಿಕ ಮೃತದೇಹವನ್ನ ಪಿಕ್ ಅಪ್​ ವಾಹನದಲ್ಲಿ ತಂದು ಕುಟುಂಬದವರಿಗೆ ಮಾಹಿತಿ ನೀಡದೆ ಮನೆಯ ಪಕ್ಕದಲ್ಲೇ ಇರಿಸಿ ಹೋಗಿದ್ದಾರೆ. ಬಳಿಕ ರಸ್ತೆ ಬದಿಯಲ್ಲಿದ್ದ ಶಿವಪ್ಪ ಮೃತದೇಹವನ್ನು ಮಗಳು ಹಾಗೂ ಪತ್ನಿ ಗಮನಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ, ಕುಂದಾ ನಗರಿಯಲ್ಲಿ ಮತ್ತೊಂದು ಅಮಾನವೀಯ ಘಟನೆ

ಶಿವಪ್ಪ ಮೃತಪಟ್ಟಾಗ ಆಸ್ಪತ್ರೆಗೂ ಕರೆದುಕೊಂಡು ಹೋಗಿಲ್ಲ. ಹೀಗಾಗಿ ಘಟನೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮನೆಯವರಿಗೂ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಈ ಘಟನೆ ಬೆನ್ನಲ್ಲೇ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪುತ್ತೂರು ಶಾಸಕ ಅಶೋಕ್ ರೈ ದೌಡಾಯಿಸಿದ್ದಾರೆ.

ಮಾಲೀಕನ ಬಂಧನಕ್ಕೆ ಆಗ್ರಹ

ಈಗಾಗಲೇ ಆರೋಪಿ ಹೆನ್ರಿ ತಲೆ ಮರೆಸಿಕೊಂಡಿದ್ದು, ಮಾಲೀಕನನ್ನ ಬಂಧಿಸುವಂತೆ ದಲಿತ ಸಂಘಟನೆಗಳು ಆಗ್ರಹಿಸಿವೆ. ಇಂದು ಸಂಜೆಯೊಳಗೆ ಬಂಧಿಸದೇ ಇದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಿಡಿಲು ಬಡಿದು 14 ವರ್ಷದ ಬಾಲಕ ಸಾವು

ಜಿಲ್ಲೆಯ ಬಂಟ್ವಾಳದ ಕೆದಿಲ ಗ್ರಾಮ ಗಡಿಯಾರ ಎಂಬಲ್ಲಿ ಸಿಡಿಲು ಬಡಿದು 14 ವರ್ಷದ ಬಾಲಕ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಗಡಿಯಾರ ನಿವಾಸಿ ಸುಭೋದ್ (14) ಮೃತ ಬಾಲಕ. ನಿನ್ನೆ ಸಂಜೆ ಮನೆಯಂಗಳದಲ್ಲಿ ನಿಂತಿದ್ದ ವೇಳೆ ಸಿಡಿಲ ಆಘಾತಕ್ಕೊಳಗಾಗಿದ್ದ ಬಾಲಕ. ತಕ್ಷಣ ಪುತ್ತೂರಿನ‌ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವ ಮೊದಲೇ ಸಾವನ್ನಪ್ಪಿದ್ದಾನೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:22 pm, Mon, 18 November 24