RSS ಅಂದ್ರೆ ಅದು ಪಕ್ಕಾ ಹಿಂದೂ ಪರ ಸಂಘಟನೆಯಾಗಿದ್ದು, ಹಿಂದುತ್ವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಸಂಘಟನೆ. ಇನ್ನು ಹಿಂದೂ ಹಬ್ಬಗಳ ಆಚರಣೆ ವಿಚಾರ ಬಂದ್ರೆ ಈ ಸಂಘಟನೆ ಅದೆಷ್ಟು ಕಟ್ಟು ನಿಟ್ಟಾಗಿರಬಹುದು ಅಲ್ವಾ..? ಆದ್ರೆ ಮಂಗಳೂರಿನ ಸಂಘ ನಿಕೇತನದಲ್ಲಿ ಕಳೆದ ಕೆಲ ವರ್ಷದಿಂದ ಚಾಲ್ತಿಯಲ್ಲಿರೋ ಆ ಒಂದು ಪದ್ಧತಿ ಬಗ್ಗೆ ಅಚ್ಚರಿ ಪಡಲೇಬೇಕು. ಏನು ಆ ಅಚ್ಚರಿ ಇಲ್ಲಿದೆ ಡಿಟೈಲ್ಸ್.. ಗಣೇಶ ಚತುರ್ಥಿ.. ಸಾರ್ವಜನಿಕವಾಗಿ ಆಚರಿಸೋ ಈ ಹಬ್ಬಕ್ಕೆ ಇರೋ ಮಹತ್ವವೇ ಬೇರೆಯದು. ಸ್ವಾತಂತ್ರ್ಯ ಹೋರಾಟಕ್ಕೆ ಸಂಘಟನೆ ಉದ್ದೇಶದಿಂದ ಬಾಲಗಂಧರ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವಕ್ಕೆ ಜಾತಿ ಧರ್ಮಗಳ ಬೇದವಿಲ್ಲ. ಆದ್ರೆ ಅದ್ಯಾಕೋ ಹಲವೆಡೆ ಗಣೇಶ ಚತುರ್ಥಿಯ ಸಮಯದಲ್ಲಿ ಕೋಮು ದ್ವೇಶಗಳು ಭುಗಿಲೆದ್ದು ಗಲಾಟೆಗಳು ಕೂಡಾ ನಡೆಯುತ್ತದೆ. ಆದ್ರೆ ವಿಶೇಷ ಅಂದ್ರೆ ಹಿಂದುತ್ವದ ಭದ್ರಕೋಟೆ, RSSನ ಶಕ್ತಿ ಕೇಂದ್ರ ಮಂಗಳೂರಿನಲ್ಲಿ ಇದಕ್ಕೆ ಆಸ್ಪದ ನೀಡದೆ ಸಾಮರಸ್ಯಕ್ಕೆ ( Christian religious harmony) ಸಂಘ ಪರಿವಾರವೇ ಅಡಿಪಾಯ ಹಾಕಿದೆ.
ಶಕ್ತಿ ಕೇಂದ್ರ ಸಂಘ ನಿಕೇತನದಲ್ಲಿ ಆರಾಧಿಸುವ ಗಣೇಶನಿಗೆ ಪೂಜೆ ಸಲ್ಲಿಸಲು ಕ್ರೈಸ್ತ ಧರ್ಮೀಯರಿಗೆ ಅವಕಾಶ ಕಲ್ಪಿಸಲಾಗಿದೆ. ಇದು ಅಚ್ಚರಿಯ ವಿಷಯವೇ ಆದ್ರೂ ಇದು ಕಳೆದ ಕಲೆ ವರ್ಷಗಳಿಂದ ನಡೆಯುತ್ತಾ ಬಂದಿದೆ. ಬಾಲಗಂಗಾಧರ ತಿಲಕರ ಆಶಯದಂತೆ ಸಾರ್ವಜನಿಕ ಗಣಪತಿಯಿಂದ ಒಗ್ಗಟ್ಟು ಬೆಳೆಯುತ್ತೆ ಅನ್ನೋದನ್ನ ಇಲ್ಲಿ ತೋರಿಸಿಕೊಡಲಾಗಿದೆ ಎನ್ನುತ್ತಾರೆ ಡಾ ವಾಮನ್ ಶೆಣೈ, ದಕ್ಷಿಣ ಪ್ರಾಂತ ಸಂಘ ಚಾಲಕ.
ಸಂಘ ನಿಕೇತನದಲ್ಲಿ ಕಳೆದ 76 ವರ್ಷಗಳಿಂದ ಗಣೇಶೋತ್ಸವನ್ನ ಆಚರಿಸಿಕೊಂಡು ಬರಲಾಗ್ತಾ ಇದ್ದು, ಯಾವುದೇ ಗಲಾಟೆಗಳಿಗೆ ಆಸ್ಪದ ಇಲ್ಲದೆ ಅಚ್ಚುಕಟ್ಟಾಗಿ ನಡೆದುಕೊಂಡು ಬಂದಿದೆ. ಜಿಲ್ಲೆಯಲ್ಲಿ ಅದೆಷ್ಟೇ ಕೋಮು ಗಲಭೆಗಳು ನಡೆದಿದ್ದರೂ ಕೂಡಾ ಜಿಲ್ಲೆಯಲ್ಲಿ ಸಾಮರಸ್ಯ ಬಯಸೋ ಜನರಿಗೆ ಅದು ಅಡ್ಡಿಯಾಗಿಲ್ಲ. ಸಂಘ ಪರಿವಾರದ ಅದೆಷ್ಟೋ ಜನರು ಅನ್ಯ ಧರ್ಮೀಯರ ವಿರುದ್ಧ ಅವಹೇಳನಕಾರಿ ಮಾತನಾಡಿದ್ರೂ ಮತ್ತೊಂದೆಡೆ ಸಾಮರಸ್ಯದ ಮಾತುಗಳೂ ಕೇಳಿ ಬರುತ್ತಿತ್ತು.
ಇದಕ್ಕೆ ಸಾಕ್ಷಿಯಾಗಿ ಸಂಘ ಪರಿವಾರದ ಶಕ್ತಿ ಕೇಂದ್ರ ಸಂಘ ನಿಕೇತನದ ಗಣೇಶೋತ್ಸವಕ್ಕೆ ಕ್ರೈಸ್ತ ಸಮುದಾಯದ ನಿಯೋದ ಆಗಮಿಸಿದ್ದೇ ಸಾಕ್ಷಿ. ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಅವರ ಕಚೇರಿಯಿಂದಲೇ ಇಲ್ಲಿನ ಗಣಪತಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ಹೂವು ಹಣ್ಣು ಹಂಪಲು ನೀಡಿ ಗಣಪತಿಗೆ ಪ್ರಾರ್ಥನೆ ಕೂಡಾ ಸಲ್ಲಿಸಲಾಗಿದೆ. ಬಂದ ಕ್ರೈಸ್ತ ಸಮುದಾಯದವರನ್ನು ಸಂಘ ನಿಕೇತನದ ಪ್ರಮುಖರೇ ಗೌರವದಿಂದ ಬರಮಾಡಿ ಆತಿಥ್ಯ ನೀಡಿರುವುದು ಸಾರ್ವಜನಿಕ ಗಣೇಶೋತ್ಸವದ ಮಹತ್ವ ತೋರಿಸಿಕೊಟ್ಟಿದೆ ಎನ್ನುತ್ತಾರೆ ರಾಯ್ ಕಾಸ್ಪಿಲಿನ್, ಮಂಗಳೂರು ಬಿಷಪ್ ಹೌಸ್ ಪಿಆರ್ಒ
ಕಳೆದ ಹಲವು ವರ್ಷಗಳಿಂದ ಬಿಷಪ್ ಹೌಸ್ನ ಗುರುಗಳು ಸಂಘ ನಿಕೇತನದ ಗಣೇಶನಿಗೆ ಗೌರವ ಸಲ್ಲಿಸುವುದು ನಡೆದುಕೊಂಡು ಬಂದಿದೆ. ಯಾವುದೇ ದ್ವೇಶ ಭಾಷಣಗಳು ಸಂಘ ನಿಕೇತನ ಹಾಗೂ ಬಿಷಪ್ ಹೌಸ್ ಸಂಬಂಧವನ್ನು ಕೆಡಿಸಲು ಸಾದ್ಯವಾಗಿಲ್ಲ. ಒಟ್ಟಾರೆ ಹೇಳೋದಾದ್ರೆ ಹಿಂದುತ್ವದ ಪ್ರಯೋಗಶಾಲೆ ಅಂತ ಕರೆಸಿಕೊಂಡಿರೋ ಮಂಗಳೂರಿನಲ್ಲೆ ಇಂತಹ ಒಂದು ಸಾಮರಸ್ಯ ನಿಜಕ್ಕೂ ಮಾದರಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ