24 ವರ್ಷದಿಂದ ಯುಟಿ ಖಾದರ್ ಜೊತೆಗಿದ್ದ ಸಂತೋಷ್ ಶೆಟ್ಟಿ ಬಿಜೆಪಿಗೆ ಸೇರ್ಪಡೆ

| Updated By: preethi shettigar

Updated on: Mar 12, 2022 | 7:29 PM

ಮಾಜಿ ಸಚಿವ ಯು.ಟಿ.ಖಾದರ್ ಅತ್ಯಂತ ಭ್ರಷ್ಟ ರಾಜಕಾರಣಿ. ಖಾದರ್ ನಡವಳಿಕೆಯಿಂದ ಬೇಸತ್ತು ಬಿಜೆಪಿ ಸೇರುತ್ತಿದ್ದೇವೆ ಎಂದು ಯು.ಟಿ.ಖಾದರ್ ವಿರುದ್ಧ ಸಂತೋಷ್ ಶೆಟ್ಟಿ ಮಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

24 ವರ್ಷದಿಂದ ಯುಟಿ ಖಾದರ್ ಜೊತೆಗಿದ್ದ ಸಂತೋಷ್ ಶೆಟ್ಟಿ ಬಿಜೆಪಿಗೆ ಸೇರ್ಪಡೆ
ಶಾಸಕ ಯು.ಟಿ ಖಾದರ್ (ಸಂಗ್ರಹ ಚಿತ್ರ)
Follow us on

ಮಂಗಳೂರು: ಯು.ಟಿ. ಖಾದರ್ ಆಪ್ತ ಸಂತೋಷ್ ಶೆಟ್ಟಿ ಬಿಜೆಪಿ ಸೇರ್ಪಡೆಗೆ ನಿರ್ಧಾರ ಮಾಡಿದ್ದಾರೆ. ಮಾಜಿ ಸಚಿವ ಯು.ಟಿ.ಖಾದರ್ ಅತ್ಯಂತ ಭ್ರಷ್ಟ ರಾಜಕಾರಣಿ. ಖಾದರ್ ನಡವಳಿಕೆಯಿಂದ ಬೇಸತ್ತು ಬಿಜೆಪಿ ಸೇರುತ್ತಿದ್ದೇವೆ ಎಂದು ಯು.ಟಿ.ಖಾದರ್(U.T khadar) ವಿರುದ್ಧ ಸಂತೋಷ್ ಶೆಟ್ಟಿ(Santhosh Shetty) ಮಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಹಲವು ಕಾರ್ಯಕರ್ತರೊಂದಿಗೆ ಸಂತೋಷ್ ಶೆಟ್ಟಿ ಬಿಜೆಪಿ(BJP) ಸೇರ್ಪಡೆಯಾಗಿದ್ದಾರೆ. ಕಳೆದ 24 ವರ್ಷದಿಂದ ಖಾದರ್ ಜತೆಗಿದ್ದ ಸಂತೋಷ್ ಶೆಟ್ಟಿ ಇಂದು ದೂರಕ್ಕೆ ಸೇರಿದಿದ್ದಾರೆ.

ಖಾದರ್ ವಿರುದ್ಧ ಅಸಮಾಧಾನ ಹೊರ ಹಾಕಿದ ಸಂತೋಷ್ ಶೆಟ್ಟಿ

ಉಳ್ಳಾಲ(ಮಂಗಳೂರು) ಕ್ಷೇತ್ರದಲ್ಲಿ ಅಭಿವೃದ್ಧಿಯೇ ಆಗಿಲ್ಲ. ಅಲ್ಪ ಸ್ವಲ್ಪ ಅನುದಾನದ ಕಾಮಗಾರಿ ಮಾಡಿ ಫೋಸ್ ನೀಡಿದ್ದಾರೆ. ಅವರಿಗೆ ದೇಶದಾದ್ಯಂತ ಮನೆಯಿದೆ, ಆದರೆ ಬಡವರಿಗೆ ಮನೆಯಿಲ್ಲ. ಅಬ್ಬಕ್ಕ ನಾಡು ಎಂದು ಹೇಳುವ ಇವರು ಮಹಿಳಾ ಕಾಲೇಜು ಮಾಡಿಲ್ಲ. ಮದುವೆ ಮುಂಜಿ, ಮಕ್ಕಳ ತೊಟ್ಟಿಲು ಹಾಕುವ ಕಾರ್ಯದಲ್ಲಿ ಭಾಗಿಯಾಗುತ್ತಾರೆ ಎಂದು ಖಾದರ್ ವಿರುದ್ಧ ಸಂತೋಷ್ ಶೆಟ್ಟಿ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ:

ಗೋಹತ್ಯೆ ನಿಷೇಧ ಭಾವನಾತ್ಮಕ ವಿಷಯ, ಲವ್​ ಜಿಹಾದ್​ ಕಾಯ್ದೆಯಲ್ಲಿ ಏನಿದೆಯೋ ಗೊತ್ತಿಲ್ಲ: ಯು.ಟಿ.ಖಾದರ್​

ಸಾವರ್ಕರ್ ಬದುಕಿದ್ದರೆ ನನ್ನಂತೆ ಅವರೂ ಪ್ರತಿಪಾದಿಸುತ್ತಿದ್ದರು; ಟಿಪ್ಪು ಎಕ್ಸ್​ಪ್ರೆಸ್ ರೈಲು ಹೆಸರಿನ ಬಗ್ಗೆ ಯುಟಿ ಖಾದರ್ ಹೇಳಿಕೆ

Published On - 7:28 pm, Sat, 12 March 22