ಸಾವರ್ಕರ್ ಬದುಕಿದ್ದರೆ ನನ್ನಂತೆ ಅವರೂ ಪ್ರತಿಪಾದಿಸುತ್ತಿದ್ದರು; ಟಿಪ್ಪು ಎಕ್ಸ್ಪ್ರೆಸ್ ರೈಲು ಹೆಸರಿನ ಬಗ್ಗೆ ಯುಟಿ ಖಾದರ್ ಹೇಳಿಕೆ
ನಾನೇನೋ ಉಳ್ಳಾಲದ ಮುಲ್ಲಾ. ಬುದ್ಧಿವಂತ ಸಂಸದರಾಗಿರುವ ಪ್ರತಾಪ್ ಸಿಂಹ ಒಪ್ಪುತ್ತಾರೋ, ಸಾವರ್ಕರ್ರನ್ನ ಸಂಸದರು ಒಪ್ಪುತ್ತಾರೋ ಇಲ್ವೋ ಹೇಳಲಿ ಎಂದು ಮಾಜಿ ಸಚಿವ ಯು.ಟಿ. ಖಾದರ್ರಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ಬೆಂಗಳೂರು: ನನ್ನನ್ನು ಮುಲ್ಲಾ ಎಂದು ಕರೆದರೆ ನಾನು ಸಂತೋಷಪಡ್ತೇನೆ. ಮುಲ್ಲಾ ಎಂದು ಪ್ರತಾಪ್ ಸಿಂಹ ಕರೆದರೆ ಖುಷಿಪಡುತ್ತೇನೆ. ಏಕೆಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ಮುಲ್ಲಾಗಳೂ ಭಾಗಿ ಆಗಿದ್ದರು. ನೂರಾರು ಮುಲ್ಲಾಗಳು ಗಾಂಧೀಜಿಯವರಿಗೆ ಹೆಗಲಾಗಿದ್ರು ಎಂದು ಮಾಜಿ ಸಚಿವ ಹಾಗೂ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಸೋಮವಾರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಮುಲ್ಲಾಗಳು, ಮೌಲ್ವಿಗಳೂ ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಿಟ್ಟಿದ್ದಾರೆ. ಸಾವರ್ಕರ್ ಬದುಕಿದ್ದರೆ ನನ್ನಂತೆ ಅವರೂ ಪ್ರತಿಪಾದಿಸ್ತಿದ್ದರು ಎಂದು ಹೇಳಿದ್ದಾರೆ.
ಮೈಸೂರು ರೈಲಿಗೆ ಟಿಪ್ಪು ಹೆಸರಿಡಲು ಸಾವರ್ಕರ್ ಅವರೂ ಹೇಳುತ್ತಿದ್ರು. ಪುಸ್ತಕದಲ್ಲಿ ಸಾವರ್ಕರ್ ಮುಲ್ಲಾಗಳ ಬಗ್ಗೆಯೂ ಬರೆಯುತ್ತಾರೆ. ನಾನೇನೋ ಉಳ್ಳಾಲದ ಮುಲ್ಲಾ. ಬುದ್ಧಿವಂತ ಸಂಸದರಾಗಿರುವ ಪ್ರತಾಪ್ ಸಿಂಹ ಒಪ್ಪುತ್ತಾರೋ, ಸಾವರ್ಕರ್ರನ್ನ ಸಂಸದರು ಒಪ್ಪುತ್ತಾರೋ ಇಲ್ವೋ ಹೇಳಲಿ ಎಂದು ಮಾಜಿ ಸಚಿವ ಯು.ಟಿ. ಖಾದರ್ರಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
ಈಗೇನಾದರೂ ಸಾವರ್ಕರ್ ಬದುಕಿದ್ದರೆ ಮೈಸೂರು ರೈಲಿಗೆ ಟಿಪ್ಪು ಎಕ್ಸ್ ಪ್ರೆಸ್ ಎಂದು ಹೆಸರು ಇರಬೇಕು ಎಂಬುದನ್ನು ನನ್ನಂತೆ ಅವರೂ ಪ್ರತಿಪಾದಿಸುತ್ತಿದ್ದರು. “ಈ ದೇಶಕ್ಕೆ ಬ್ರಿಟೀಷರಿಂದ ಅಪಾಯ ಇದೆ ಎಂಬುದನ್ನು ಮೊದಲು ಅರಿತವರೇ ಹೈದರಾಲಿ ಮತ್ತು ಟಿಪ್ಪು” ಎಂದು ಸಾವರ್ಕರ್ ಹೇಳುತ್ತಾರೆ. ( ಪುಸ್ತಕ : ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ 1857- ಲೇಖಕರು : ಸಾವರ್ಕರ್) ಅದೇ ಪುಸ್ತಕದಲ್ಲಿ ಸಾವರ್ಕರ್ ಮುಲ್ಲಾಗಳ ಬಗ್ಗೆಯೂ ಬರೆಯುತ್ತಾರೆ. “ಮುಲ್ಲಾಗಳು ಭೋದಿಸಿದ, ಬ್ರಾಹ್ಮಣರು ಆಶೀರ್ವಾದಿಸಿದ ದೆಹಲಿಯ ಮಸೀದಿಗಳು ಮತ್ತು ಬನಾರಸ್ ದೇವಸ್ಥಾನಗಳಿಂದ ಪ್ರಾರ್ಥನೆ ಮತ್ತು ತತ್ವಗಳು ಯಾವುದು? ಅದೇ ಸ್ವಧರ್ಮ ಮತ್ತು ಸ್ವರಾಜ್” ಎಂದು ಬರೆಯುತ್ತಾರೆ ಎಂದು ಖಾದರ್ ಹೇಳಿದ್ದಾರೆ.
ಹಿಜಾಬ್ ಬಿಟ್ಟು ಕಿತಾಬ್ ಕೇಳಿ ಎಂದಿದ್ದ ಪ್ರತಾಪ್ ಸಿಂಹ ಹೇಳಿಕೆ ಬಗ್ಗೆ ಯು.ಟಿ. ಖಾದರ್ ವಾಗ್ದಾಳಿ ನಡೆಸಿದ್ದರು. ಸಂಸದ ಪ್ರತಾಪ್ ಸಿಂಹನಂತಹ ಮೂರ್ಖ ಯಾರೂ ಇಲ್ಲ. ತಂದೆ ಮುಖ್ಯನಾ?, ತಾಯಿ ಮುಖ್ಯನಾ ಅಂತ ಕೇಳಲು ಆಗುತ್ತಾ. ಮೂರ್ಖರ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ? ಊಟ ಬೇಕಾ?, ನೀರು ಬೇಕಾ ಅಂದ್ರೆ ಆಗುತ್ತಾ? ನೀವು ಪಾರಂಪರಿಕ, ಐತಿಹಾಸಿಕ ಮೈಸೂರು ಸಂಸದರು. ಮೈಸೂರಿನ ಘನತೆ ಉಳಿಸಿ, ಅದಕ್ಕೆ ಕಪ್ಪುಚುಕ್ಕೆ ತರಬೇಡಿ. ಸಾಮಾನ್ಯವಾಗಿ ಎಲ್ಲರೂ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ. ಆದರೆ ಸಂಸದ ಪ್ರತಾಪ್‌ಸಿಂಹ ಸಮಸ್ಯೆಗೆ ಪರಿಹಾರ ಸಿಕ್ಕಾಗ ಸಮಸ್ಯೆ ಸೃಷ್ಟಿ ಮಾಡುತ್ತಾರೆ ಎಂದು ಕಾಂಗ್ರೆಸ್ ಮಾಜಿ ಸಚಿವ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಎಲ್ಲರೂ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ; ಪ್ರತಾಪ್‌ಸಿಂಹ ಸಮಸ್ಯೆ ಸೃಷ್ಟಿ ಮಾಡುತ್ತಾರೆ: ಯುಟಿ ಖಾದರ್ ಟೀಕೆ
ಇದನ್ನೂ ಓದಿ: ಶಾಸಕನಿಂದ ವಿಧಾನಸಭೆ ವಿಪಕ್ಷ ಉಪನಾಯಕನವರೆಗೆ; ಯುಟಿ ಖಾದರ್ ರಾಜಕೀಯ ಇತಿಹಾಸದ ಸಮಗ್ರ ವಿವರ ಇಲ್ಲಿದೆ
Published On - 8:08 pm, Mon, 14 February 22