ಗೋಹತ್ಯೆ ನಿಷೇಧ ಭಾವನಾತ್ಮಕ ವಿಷಯ, ಲವ್ ಜಿಹಾದ್ ಕಾಯ್ದೆಯಲ್ಲಿ ಏನಿದೆಯೋ ಗೊತ್ತಿಲ್ಲ: ಯು.ಟಿ.ಖಾದರ್
ಜನರ ಸಮಸ್ಯೆಗಳಿಗೆ ಗಮನ ಕೊಡುವುದು ಬಿಟ್ಟು ಲವ್ ಜಿಹಾದ್ ನಿಷೇಧ, ಗೋಹತ್ಯೆ ತಡೆ ಕಾಯ್ದೆ ತರಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಕ್ಷೇಪಿಸಿದರು.
ಬೆಂಗಳೂರು: ಜನರಿಗೆ ರೇಷನ್ ಕಾರ್ಡ್ ಸಿಗುತ್ತಿಲ್ಲ, ಪರಿಹಾರ ಕೊಡುತ್ತಿಲ್ಲ. ಉದ್ಯೋಗ ಸೃಷ್ಟಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆದರೆ ಇದನ್ನೆಲ್ಲಾ ಬಿಟ್ಟು ಲವ್ ಜಿಹಾದ್, ಗೋಹತ್ಯೆ ನಿಷೇಧ ಕಾಯ್ದೆ ತರಲು ಮುಂದಾಗಿದ್ದಾರೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿ, ಈಗಾಗಲೇ ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ತಂದಿದ್ದಾರೆ. ಈಗ ಲವ್ ಜಿಹಾದ್ ನಿಷೇಧ, ಗೋಹತ್ಯೆ ತಡೆ ಕಾಯ್ದೆ ಜಾರಿ ಮಾಡಲು ಹೊರಟಿದ್ದಾರೆ. ಗೋಹತ್ಯೆ ನಿಷೇಧ ಭಾವನಾತ್ಮಕ ವಿಚಾರ ಅಲ್ಲವೇ ಎಂದು ಖಾದರ್ ಪ್ರಶ್ನಿಸಿದರು.
ಅಷ್ಟಕ್ಕೂ ಗೋ ಹತ್ಯೆ ನಿಷೇಧ ಕರ್ನಾಟಕದಲ್ಲಿ ಮಾತ್ರ ಯಾಕೆ? ಗೋವಾ, ಮಿಜೋರಾಂ, ಕೇರಳದಲ್ಲಿ ತರಲು ಕೇಂದ್ರ ಸರ್ಕಾರವೇಕೆ ಮನಸು ಮಾಡುತ್ತಿಲ್ಲ? ಎಲ್ಲದಕ್ಕೂ ಒನ್ ನೇಷನ್ ಎನ್ನುವವರು ಈ ವಿಚಾರಕ್ಕೂ ಅನ್ವಯಿಸಲಿ. ಎಲ್ಲ ಕಡೆ ಒಂದೇ ಕಾನೂನು ತರಲಿ. ಅಲ್ಲೆಲ್ಲ ತಿನ್ನಲು ಬಿಟ್ಟು, ಇಲ್ಲಿ ಕಾನೂನು ತರುತ್ತೇವೆ ಅಂದ್ರೆ ಹೇಗೆ ಎಂದು ಕೇಳಿದರು.
ಲವ್ ಜಿಹಾದ್ ಕಾಯ್ದೆ ತರುತ್ತೇವೆ ಎನ್ನುತ್ತಿದ್ದಾರೆ. ಅದರಲ್ಲಿ ಏನಿದೆ ಎಂಬುದನ್ನು ಮೊದಲು ನೋಡಬೇಕಲ್ಲ. ಅಷ್ಟಕ್ಕೂ ಜಿಹಾದ್ ಅನ್ನೋದು ಅರೆಬಿಕ್ ಶಬ್ದ. ಇವರು ಯಾಕೆ ಅದನ್ನು ಬಳಸುತ್ತಾರೋ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಈ ಬಾರಿ ಲವ್ ಜಿಹಾದೂ ಇಲ್ಲ, ಡವ್ ಜಿಹಾದೂ ಇಲ್ಲ.. ‘ಸಾಮ್ರಾಟ್’ ಅಶೋಕ್ ಸ್ಪಷ್ಟನೆ
ಇಂದಿನಿಂದ 7 ದಿನಗಳ ಕಾಲ ಚಳಿಗಾಲದ ಅಧಿವೇಶನ: ಮಂಡನೆಯಾಗತ್ತಾ ಲವ್ ಜಿಹಾದ್, ಗೋ ಹತ್ಯೆ ನಿಷೇಧ ಕಾಯ್ದೆ?