ಸೋಮೇಶ್ವರ ಪುರಸಭೆ ಚುನಾವಣೆ‌ ಫಲಿತಾಂಶ: ತಂಗಿ ವಿರುದ್ಧ ಅಕ್ಕ ಸೋಲು, ಪತ್ನಿಗೆ ಗೆಲುವು, ಒಂದು ಮತದಿಂದ ಸೋತ ಪತಿ!

| Updated By: ವಿವೇಕ ಬಿರಾದಾರ

Updated on: Dec 30, 2023 | 12:43 PM

ಸೋಮೇಶ್ವರ ಪುರಸಭೆ ಚುನಾವಣೆಯಲ್ಲಿ ಒಟ್ಟು 23 ಸ್ಥಾನಗಳಿಗೆ 50 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಪುರಸಭೆಯ ಎಲ್ಲಾ 23 ಸ್ಥಾನಗಳಿಗೆ ಸ್ಪರ್ಧಿಸಿದ್ದ ಬಿಜೆಪಿಯ 16 ಅಭ್ಯರ್ಥಿಗಳು ಜಯಗಳಿಸಿದ್ದು, 22 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್​ನ ಏಳು ಅರ್ಭ್ಯರ್ಥಿಗಳು ವಿಜಯಶಾಲಿಯಾಗಿದ್ದಾರೆ. ಈ ಪುರಸಭೆ ಚುನಾವಣೆಯಲ್ಲಿ ಸಹೋದರಿಯರು ಮತ್ತು ದಂಪತಿ ಸ್ಪರ್ಧಿಸಿದ್ದರು.

ಸೋಮೇಶ್ವರ ಪುರಸಭೆ ಚುನಾವಣೆ‌ ಫಲಿತಾಂಶ: ತಂಗಿ ವಿರುದ್ಧ ಅಕ್ಕ ಸೋಲು, ಪತ್ನಿಗೆ ಗೆಲುವು, ಒಂದು ಮತದಿಂದ ಸೋತ ಪತಿ!
ಬಿಜೆಪಿ ಅಭ್ಯರ್ಥಿ ಸ್ವಪ್ನ ಶೆಟ್ಟಿ
Follow us on

ಮಂಗಳೂರು, ಡಿಸೆಂಬರ್​ 30: ಸೋಮೇಶ್ವರ (Someshwar) ಗ್ರಾಮ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಇದೆ ಮೊದಲ ಬಾರಿಗೆ ಚುನಾವಣೆ (Election) ನಡೆದಿದೆ. ಡಿಸೆಂಬರ್​ 27 ರಂದು ಚುನಾವಣೆ ನಡೆದಿದ್ದು, ಇಂದು (ಡಿ.30) ಫಲಿತಾಂಶ ಪ್ರಕಟವಾಗಿದೆ. ಈ ಚುನಾವಣೆಯಲ್ಲಿ ಎರಡು ಅಚ್ಚರಿಯ ಸಂಗತಿ ನಡೆದಿವೆ. ದಂಪತಿ ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿಗಳಾಗಿ ಎರಡು ವಾರ್ಡ್​ಗಳಲ್ಲಿ ಸ್ಪರ್ಧಿಸಿದ್ದರು. ಇದೀಗ ಹೊರಬಿದ್ದ ಫಲಿತಾಂಶದಲ್ಲಿ ಒಂದು ವಾರ್ಡ್​​ನಲ್ಲಿ​ ಪತ್ನಿ ಗೆಲುವು ಸಾಧಿಸಿದ್ದರೇ, ಮತ್ತೊಂದು ವಾರ್ಡ್​​ನಲ್ಲಿ ಪತಿ ಸೋತಿದ್ದಾರೆ. ಪತ್ನಿ ಅಮೀನಾ ಬಶೀರ್ ವಿಜಯಪತಾಕೆ ಹಾರಿಸಿದರೇ, ಪತಿ ಬಶೀರ್ ಮುಂಡೋಳಿ ಒಂದು ಮತದ ಅಂತರದಿಂದ ಸೋತಿದ್ದಾರೆ.

ಇದೇ ಸೋಮವೇಶ್ವರ ಪುರಸಭೆ ಚುನಾವಣೆಯಲ್ಲಿ ಅಕ್ಕ-ತಂಗಿಯರು ಸ್ಪರ್ಧಿಸಿದ್ದರು. ಪುರಸಭೆಯ ಮೂರನೇ ವಾರ್ಡ್​​ ಲಕ್ಷ್ಮಿಗುಡ್ಡೆ ಪ್ರಕಾಶ್​ ನಗರದಲ್ಲಿ ಸಹೋದರಿಯರ ನಡುವೆ ಪೈಪೋಟಿ ಏರ್ಪಟ್ಟಿತ್ತು. ತಂಗಿ, ಬಿಜೆಪಿ ಅಭ್ಯರ್ಥಿ ಸ್ವಪ್ನ ಶೆಟ್ಟಿ ಅವರು ಅಕ್ಕ, ಕಾಂಗ್ರೆಸ್ ಬೆಂಬಲಿತ ಸಿಪಿಐಎಂ ಅಭ್ಯರ್ಥಿ ಸೌಮ್ಯ ಎಸ್ ಪಿಲಾರ್ ಎಂದು ವಿಜಯಶಾಲಿಯಾಗಿದ್ದಾರೆ.

ಇದನ್ನೂ ಓದಿ: ಜೆಡಿಎಸ್​ ಭದ್ರಕೋಟೆ ಹೊಳೆನರಸೀಪುರ ಪುರಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಗೆಲುವು

ಬಿಜೆಪಿಯ ಸ್ವಪ್ನ ಶೆಟ್ಟಿ ಅವರಿಗೆ 340 ಮತಗಳು ಬಿದ್ದಿವೆ. ಇನ್ನು ಸಿಪಿಐಎಂ ಅಭ್ಯರ್ಥಿ ಸೌಮ್ಯಾ ಅವರು 153 ಮತಗಳನ್ನು ಸಂಪಾದಿಸಿಕೊಂಡಿದ್ದಾರೆ.

ಸೋಮೇಶ್ವರ ಪುರಸಭೆ ಚುನಾವಣೆಯಲ್ಲಿ ಒಟ್ಟು 23 ಸ್ಥಾನಗಳಿಗೆ 50 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಪುರಸಭೆಯ ಎಲ್ಲಾ 23 ಸ್ಥಾನಗಳಿಗೆ ಸ್ಪರ್ಧಿಸಿದ್ದ ಬಿಜೆಪಿಯ 16 ಅಭ್ಯರ್ಥಿಗಳು ಜಯಗಳಿಸಿದ್ದು, 22 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್​ನ ಏಳು ಅರ್ಭ್ಯರ್ಥಿಗಳು ವಿಜಯಶಾಲಿಯಾಗಿದ್ದಾರೆ. 18 ಕಡೆಗಳಲ್ಲಿ ಕಾಂಗ್ರೆಸ್​-ಬಿಜೆಪಿ ಅಭ್ಯರ್ಥಿಗಳ ನಡುವೆ ನೇರಾ-ನೇರಾ ಸ್ಪರ್ಧೆಯಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:43 pm, Sat, 30 December 23