ದಕ್ಷಿಣ ಕನ್ನಡ, ಸೆಪ್ಟೆಂಬರ್ 1: ಚಿರತೆಯೊಂದು (Leopard) ಬಲೆಗೆ ಸಿಲುಕಿ ಸಾವನ್ನಪ್ಪಿರುವಂತ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಣ್ಯ ವಲಯದ ಅಜ್ಜಾವರ ಸಮೀಪದ ಪೆಡ್ಡಂಬೈಲು ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಅರಣ್ಯ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಪೆಡ್ಡಂಬೈಲು ನಿವಾಸಿಗಳಾದ ಜಯರಾಮ ರೈ (41) ಮತ್ತು ಪೃಥ್ವಿ ರಾಜ್ (32) ಬಂಧಿತರು. ಕೃಷಿ ಜಮೀನಿನಲ್ಲಿ ಚಿರತೆ ಸತ್ತಿದೆ ಎಂದು ಗ್ರಾಮಸ್ಥರು ನೀಡಿದ ಮಾಹಿತಿ ಆಧರಿಸಿ ಕರ್ನಾಟಕ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಸೆಕ್ಷನ್ 9, 39 ಮತ್ತು 51 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ.
ಪ್ರತಿದಿನ ತಮ್ಮ ಬೆಳೆಗಳನ್ನು ನಾಶಪಡಿಸುತ್ತಿರುವ ಕಾಡುಹಂದಿಗಳನ್ನು ಹಿಡಿಯಲು ರೈತರು ತಮ್ಮ ಭತ್ತದ ಗದ್ದೆಗಳ ಬೇಲಿಗಳಿಗೆ ಬಲೆ ಹಾಕಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕುಮಟಾದಲ್ಲಿ ಪತ್ತೆಯಾಯ್ತು ಭಾರತದಲ್ಲೇ ಅತೀ ದೊಡ್ಡ ಬಿಳಿ ಹೆಬ್ಬಾವು; ಇಲ್ಲಿದೆ ವಿಡಿಯೋ
ಆಗಸ್ಟ್ 28 ರ ರಾತ್ರಿ ಎರಡು ವರ್ಷದ ಚಿರತೆಯೊಂದು ಬಲೆಗೆ ಸಿಕ್ಕಿಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದೆ. ಘಟನೆಯ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಬಳಿಕ ಹತ್ತಿರದ ಹಳ್ಳಿಯೊಂದರಲ್ಲಿ ಆರೋಪಿಗಳನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಹಲವು ತಿಂಗಳುಗಳಿಂದ ಕಾಡುಹಂದಿಗಳ ಹಾವಳಿಯಿಂದ ಬೇಸತ್ತಿದ್ದು, ಈ ಕುರಿತಾಗಿ ಅರಣ್ಯಾಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತ ವಿಶ್ವನಾಥ ಪೂಜಾರಿ ಎನ್ನುವವರು ದೂರಿದ್ದಾರೆ. ಹಿಂಡು ಹಿಂಡಾಗಿ ಪ್ರತಿದಿನ ಬರುವ ಕಾಡುಹಂದಿಗಳು ನಾವು ಬೆಳೆದ ಬೆಳೆಗಳನ್ನು ಸಂಫೂರ್ಣವಾಗಿ ನಾಶಮಾಡುತ್ತಿವೆ. ಇಷ್ಟೇ ಅಲ್ಲದೆ, ಕಾಡಾನೆಗಳ ಹಾವಳಯನ್ನು ಸಹ ಎದುರಿಸಬೇಕಾದ ಪರಿಸ್ಥಿತಿ ಇದೆ. ಆದರೆ ಇಲಾಖೆಯಿಂದ ನೀಡವ ಪರಿಹಾರ ಮಾತ್ರ ಕಡಿಮೆ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಹಾಸನ: ಚಿಕಿತ್ಸೆ ನೀಡಲು ಸೆರೆ ಹಿಡಿಯುತ್ತಿದ್ದಾಗ ಆನೆ ದಾಳಿ, ಮಲೆನಾಡ ಶಾರ್ಪ್ ಶೂಟರ್ ಸಾವು
ಸುಳ್ಯ ತಾಲೂಕಿನಲ್ಲಿ ಚಿರತೆಗಳು ಗ್ರಾಮಸ್ಥರಿಗೆ ತೊಂದರೆ ನೀಡುತ್ತಿಲ್ಲ ಮತ್ತು ಆರೋಪಿಗಳಿಗೆ ಚಿರತೆಯನ್ನು ಕೊಲ್ಲುವ ಯಾವ ಉದ್ದೇಶವಿರಲಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಮಂಜುನಾಥ್ ಹೇಳಿರುವುದಾಗಿ ಹಿಂದೂಸ್ತಾನ ಟೈಮ್ ವರದಿ ಮಾಡಿದೆ. ಆದಾಗ್ಯೂ, ಪ್ರಾಣಿಗಳನ್ನು ಕೊಲ್ಲುವುದು ಗಂಭೀರ ಅಪರಾಧವಾಗಿದೆ.
ಕಾಡುಹಂದಿಗಳನ್ನು ನಿಯಂತ್ರಿಸಲು ರೈತರು ಅರ್ಜಿ ಸಲ್ಲಿಸಿದರೆ ಅನುಮತಿ ನೀಡಲು ಇಲಾಖೆ ಸಿದ್ಧವಿದೆ. ಆದರೆ ಪ್ರಾಣಿಗಳಿಂದ ಉಂಟಾಗುವ ಬೆಳೆ ಹಾನಿಯನ್ನು ತಪ್ಪಿಸಲು ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ತಪ್ಪು ಎಂದು ನಾವು ರೈತರಿಗೆ ಮನವರಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:35 am, Fri, 1 September 23