ಮಂಗಳೂರು ಮಳಲಿ ಮಸೀದಿ ಬಳಿ ಇಂದು ತಾಂಬೂಲ ಪ್ರಶ್ನೆ; ನಿಷೇಧಾಜ್ಞೆ ಜಾರಿ

| Updated By: sandhya thejappa

Updated on: May 25, 2022 | 8:28 AM

ತಾಂಬೂಲ ಪ್ರಶ್ನೆ ಇರುವುದರಿಂದ ಮಳಲಿ ಮಸೀದಿಯ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಗುರುವಾರ ಬೆಳಗ್ಗೆ 8 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

ಮಂಗಳೂರು ಮಳಲಿ ಮಸೀದಿ ಬಳಿ ಇಂದು ತಾಂಬೂಲ ಪ್ರಶ್ನೆ; ನಿಷೇಧಾಜ್ಞೆ ಜಾರಿ
ಮಳಲಿ ದರ್ಗಾ
Follow us on

ಮಂಗಳೂರು: ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿ (Malali) ಎಂಬಲ್ಲಿ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾವನ್ನು ನವೀಕರಣಕ್ಕಾಗಿ ಕೆಡವಿದಾಗ ದೇವಸ್ಥಾನದ (Temple) ಮಾದರಿ ಪತ್ತೆಯಾಗಿರುವ ಹಿನ್ನೆಲೆ ಇಂದು (ಮೇ 25) ತಾಂಬೂಲ ಪ್ರಶ್ನೆ ಕೇಳಲಾಗುತ್ತದೆ. ತಾಂಬೂಲ ಪ್ರಶ್ನೆ ಇರುವುದರಿಂದ ಮಳಲಿ ಮಸೀದಿಯ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಗುರುವಾರ ಬೆಳಗ್ಗೆ 8 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.

ಸದ್ಯ ಕೇರಳದ ತಂತ್ರಿಗಳು ರಾಮಾಂಜನೇಯ ಭಜನಾ ಮಂದಿರಕ್ಕೆ ಆಗಮಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ವಿವಾದಿತ ಮಳಲಿ ಮಸೀದಿ ಸ್ಥಳದ ಇತಿಹಾಸ ತಿಳಿಯಲು ತಾಂಬೂಲ ಪ್ರಶ್ನೆ ಬೆಳಗ್ಗೆ 8 ಗಂಟೆಗೆ ಆರಂಭವಾಗುತ್ತದೆ. ಮಸೀದಿಯ 500 ಮೀಟರ್​ ದೂರದಲ್ಲಿ ದೈವೀ ಶಕ್ತಿ ಪತ್ತೆ ಕಾರ್ಯ ನಡೆಯುತ್ತದೆ. ಕೇರಳ ಮೂಲದ ಪೊದುವಾಲ್​ರಿಂದ ತಾಂಬೂಲ ಪ್ರಶ್ನೆ ಪ್ರಕ್ರಿಯೆ ನಡೆಯುತ್ತದೆ. ಮುಖ್ಯ ಜ್ಯೋತಿಷಿ ಸೇರಿ ಇಬ್ಬರು ತಾಂಬೂಲ ಪ್ರಶ್ನೆಯಲ್ಲಿ ಭಾಗಿಯಾಗಲಿದ್ದಾರೆ. ಮೊದಲಿಗೆ ಮಳಲಿ ಮಸೀದಿ ಸುತ್ತಮುತ್ತ ದೈವೀ ಶಕ್ತಿ ಇದೆಯಾ ಎಂಬ ಬಗ್ಗೆ ಪ್ರಶ್ನೆ ಕೇಳಲಾಗುತ್ತದೆ. ವೀಳ್ಯದೆಲೆ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ ದೈವೀ ಶಕ್ತಿ ಪತ್ತೆ ಮಾಡಲಾಗುವುದು.

ಇದನ್ನೂ ಓದಿ
INR USD Exchange Rate: ಅಮೆರಿಕ ಡಾಲರ್ ವಿರುದ್ಧ ಭಾರತದ ರೂಪಾಯಿ ಮೇ 24ಕ್ಕೆ ಯಾವ ದೇಶದ ವಿರುದ್ಧ ಎಷ್ಟಿದೆ?
CET Exam: ಈ ಬಾರಿ ನೀಟ್ ಮಾದರಿಯಲ್ಲಿ ಸಿಇಟಿ ಪರೀಕ್ಷೆ, ಪರೀಕ್ಷಾ ಕೇಂದ್ರಗಳ ಬಳಿ ಜಾಮರ್
Love Birds Movie: ‘ಲವ್ ಬರ್ಡ್ಸ್​’ನಲ್ಲಿ ತೆರೆ ಹಂಚಿಕೊಳ್ಳಲಿರುವ ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್
Jaggery Tea: ಬೆಲ್ಲದ ಚಹಾ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ?

ಇದನ್ನೂ ಓದಿ: CET Exam: ಈ ಬಾರಿ ನೀಟ್ ಮಾದರಿಯಲ್ಲಿ ಸಿಇಟಿ ಪರೀಕ್ಷೆ, ಪರೀಕ್ಷಾ ಕೇಂದ್ರಗಳ ಬಳಿ ಜಾಮರ್

ಅಷ್ಟಮಂಗಲ ಪ್ರಶ್ನೆ ಬದಲು ಇಂದು ತಾಂಬೂಲ ಪ್ರಶ್ನೆ ನಡೆಸಲಾಗುತ್ತದೆ. ಸರಳ ವಿಧಾನಗಳ ಮೂಲಕ ಸತ್ಯಾಸತ್ಯತೆ ಅರಿಯುವ ತಂತ್ರಿಗಳು ಪ್ರಯತ್ನಿಸುತ್ತಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ಜ್ಯೋತಿಷಿ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್, ತಾಂಬೂಲ ಪ್ರಶ್ನೆ ಇಡದೆ ಈಗಲೇ ಏನನ್ನೂ ಹೇಳಲು ಆಗುವುದಿಲ್ಲ. ದೇವರ ಸಾನ್ನಿಧ್ಯ ಇದೆಯಾ ಎಂದು ತಿಳಿಯಲು ಅಷ್ಟಮಂಗಲ ಪ್ರಶ್ನೆ ನಡೆಯಲಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:20 am, Wed, 25 May 22