ಮಂಗಳೂರು: ತಾಲೂಕಿನ ತೊಕ್ಕೊಟ್ಟು ಗ್ರಾಮದಲ್ಲಿ ಟೈಲರ್ ಅಂಗಡಿ ಮಾಲೀಕನೊಬ್ಬ ತನ್ನ ಮಳಿಗೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕನೀರುತೋಟ ನಿವಾಸಿ ಪ್ರವೀಣ್ ಆಳ್ವ(45) ಆತ್ಮಹತ್ಯೆ ಮಾಡಿಕೊಂಡ ರ್ದುದೈವಿ. ಪ್ರವೀಣ್ ಟೈಲರ್ ಅಂಗಡಿಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುತ್ತಿದ್ದ. ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಶುರುಮಾಡಿದ್ದಾರೆ.
ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯಿಂದಲೇ ಪತ್ನಿ ಕೊಲೆ ಆರೋಪ
ಚಿತ್ರದುರ್ಗ: ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯೇ ಪತ್ನಿಯನ್ನ ಕೊಲೆ ಮಾಡಿರುವ ಘಟನೆ nನಗರದ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ರೋಜಾ(28) ಎಂಬುವವರನ್ನ ಹತ್ಯೆ ಮಾಡಿ, ಬಳಿಕ ಆಸ್ಪತ್ರೆಗೆ ದಾಖಲಿಸುವ ನಾಟಕಮಾಡಿ ಪತಿ ಯರಿಽಸ್ವಾಮಿ ಪರಾರಿಯಾಗಿದ್ದಾನೆ. ಈ ಕುರಿತು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿ ಯರಿಸ್ವಾಮಿ ಬೇರೊಬ್ಬಳ ಜತೆ ಅಕ್ರಮ ಸಂಬಂಧ ಹೊಂದಿದ್ದನಂತೆ ಇದನ್ನ ಪತ್ನಿ ರೋಜಾ ಪ್ರಶ್ನಿಸಿದ್ದಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ:ಇವಳೊಂದು ದಿಕ್ಕು- ಅವನೊಂದು ದಿಕ್ಕು: ವರ್ಗಾವಣೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಇಂಡೇನ್ ಕಂಪನಿ ಮಹಿಳಾ ಅಧಿಕಾರಿ!
ಹೆಜ್ಜೇನು ದಾಳಿಯಿಂದ ದನಗಾಹಿ ಸಾವು, ಮತ್ತಿಬ್ಬರಿಗೆ ಗಾಯ
ಮೈಸೂರು: ಹೆಜ್ಜೇನು ದಾಳಿಯಿಂದ ಓರ್ವ ದನಗಾಹಿ ಸಾವನಪ್ಪಿದ್ದು, ಮತ್ತಿಬ್ಬರಿಗೆ ಗಾಯವಾಗಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಹೊಸತೊರವಳ್ಳಿ ಬಳಿ ನಡೆದಿದೆ. ಹೌದು ದನ ಮೇಯಿಸುತ್ತಿದ್ದ ವೇಳೆ ಹಠಾತ್ ಹೆಜ್ಜೇನು ದಾಳಿ ಮಾಡಿದೆ. ಈ ವೇಳೆ ಚಿಕ್ಕಮಾಲೇಗೌಡ(65) ಸಾವನಪ್ಪಿದ್ದಾನೆ. ಇನ್ನು ಬೀರೇಗೌಡ, ಶಂಕರನಾಯ್ಕ ಎಂಬುವವರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ