ಯುಪಿ ಯೋಗಿ ಮಾದರಿ ಅಸ್ತ್ರ ಪ್ರಯೋಗ- ಮಂಗಳೂರಿನಲ್ಲಿ ಮೂರು ಕಸಾಯಿಖಾನೆ ಮುಟ್ಟುಗೋಲು ಆಯ್ತು!

| Updated By: ಸಾಧು ಶ್ರೀನಾಥ್​

Updated on: Oct 27, 2022 | 1:44 PM

ಅಕ್ರಮ ಕಸಾಯಿಖಾನೆ ಜಾಗ ವಶಕ್ಕೆ ಪಡೆದು ಸರ್ಕಾರದ ಹೆಸರಲ್ಲಿ ಆರ್.ಟಿ.ಸಿ ನೋಂದಣಿ ಮಾಡಲಾಗಿದೆ. ಕಾಟಿಪಳ್ಳ, ಅರ್ಕುಳ ಮತ್ತು ಗಂಜಿ ಮಠದಲ್ಲಿ ಅಕ್ರಮ ಕಸಾಯಿಖಾನೆ ಆಸ್ತಿ ಮುಟ್ಟುಗೋಲು ಹಾಕಲಾಗಿದೆ.

ಯುಪಿ ಯೋಗಿ ಮಾದರಿ ಅಸ್ತ್ರ ಪ್ರಯೋಗ- ಮಂಗಳೂರಿನಲ್ಲಿ ಮೂರು ಕಸಾಯಿಖಾನೆ ಮುಟ್ಟುಗೋಲು ಆಯ್ತು!
ಮಂಗಳೂರಿನಲ್ಲಿ ಮೂರು ಕಸಾಯಿಖಾನೆ ಮುಟ್ಟುಗೋಲು ಆಯ್ತು!
Follow us on

ಮಂಗಳೂರು: ಮಂಗಳೂರಿನಲ್ಲಿ ಗೋ ಹಂತಕರ ವಿರುದ್ದ ಉತ್ತರ ಪ್ರದೇಶದಲ್ಲಿ ಯೋಗಿ ಮಾದರಿ ಅಸ್ತ್ರ ಪ್ರಯೋಗ ಮಾಡಿದೆ. ಮಂಗಳೂರು (mangalore) ಉತ್ತರ ಕ್ಷೇತ್ರದಲ್ಲಿ ಮೂರು ಅಕ್ರಮ ಕಸಾಯಿಖಾನೆ (cow slaughters) ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ರ ಕಲಾಂ 8 (4) ಅಡಿ ಮುಟ್ಟುಗೋಲು ಹಾಕಲಾಗಿದೆ. ಅಕ್ರಮ ‌ಕಸಾಯಿಖಾನೆಯ ಜಾಗಗಳನ್ನು ಸರ್ಕಾರ ಅಧಿಕೃತವಾಗಿ ತನ್ನ ವಶಕ್ಕೆ ತೆಗೆದುಕೊಂಡಿದೆ.

ಅಕ್ರಮ ಕಸಾಯಿಖಾನೆ ಜಾಗ ವಶಕ್ಕೆ ಪಡೆದು ಸರ್ಕಾರದ ಹೆಸರಲ್ಲಿ ಆರ್.ಟಿ.ಸಿ ನೋಂದಣಿ ಮಾಡಲಾಗಿದೆ. ಕಾಟಿಪಳ್ಳ, ಅರ್ಕುಳ ಮತ್ತು ಗಂಜಿ ಮಠದಲ್ಲಿ ಅಕ್ರಮ ಕಸಾಯಿಖಾನೆ ಆಸ್ತಿ ಮುಟ್ಟುಗೋಲು ಹಾಕಲಾಗಿದೆ. ವಶಪಡಿಸಿಕೊಳ್ಳಲಾದ ಜಾಗಗಳ ಮಾರಾಟ, ಬಾಡಿಗೆ ಹಾಗೂ ಯಾವುದೇ ಚಟುವಟಿಕೆ ನಡೆಸದಂತೆ ಕಂದಾಯ ‌ಇಲಾಖೆ (revenue department) ಆದೇಶಿಸಿದೆ. ಗಂಜಿಮಠದ ಯೂಸೂಫ್, ಅರ್ಕುಳದ ಬಾತೀಶ್, ಕಾಟಿಪಳ್ಳದ ಹಕೀಂಗೆ ಸೇರಿದ ಜಾಗಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಬಜ್ಪೆ, ಸುರತ್ಕಲ್ ಹಾಗೂ ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಗಳಲ್ಲಿ ಕಾನೂನು ಪ್ರಕಾರ ಕಾಯ್ದೆ ಜಾರಿ ‌ಮಾಡಿ ಆಸ್ತಿ ಮುಟ್ಟುಗೋಲು ಹಾಕಲಾಗಿದೆ.