ಮಂಗಳೂರಿನಲ್ಲಿ ಗಾಂಜಾ ಮಾರುತ್ತಿದ್ದ ಮೂವರ ಬಂಧನ; 2 ಕೆ.ಜಿ ಗಾಂಜಾ ವಶ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 01, 2023 | 8:35 AM

ರಾಜ್ಯದಲ್ಲಿ ಮಾದಕ ವಸ್ತು ಮಾರಾಟ ಹೆಚ್ಚುತ್ತಿರುವ ಹಿನ್ನಲೆ ಇದನ್ನು ತಡೆಗಟ್ಟುವ ಸಲುವಾಗಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಇದೀಗ ಮಂಗಳೂರಿನಲ್ಲಿ ಗಾಂಜಾ ಮಾರುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಮಂಗಳೂರಿನಲ್ಲಿ ಗಾಂಜಾ ಮಾರುತ್ತಿದ್ದ ಮೂವರ ಬಂಧನ; 2 ಕೆ.ಜಿ ಗಾಂಜಾ ವಶ
ಮಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್​
Follow us on

ಮಂಗಳೂರು, ಆ.01: ರಾಜ್ಯದಲ್ಲಿ ಮಾದಕ ವಸ್ತು ಮಾರಾಟ ಹೆಚ್ಚುತ್ತಿರುವ ಹಿನ್ನಲೆ ಇದನ್ನು ತಡೆಗಟ್ಟುವ ಸಲುವಾಗಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಆದರೂ ಕೂಡ ಅಲ್ಲಲ್ಲಿ ಇಂತಹ ಘಟನೆಗಳು ಬೆಳಕಿಗೆ ಬರುತ್ತಿವೆ. ಹೌದು, ಇತ್ತೀಚೆಗೆ ಮಂಗಳೂರಿ(Mangalore)ನಲ್ಲಿ ಸಿಸಿಬಿ ಪೊಲೀಸರು, ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ ಎಂಡಿಎಂಎ ಮಾದಕ ವಸ್ತುವನ್ನು ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಲಾಗಿತ್ತು. ಅದರಂತೆ ಇದೀಗ ನಗರದ ​ನಿವಾಸಿಗಳಾದ ಗಣೇಶ್, ಅಭಿಲಾಷ್, ರಾಹುಲ್ ಎಂಬುವವರು ಮಂಗಳೂರಿನ ಬೋಳಾರು ಬಳಿ ಆಟೋದಲ್ಲಿ ಕುಳಿತುಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಹಿನ್ನಲೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಕಳ್ಳತನ ಮಾಡ್ತಿದ್ದ ಆರೋಪಿಗಳ ಬಂಧನ; ಕಾರು, ಬೈಕ್​ ಜಪ್ತಿ

ಬೆಂಗಳೂರು: ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಸಯ್ಯದ್ ಶಫಿ, ಮೊಹಮ್ಮದ್ ಝೀಷನ್ ಪಾಷ ಬಂಧಿತರು. ಇವರುಗಳಿಂದ ಎರಡು ದ್ವಿಚಕ್ರ ವಾಹನ ಸೇರಿ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಕಮನಹಳ್ಳಿ ರಸ್ತೆ ಬಳಿ ಕಾರು ಅಡ್ಡಗಟ್ಟಿ ಸುಲಿಗೆ ಮಾಡಿದ್ದ ಆರೋಪಿಗಳು. ಸಂಪಿಗೇಹಳ್ಳಿ, ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಕೂಡ ಕೃತ್ಯ ಎಸಗಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ಇದನ್ನೂ ಓದಿ:ಆನೇಕಲ್​​​ನಲ್ಲಿ ಹಾಡಹಗಲೇ ಗಾಂಜಾ ಮತ್ತಿನಲ್ಲಿ ಪುಡಿರೌಡಿಗಳ ಅಟ್ಟಹಾಸ; ಕಣ್ಮುಚ್ಚಿ ಕುಳಿತ ಪೋಲೀಸರು

ಶಾಫಿಂಗ್​ ಮಾಲ್​ಗೆ ಎಂಟ್ರಿ ಕೊಟ್ಟಿದ್ದ ಕಳ್ಳ; ಕ್ಷಣಾರ್ಧಲ್ಲಿ ಪರಾರಿ

ದಾವಣಗೆರೆಯ ಪಿಬಿ ರಸ್ತೆಯಲ್ಲಿರುವ ಟ್ರೆಂಡ್ಸ್ ಶಾಪಿಂಗ್​ ಮಾಲ್​ನಲ್ಲಿ ಬೆಳಗಿನ ಜಾವ ಕಳ್ಳನೊಬ್ಬ ಶಾಪಿಂಗ್ ಮಾಲ್​ನ ಪಿಒಪಿ ಸ್ಲಾಬ್ ಮೂಲಕ ಒಳಗೆ ಎಂಟ್ರಿಯಾಗಿದ್ದ. ನಂತರ ಸೈರನ್ ಆನ್ ಆಗಿದ್ದು, ಅದು ಮುಂಬೈನಲ್ಲಿರುವ ಅವರ ಕೇಂದ್ರ ಕಚೇರಿಗೂ ಅಲರ್ಟ್ ಹೋಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಸಿಸಿ ಕ್ಯಾಮರಾಗಳನ್ನು ಚೆಕ್ ಮಾಡಿದ ಪೊಲೀಸರಿಗೆ ಅಚ್ಚರಿ ಕಾಣಿಸಿಕೊಂಡಿತ್ತು. ಹೌದು, ಕೇವಲ ಕಳ್ಳ ಎಂಟ್ರಿಯಾಗಿದ್ದು ಮಾತ್ರ ಇದೆ.‌ ಇದರಿಂದ ಶಾಪಿಂಗ್ ಮಾಲ್​ನ ಇಂಚು ಜಾಗ ಬಿಡದೆ ಪೊಲೀಸರು ಹುಡುಕಾಡಿದ್ದು, ಎಲ್ಲಿಯೂ ಕೂಡ ಕಳ್ಳ ಪತ್ತೆಯಾಗಿಲ್ಲ. ಅದ್ದರಿಂದ ಪೊಲೀಸರಿಗೂ ಕೂಡ ಈ ಪ್ರಕರಣ ಸವಾಲಾಗಿ ಪರಿಣಮಿಸಿದೆ.

ಸದ್ಯ ಕಳ್ಳ ಮಾಲ್ ಒಳಗೆ ಎಂಟ್ರಿಯಾಗುತ್ತಿದ್ದಂತೆ ಸೈರನ್​ ಮೊಳಗಿದ್ದು, ಕಳ್ಳ ಎಲ್ಲಿ ತಪ್ಪಿಸಿಕೊಂಡಿದ್ದಾನೆ ಎನ್ನುವುದು ಮಾತ್ರ ಪೊಲೀಸರಿಗೆ ತಿಳಿಯುತ್ತಿಲ್ಲ.‌ ಅಲ್ಲದೆ ಬೇರೆ ಬೇರೆ ಅಂಗಡಿಗಳಲ್ಲಿ ಈಗ ಭಯದ ವಾತಾವರಣ ಶುರುವಾಗಿದ್ದು, ಶಾಪಿಂಗ್ ಮಾಲ್​ಗಳಲ್ಲಿ ತಂತ್ರಜ್ಞಾನ ಬಳಸಿದ್ದರಿಂದ ಕಳ್ಳತನ ಪ್ರಕರಣ ತಪ್ಪಿದೆ. ಕೂಡಲೇ ಪೊಲೀಸ್ ಇಲಾಖೆ ಬೀಟ್​ಗಳನ್ನು ಹೆಚ್ಚಿಸುವ ಮೂಲಕ ಜನರಿಗೆ ನೆಮ್ಮದಿಯಿಂದ ಇರುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ