AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಜಾ ಸೇವನೆ: ಸೂಪರ್ ಮಾಡೆಲ್ ಗಿಗಿ ಹದೀದ್ ಬಂಧನ

Gigi Hadid: ಅಮೆರಿಕದ ಖ್ಯಾತ ಸೂಪರ್ ಮಾಡೆಲ್ ಗಿಗಿ ಹದೀದ್ ಅನ್ನು ಕೇಯ್ಮನ್ ದ್ವೀಪದ ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಗಾಂಜಾ ಸೇವನೆ: ಸೂಪರ್ ಮಾಡೆಲ್ ಗಿಗಿ ಹದೀದ್ ಬಂಧನ
ಗಿಗಿ ಹದೀದ್
ಮಂಜುನಾಥ ಸಿ.
|

Updated on: Jul 19, 2023 | 8:10 PM

Share

ಹಾಲಿವುಡ್​ನ (Hollywood) ಸೂಪರ್ ಮಾಡೆಲ್ (Super Model) ಗಿಗಿ ಹದೀದ್ (Gigi Hadid) ಅವರನ್ನು ಗಾಂಜಾ ಹೊಂದಿರುವ ಹಾಗೂ ಸೇವಿಸಿರುವ ಆರೋಪದಲ್ಲಿ ಕೇಯ್ಮಾನ್ ದ್ವೀಪದಲ್ಲಿ ಬಂಧಿಸಲಾಗಿದೆ. ಗಿಗಿ ಹದೀದ್ ಮಾತ್ರವೇ ಅಲ್ಲದೆ ಅವರೊಟ್ಟಿಗಿದ್ದ ಅವರ ಸ್ನೇಹಿತೆ ಲೇಹ್ ಮೇಕಾರ್ಟಿ ಅವರನ್ನೂ ಸಹ ಕೇಯ್ಮಾನ್ ದ್ವೀಪದ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು ಎರಡು ದಿನಗಳ ಬಳಿಕ ಅವರಿಂದ ದಂಡ ಪಡೆದು ಬಿಡುಗಡೆ ಮಾಡಲಾಗಿದೆ.

ಜುಲೈ 10ರಂದು ಗಿಗಿ ಹದೀದ್ ಮತ್ತು ಅವರ ಗೆಳತಿ ಸ್ನೇಹಿತೆ ಲೇಹ್ ಮೇಕಾರ್ಟಿ ಕೇಯ್ಮಾನ್ ದ್ವೀಪಕ್ಕೆ ವಿಮಾನ ನಿಲ್ದಾಣದ ಮೂಲಕ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಗಿಗಿ ಹದೀದ್ ಬಳಿ ಗಾಂಜಾ ದೊರಕಿದೆ ಮಾತ್ರವಲ್ಲದೆ ಗಾಂಜಾವನ್ನು ಉಪಯೋಗಿಸಲೆಂದು ಇಟ್ಟುಕೊಂಡಿದ್ದ ಕೆಲವು ವಸ್ತುಗಳು ಸಹ ದೊರೆತಿವೆ. ಕೂಡಲೇ ಗಿಗಿ ಹದೀದ್ ಹಾಗೂ ಅವರ ಗೆಳತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಆ ನಂತರ ಜಾಮೀನಿನ ಮೇಲೆ ಗಿಗಿ ಹದೀದ್ ಹಾಗೂ ಲೇಹ್ ಮೇಕಾರ್ಟಿ ಅವರನ್ನು ಬಿಡುಗಡೆ ಮಾಡಲಾಗಿದ್ದು, ಇಬ್ಬರಿಂದ ಸಾವಿರ ಡಾಲರ್​ಗಳ ದಂಡವನ್ನು ಕಟ್ಟಿಸಿಕೊಳ್ಳಲಾಗಿದೆ. ಗಿಗಿ ಹದೀದ್​ರ ವಕೀಲರು ಹೇಳಿರುವಂತೆ, ಗಿಗಿ ಹದೀದ್, ವೈದ್ಯಕೀಯ ಕಾರಣಗಳಿಗೆ ಗಾಂಜಾ ಬಳಸಲು ಅಮೆರಿಕದಲ್ಲಿ ಅನುಮತಿ ಪಡೆದಿದ್ದಾರೆ. ಅದೇ ಕಾರಣದಿಂದ ಅವರು ತಮ್ಮೊಟ್ಟಿಗೆ ಗಾಂಜಾ ತೆಗೆದುಕೊಂಡು ಹೋಗಿದ್ದರು ಎಂದಿದ್ದಾರೆ. ಗ್ರ್ಯಾಂಡ್ ಕೇಯ್ಮಾನ್​ನಲ್ಲಿ ಸಹ 2017ರಿಂದ ಈಚೆಗೆ, ವೈದ್ಯಕೀಯ ಕಾರಣಗಳಿಗೆ ಗಾಂಜಾ ಬಳಕೆಯನ್ನು ಕಾನೂನುಬದ್ಧಗೊಳಿಸಲಾಗಿದೆ ಹಾಗಾಗಿ ಗೀಗಿ ಹದೀದ್ ಅವರನ್ನು ದಂಡ ಕಟ್ಟಿಸಿಕೊಂಡು ಬಿಡಲಾಗಿದೆ.

ಇದನ್ನೂ ಓದಿ:ವೇದಿಕೆ ಮೇಲೆ ವಿದೇಶಿ ಮಹಿಳೆಯ ಎತ್ತಿಕೊಂಡು ಮುತ್ತಿಟ್ಟ ನಟ ವರುಣ್ ಧವನ್, ತೀವ್ರ ಟೀಕೆ

ಕೆಲ ತಿಂಗಳ ಹಿಂದೆ ಗಿಗಿ ಹದೀದ್ ಭಾರತಕ್ಕೆ ಬಂದಾಗ ಸುದ್ದಿಯಾಗಿದ್ದರು. ನೀತಾ ಅಂಬಾನಿಯ ಕಲ್ಚರಲ್ ಸೆಂಟರ್ ಉದ್ಘಾಟನೆಗೆಂದು ಗಿಗಿ ಹದೀದ್ ಮುಂಬೈಗೆ ಆಗಮಿಸಿದ್ದರು. ಆಗ ನಡೆದಿದ್ದ ಕಾರ್ಯಕ್ರಮದಲ್ಲಿ ನಟ ವರುಣ್ ಧವನ್, ಗಿಗಿ ಹದೀದ್ ಅವರನ್ನು ವೇದಿಕೆ ಮೇಲೆ ಕರೆತಂದು ಅವರನ್ನು ಎತ್ತಿ ಆಡಿಸಿದ್ದರು. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿ, ಗಿಗಿಯ ಅನುಮತಿ ಇಲ್ಲದೆ ಅವರಿಗೆ ಮುಜುಗರ ಉಂಟಾಗುವಂತೆ ವರುಣ್ ಧವನ್ ನಡೆದುಕೊಂಡಿದ್ದಾರೆ ಎನ್ನಲಾಗಿತ್ತು.

ಈ ಆರೋಪಗಳಿಗೆ ವರುಣ್ ಧವನ್ ಟ್ವೀಟ್ ಮೂಲಕ ಉತ್ತರಿಸಿದ್ದರು. ಬಳಿಕ ಗಿಗಿ ಹದೀದ್ ಸಹ ಟ್ವೀಟ್ ಮಾಡಿ, ಮುಂಬೈನಲ್ಲಿ ಬಹಳ ಒಳ್ಳೆಯ ಸಮಯ ಕಳೆದೆನೆಂದು ಹೇಳಿದ್ದಲ್ಲದೆ, ವರುಣ್ ಧವನ್, ತಮ್ಮನ್ನು ಎತ್ತಿಕೊಂಡಿದ್ದು ಪೂರ್ವನಿಯೋಜಿತವಾಗಿತ್ತೆಂದು ಹೇಳಿದರು. ಅಲ್ಲಿಗೆ ವಿವಾದ ಸುಖಾಂತ್ಯವಾಯಿತು. ಗಿಗಿ ಹದೀದ್ ಹೆಸರು ಇತ್ತೀಚೆಗೆ ಹಾಲಿವುಡ್​ನ ಖ್ಯಾತ ನಟ ಲಿಯೊನಾರ್ಡೊ ಡಿಕ್ಯಾಪ್ರಿಕೋವ್ ಜೊತೆಗೆ ಕೇಳಿ ಬರುತ್ತಿದೆ. ಆದರೆ ಇಬ್ಬರೂ ಸಹ ತಮ್ಮ ಪ್ರೇಮ ಸಂಬಂಧದ ಸುದ್ದಿಗಳನ್ನು ಖಾತ್ರಿಗೊಳಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ