AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oppenheimer: ‘ಆಪನ್​ಹೈಮರ್​’ ಪಾತ್ರಕ್ಕಾಗಿ ಅಪಾಯಕಾರಿ ಡಯೆಟ್​ ಮಾಡಿದ ನಟ ಕಿಲಿಯನ್​ ಮರ್ಫಿ; ದಿನಕ್ಕೆ ಒಂದೇ ಬಾದಾಮಿ?

Cillian Murphy: ಆಪನ್​ಹೈಮರ್​ ಅವರು ತುಂಬ ಸ್ಲಿಮ್​ ಆಗಿದ್ದರು. ಆ ಪಾತ್ರಕ್ಕಾಗಿ ಕಿಲಿಯನ್​ ಮರ್ಫಿ ಅವರು ಕಠಿಣ ಡಯೆಟ್​ ಪಾಲಿಸಿದರು. ಟ್ರೇಲರ್​​ನಲ್ಲಿ ಅವರ ಲುಕ್​ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ.

Oppenheimer: ‘ಆಪನ್​ಹೈಮರ್​’ ಪಾತ್ರಕ್ಕಾಗಿ ಅಪಾಯಕಾರಿ ಡಯೆಟ್​ ಮಾಡಿದ ನಟ ಕಿಲಿಯನ್​ ಮರ್ಫಿ; ದಿನಕ್ಕೆ ಒಂದೇ ಬಾದಾಮಿ?
ಕಿಲಿಯನ್​ ಮರ್ಫಿ, ಜೆ. ರಾಬರ್ಟ್​ ಆಪನ್​ಹೈಮರ್​
ಮದನ್​ ಕುಮಾರ್​
|

Updated on: Jul 20, 2023 | 3:36 PM

Share

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಆಪನ್​ಹೈಮರ್​’ (Oppenheimer Movie) ಮುಂಚೂಣೆಯಲ್ಲಿದೆ. ಈ ಚಿತ್ರಕ್ಕೆ ಕ್ರಿಸ್ಟೋಫರ್​ ನೋಲನ್​ (Christopher Nolan) ಅವರು ನಿರ್ದೇಶನ ಮಾಡಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ಜುಲೈ 21ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿರುವ ಈ ಸಿನಿಮಾದ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ದೊಡ್ಡ ಹೈಪ್​ ಸೃಷ್ಟಿ ಆಗಿದೆ. ಬಿಡುಗಡೆ ಹೊಸ್ತಿಲಿನಲ್ಲಿ ಈ ಚಿತ್ರದ ಕಲಾವಿದರು ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅನೇಕ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ. ಆಪನ್​ಹೈಮರ್​ ಪಾತ್ರ ಮಾಡಿರುವ ಕಿಲಿಯನ್​ ಮರ್ಫಿ (Cillian Murphy) ಅವರು ಅಪಾಯಕಾರಿಯಾದ ಡಯೆಟ್​ ಪಾಲಿಸಿದ್ದಾರೆ ಎಂಬುದು ಗಮನಿಸಬೇಕಾದ ಅಂಶ.

ಎರಡನೇ ಮಹಾಯುದ್ಧದಲ್ಲಿ ಜಪಾನ್​ ಮೇಲೆ ಅಣು ಬಾಂಬ್​ ಹಾಕಲಾಯಿತು. ಆ ಬಾಂಬ್​ ಕಂಡುಹಿಡಿದ ವಿಜ್ಞಾನಿ ಜೆ. ರಾಬರ್ಟ್​ ಆಪನ್​ಹೈಮರ್​ ಅವರ ಜೀವನದ ಕುರಿತು ಈ ಸಿನಿಮಾ ಮೂಡಿಬಂದಿದೆ. ಆಪನ್​ಹೈಮರ್​ ಪಾತ್ರಕ್ಕಾಗಿ ಕಿಲಿಯನ್​ ಮರ್ಫಿ ಅವರು ಬೇರೆ ಬೇರೆ ರೀತಿಯಲ್ಲಿ ತಯಾರಿ ನಡೆಸಿದ್ದರು. ಭಗದ್ಗೀತೆಯನ್ನು ಓದಿದ್ದರು. ಅಲ್ಲದೇ ಅವರು ದೇಹದ ತೂಕವನ್ನು ಕಡಿಮೆ ಮಾಡಿಕೊಂಡರು. ಅದಕ್ಕಾಗಿ ಅವರು ಪಾಲಿಸಿದ ಡಯೆಟ್​ ತೀರಾ ಅಪಾಯಕಾರಿ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Oppenheimer: ಬಿಡುಗಡೆಗೂ ಮುನ್ನ ‘ಆಪನ್​ಹೈಮರ್​’ ಸಿನಿಮಾ ಬಗ್ಗೆ ಹೆಚ್ಚಿದ ಕ್ರೇಜ್​; ಇಲ್ಲಿವೆ ಪ್ರಮುಖ ಕಾರಣಗಳು

ಆಪನ್​ಹೈಮರ್​ ಅವರು ತುಂಬ ಸ್ಲಿಮ್​ ಆಗಿದ್ದರು. ಕೇವಲ ಸಿಗರೇಟ್​ ಮತ್ತು ಕಾಕ್​ಟೇಲ್​ ಸೇವಿಸಿ ಬದುಕಿದ್ದರೇನೋ ಎಂಬಷ್ಟು ತೆಳ್ಳಗಿದ್ದರು. ಅವರ ರೀತಿಯೇ ಕಾಣಬೇಕು ಎಂಬ ಕಾರಣಕ್ಕೆ ಕಿಲಿಯನ್​ ಮರ್ಫಿ ಕಟ್ಟುನಿಟ್ಟಾದ ಡಯೆಟ್​ ಫಾಲೋ ಮಾಡಿದರು. ಅವರ ಜೊತೆ ಅಭಿನಯಿಸಿದ ನಟಿ ಎಮಿಲಿ ಬ್ಲಂಟ್​ ಹೇಳುವ ಪ್ರಕಾರ, ಕಿಲಿಯನ್​ ಮರ್ಫಿ ಅವರು ದಿನಕ್ಕೆ ಕೇವಲ ಒಂದೇ ಒಂದು ಬಾದಾಮಿ ತಿನ್ನುತ್ತಿದ್ದರು! ಟ್ರೇಲರ್​​ನಲ್ಲಿ ಕಿಲಿಯನ್​ ಮರ್ಫಿ ಅವರ ಲುಕ್​ ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ.

ಇದನ್ನೂ ಓದಿ: Oppenheimer: ಬೆಂಗಳೂರಲ್ಲಿ 2 ಸಾವಿರ ರೂಪಾಯಿಗೆ ಸೇಲ್​ ಆಗ್ತಿದೆ ‘ಆಪನ್​ಹೈಮರ್​’ ಚಿತ್ರದ ಟಿಕೆಟ್​; ಅಂಥ ವಿಶೇಷ ಇದರಲ್ಲಿ ಏನಿದೆ?

ಕಿಲಿಯನ್​ ಮರ್ಫಿ ಅವರು ಯಾವ ಡಯೆಟ್​ ಫಾಲೋ ಮಾಡುತ್ತಿದ್ದರು ಎಂಬುದನ್ನು ಚಿತ್ರತಂಡ ಬಹಿರಂಗ ಮಾಡಿಲ್ಲ. ಯಾಕೆಂದರೆ, ಅದು ಅಪಾಯಕಾರಿ ಡಯೆಟ್​ ಆದ್ದರಿಂದ ಅದನ್ನು ಯಾರೂ ಕೂಡ ಪಾಲಿಸಬಾರದು ಎಂಬುದು ಚಿತ್ರತಂಡದ ಆಶಯ. ಸ್ವತಃ ಕಿಲಿಯನ್​ ಮರ್ಫಿ ಕೂಡ ‘ಇದು ಪಾಲಿಸಲು ಯೋಗ್ಯವಾದ ಡಯೆಟ್​ ಅಲ್ಲ’ ಎಂದು ಹೇಳಿದ್ದಾರೆ. ಖ್ಯಾತ ನಟರಾದ ಮ್ಯಾಟ್​ ಡೇಮನ್​ ಮತ್ತು ರಾಬರ್ಟ್​ ಡೌನಿ ಜೂನಿಯರ್​ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಸೂಚನೆ:ಡಯೆಟ್​ ಪಾಲಿಸುವಾಗ ವೈದ್ಯರು ಅಥವಾ ತಜ್ಞರ ಸಲಹೆ ಪಡೆಯಿರಿ. ಯಾವುದೇ ಅಪಾಯಕಾರಿ ಆಹಾರಕ್ರಮಗಳನ್ನು ಅನುಸರಿಸಬೇಡಿ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ