AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Oppenheimer: ಬೆಂಗಳೂರಲ್ಲಿ 2 ಸಾವಿರ ರೂಪಾಯಿಗೆ ಸೇಲ್​ ಆಗ್ತಿದೆ ‘ಆಪನ್​ಹೈಮರ್​’ ಚಿತ್ರದ ಟಿಕೆಟ್​; ಅಂಥ ವಿಶೇಷ ಇದರಲ್ಲಿ ಏನಿದೆ?

Oppenheimer Movie Ticket: 2ನೇ ಮಹಾಯುದ್ಧದಲ್ಲಿ ಅಮೆರಿಕವು ಜಪಾನ್​ ಮೇಲೆ 2 ಬಾರಿ ಆಟಂ ಬಾಂಬ್​ ಹಾಕಿತ್ತು. ಅದರ ಹಿಂದಿರುವ ವಿವರಗಳನ್ನು ‘ಆಪನ್​ಹೈಮರ್​’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ.

Oppenheimer: ಬೆಂಗಳೂರಲ್ಲಿ 2 ಸಾವಿರ ರೂಪಾಯಿಗೆ ಸೇಲ್​ ಆಗ್ತಿದೆ ‘ಆಪನ್​ಹೈಮರ್​’ ಚಿತ್ರದ ಟಿಕೆಟ್​; ಅಂಥ ವಿಶೇಷ ಇದರಲ್ಲಿ ಏನಿದೆ?
ಕಿಲಿಯನ್​ ಮರ್ಫಿ
ಮದನ್​ ಕುಮಾರ್​
|

Updated on:Jul 18, 2023 | 4:52 PM

Share

ಚಿತ್ರಮಂದಿರಗಳಿಗೆ ಜನರು ಬರುತ್ತಿಲ್ಲ ಎಂದು ಒಂದು ವರ್ಗದ ಮಂದಿ ಬೊಬ್ಬೆ ಹೊಡೆದುಕೊಳ್ಳುತ್ತಾರೆ. ಆದರೆ ಕೆಲವು ಸಿನಿಮಾಗಳಿಗೆ ಹೌಸ್​ಫುಲ್​ ಪ್ರದರ್ಶನ ಆಗುತ್ತದೆ. ಕಂಟೆಂಟ್​ ಮತ್ತು ಮೇಕಿಂಗ್​ ಚೆನ್ನಾಗಿ ಇದ್ದರೆ ಖಂಡಿತವಾಗಿಯೂ ಜನರು ಚಿತ್ರಮಂದಿರಕ್ಕೆ ಬರುತ್ತಾರೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಎಂದರೆ, ಆಪನ್​ಹೈಮರ್​’ (Oppenheimer) ಸಿನಿಮಾ. ಹಾಲಿವುಡ್​ನ ಈ ಚಿತ್ರದ ಟಿಕೆಟ್​ ಬುಕಿಂಗ್​ ಆರಂಭ ಆಗಿದೆ. ಜನರು ಮುಗಿಬಿದ್ದು ಬುಕ್​ ಮಾಡುತ್ತಿದ್ದಾರೆ. ಕ್ರಿಸ್ಟೋಫರ್​ ನೋಲನ್​ (Christopher Nolan) ನಿರ್ದೇಶನ ಮಾಡಿರುವ ಈ ಸಿನಿಮಾ ಜುಲೈ 21ರಂದು ರಿಲೀಸ್​ ಆಗಲಿದೆ. ಕೆಲವು ಕಡೆಗಳಲ್ಲಿ ಟಿಕೆಟ್​ ಬೆಲೆ ದುಬಾರಿ ಆಗಿದೆ. 2 ಸಾವಿರ ರೂಪಾಯಿ ಬೆಲೆಯ ಟಿಕೆಟ್​ಗಳನ್ನು ಕೂಡ ಜನರು ಬೆಂಗಳೂರಿನಲ್ಲಿ ಖರೀದಿಸಿದ್ದಾರೆ.

ತಮ್ಮ ಪ್ರತಿ ಸಿನಿಮಾದಲ್ಲೂ ಡೈರೆಕ್ಟರ್​ ಕ್ರಿಸ್ಟೋಫರ್ ನೋಲನ್​ ಅವರು ಅಭಿಮಾನಿಗಳಿಗೆ ಹೊಸತನ ನೀಡುತ್ತಾರೆ. ಮೇಕಿಂಗ್​ ವಿಚಾರದಲ್ಲಿ ಅವರು ಎಂದಿಗೂ ಕಾಂಪ್ರಮೈಸ್​ ಆಗುವುದಿಲ್ಲ. ಗಂಭೀರವಾದ ವಿಚಾರಗಳನ್ನು ಇಟ್ಟುಕೊಂಡು ಅವರು ಸಿನಿಮಾ ಮಾಡುತ್ತಾರೆ. ಹಾಗಾಗಿ ಕ್ರಿಸ್ಟೋಫರ್​ ನೋಲನ್​ ನಿರ್ದೇಶನ ಮಾಡಿರುವ ‘ಆಪನ್​​ಹೈಮರ್​’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಈ ಚಿತ್ರದಲ್ಲಿ ಐತಿಹಾಸಿಕ ಕಥೆ ಇದೆ. ಆಟಂ ಬಾಂಬ್​ ಕಂಡುಹಿಡಿದ ಜೆ. ರಾಬರ್ಟ್​ ಆಪನ್​ಹೈಮರ್​ ಅವರ ಜೀವನದ ವಿವರಗಳನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ.

ಇದನ್ನೂ ಓದಿ: Christopher Nolan: ಸೈನ್ಸ್​ ಫಿಕ್ಷನ್​ ಸಿನಿಮಾ ಮಾಡಿದ್ರೂ ಸ್ಮಾರ್ಟ್​ಫೋನ್​ ಬಳಸಲ್ಲ, ಇ-ಮೇಲ್​ ಮಾಡಲ್ಲ; ಕ್ರಿಸ್ಟೋಫರ್ ನೋಲನ್​ ಬಗ್ಗೆ ಅಚ್ಚರಿಯ ಮಾಹಿತಿ

‘ಆಪನ್​ಹೈಮರ್​’ ಸಿನಿಮಾದಲ್ಲಿ ಕಿಲಿಯನ್​ ಮರ್ಫಿ, ರಾಬರ್ಟ್​ ಡೌನಿ ಜೂನಿಯರ್​, ಎಮಿಲಿ ಬ್ಲಂಟ್​, ಮ್ಯಾಟ್​ ಡೇಮನ್​ ಮುಂತಾದವರು ನಟಿಸಿದ್ದಾರೆ. ಜೆ. ರಾಬರ್ಟ್​ ಆಪನ್​ಹೈಪರ್​ ಅವರ ಪಾತ್ರವನ್ನು ಕಿಲಿಯನ್​ ಮರ್ಫಿ ನಿಭಾಯಿಸಿದ್ದಾರೆ. ರಾಬರ್ಟ್​ ಡೌನಿ ಜೂನಿಯರ್​ ಅವರು ಸಂಪೂರ್ಣ ಗೆಟಪ್​ ಬದಲಾಯಿಸಿಕೊಂಡು ಜನರ ಎದುರು ಬರುತ್ತಿದ್ದಾರೆ. ಟ್ರೇಲರ್​ ನೋಡಿದ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಈಗಾಗಲೇ ಲಕ್ಷಾಂತರ ಟಿಕೆಟ್​ಗಳು ಭಾರತದಲ್ಲಿ ಸೋಲ್ಡ್​​ ಔಟ್​ ಆಗಿವೆ.

ಇದನ್ನೂ ಓದಿ: ಹಾಲಿವುಡ್ ಚಿತ್ರದ ಸಿದ್ಧತೆಗೆ ಭಗದ್ಗೀತೆ ಓದಿಕೊಂಡ ಐರಿಷ್ ನಟ ಕಿಲಿಯನ್ ಮರ್ಫಿ

2ನೇ ಮಹಾಯುದ್ಧದಲ್ಲಿ ಅಮೆರಿಕವು ಜಪಾನ್​ ಮೇಲೆ 2 ಬಾರಿ ಆಟಂ ಬಾಂಬ್​ ಹಾಕಿತ್ತು. ಅದರ ಹಿಂದಿರುವ ವಿವರಗಳನ್ನು ‘ಆಪನ್​ಹೈಮರ್​’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೇ ದೆಹಲಿ, ಮುಂಬೈನಲ್ಲೂ ಈ ಚಿತ್ರದ ಕ್ರೇಜ್​ ಜೋರಾಗಿದೆ. ಒಂದು ವರದಿ ಪ್ರಕಾರ, ಮುಂಬೈನ ಕೆಲವು ಮಲ್ಟಿಪ್ಲೆಕ್ಸ್​ನಲ್ಲಿ ಮೊದಲ ದಿನದ ಟಿಕೆಟ್​ಗಳು 2,450 ರೂಪಾಯಿಗೆ ಸೇಲ್​ ಆಗಿದೆ. ಐಮ್ಯಾಕ್ಸ್​ ವರ್ಷನ್​ನಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ಐಮ್ಯಾಕ್ಸ್​ ಪರದೆಯ ಟಿಕೆಟ್​ಗಳು ಸೋಮವಾರದವರೆಗೆ ಬುಕ್​ ಆಗಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:46 pm, Tue, 18 July 23

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ