Mangalore: ಯುಪಿ ಸಿಎಂ ಯೋಗಿ ಆದಿತ್ಯನಾಥ್ ತುರ್ತು ಗಮನಕ್ಕೆ, 2000 ವರ್ಷದ ಮಂಗಳೂರಿನ ಕದ್ರಿ ಜೋಗಿ ಮಠದಲ್ಲಿ ಎದುರಾಗಿದೆ ಧಾರ್ಮಿಕ ಸಂಘರ್ಷ!

UP CM Yogi Adityanath: ಕರಾವಳಿಯಲ್ಲಿನ ಜೋಗಿ ಸಮುದಾಯದ ಮಂದಿ ಹಣವನ್ನೆಲ್ಲಾ ಒಟ್ಟು ಮಾಡಿ ದೇವಳದಲ್ಲಿ ಹಬ್ಬ ಹರಿದಿನಗಳನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದರು. ಸದ್ಯ ಯೋಗಿ ಆಧಿತ್ಯನಾಥರ ಗುರುಗಳು ಸೇರಿದಂತೆ ಹಿಂದಿನಿಂದಲೂ ಪೂಜಿಸಿಕೊಂಡು ಬಂದಿದ್ದ ಕಾಳಭೈರವ ದೇವರ ವಿಗ್ರಹವನ್ನು ಪುನರ್ ಪ್ರತಿಷ್ಠಾಪನೆ ಮಾಡಬೇಕು, ಮಠದಲ್ಲಿ ನಮಗೂ ಅವಕಾಶ ನೀಡಬೇಕು ಎಂಬುದು ಶಿಷ್ಯ ವರ್ಗದ ಆಗ್ರಹವಾಗಿದೆ.

Follow us
ಸಾಧು ಶ್ರೀನಾಥ್​
|

Updated on:Apr 08, 2023 | 1:33 PM

ಅದು ನಾಥ ಪಂಥಕ್ಕೆ ಸೇರಿದ್ದ ಅತೀ ಪುರಾತನವಾದ ಮಠ. ರಾಜನ ಹೆಸರಿನಲ್ಲಿ ಪೀಠಾಧಿಪತಿಯನ್ನು ಸಂಭೋಧಿಸುವ ಈ ಮಠದಲ್ಲಿ ಇದೀಗ ಮಠಾಧೀಶರು ಹಾಗು ಶಿಷ್ಯ ವರ್ಗದ ನಡುವೆ ಧಾರ್ಮಿಕ ಸಂಘರ್ಷ ಏರ್ಪಟ್ಟಿದೆ. ಎರಡು ಸಾವಿರ ವರ್ಷಕ್ಕೂ ಹಿಂದಿನ ದೇವರ ವಿಗ್ರಹವನ್ನು ತೆಗೆದು, ನೂತನ ಮೂರ್ತಿ ಪ್ರತಿಷ್ಠೆ ಮಾಡಿರುವುದು, ಶಿಷ್ಯ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಈ ಸಂಘರ್ಷಕ್ಕೆ ಕಾರಣವಾಗಿದೆ. ಹಾಗಾದ್ರೆ ಆ ಮಠ ಯಾವುದು, ಏನಿದು ಸಂಘರ್ಷ ಎಂಬ ಡಿಟೇಲ್ಡ್ ಸ್ಟೋರಿ ಇಲ್ಲಿದೆ ನೋಡಿ. ಹೌದು.. ಮಂಗಳೂರಿನ ಕದ್ರಿ ಶ್ರೀ ಜೋಗಿ ಮಠ (Mangalore Kadri Jogi Mutt) ದಕ್ಷಿಣ ಭಾರತದಲ್ಲಿರುವ ನಾಥ ಪಂಥದ ಪ್ರಮುಖ ಕೇಂದ್ರ. ನಾಥ ಪಂಥದ ಅನುಯಾಯಿಗಳಾಗಿರುವ ಕರಾವಳಿ ಭಾಗದ ಜೋಗಿ ಸಮುದಾಯದ ಮಂದಿ ಈ ಮಠದ ಶಿಷ್ಯರಾಗಿ ಈ ಹಿಂದಿನಿಂದಲೂ ಗುರುತಿಸಿಕೊಂಡು ಬಂದಿದ್ದಾರೆ. ಆದ್ರೆ ಇದೀಗ ಈ ಜೋಗಿ ಸಮುದಾಯಕ್ಕೂ (Jogi Community) ಈ ಮಠದ ಪೀಠಾಧೀಶರಿಗೂ ಸಂಘರ್ಷ ಏರ್ಪಟ್ಟಿದೆ.

ಫೆಬ್ರವರಿ ತಿಂಗಳಲ್ಲಿ ನಡೆದ ಕಾಳಭೈರವ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಸಂದರ್ಭ ಮಠದ ಪೀಠಾಧಿಪತಿ ಎರಡು ಸಾವಿರ ವರ್ಷಗಳ ಹಿಂದಿನ ಕಾಲಭೈರವ ದೇವರ ವಿಗ್ರಹ ತೆಗೆದು ಹೊಸದಾದ ಸಣ್ಣ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿರುವುದು ಈ ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗಿದೆ. 2016ರಲ್ಲಿ ನೇಮಕಗೊಂಡ ಪೀಠಾಧಿಪತಿ ರಾಜಸ್ಥಾನ ಮೂಲದ ನಿರ್ಮಲಾನಾಥಜೀ ಶಿಷ್ಯ ವರ್ಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಜೀರ್ಣೋದ್ಧಾರ ಮತ್ತು ಕಾರ್ಯನಿರ್ವಹಣಾ ಸಮಿತಿ ಆರೋಪಿಸಿದೆ.

ಕದ್ರಿ ಜೋಗಿ ಮಠ ನಾಥ ಪಂಥದ ಮೂಲ ಪೀಠವಾಗಿರುವ ಉತ್ತರಪ್ರದೇಶದ ಗೋರಖ್‌ಪುರ ಮಠದ ಅಧೀನದಲ್ಲಿ ಬರುತ್ತೆ. ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಈ ಕದ್ರಿ ಯೋಗೀಶ್ವರ ಮಠ ಮಠಾಧೀಶರ ಆಯ್ಕೆ ಮಾಡುವುದೇ ಈ ಗೋರಖ್‌ಪುರ ಮಠದ ಮಠಾಧೀಶ. ಪ್ರಸ್ತುತ ಗೋರಖ್‌ಪುರ ಮಠದ ಮಠಾಧೀಶರಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೇ 2016ರಲ್ಲಿ ಈ ಮಠದ ಮಹಾರಾಜ್‌ನ ಆಯ್ಕೆ ಮಾಡಿದ್ದರು.

ಹೀಗಾಗಿ ಈ ಸಂಘರ್ಷದ ಬಗ್ಗೆ ಶಿಷ್ಯ ವರ್ಗ ಮೂಲ ಪೀಠದ ಗಮನಕ್ಕೆ ತರುವ ಕೆಲಸ ಮಾಡಿದೆ. ಇದರ ಜೊತೆ ಮಠಕ್ಕೂ ಜೋಗಿ ಸಮಾಜಕ್ಕೂ ಇರುವ ಸಂಬಂಧದ ಬಗ್ಗೆ ದಾಖಲಾತಿಗಳನ್ನು ನ್ಯಾಯಾಲಯಕ್ಕೂ ಸಲ್ಲಿಸಿ ಕಾನೂನು ಹೋರಾಟ ನಡೆಸುತ್ತಿದೆ. ಸದ್ಯ ಈಗ ಇರುವ ಮಠಾಧೀಶ ರಾಜಸ್ಥಾನ ಮೂಲದವರಾದರಿಂದ ಮಂಗಳೂರಿನಲ್ಲಿ ವ್ಯಾಪಾರ ನಡೆಸುವ ರಾಜಸ್ಥಾನದ ಮಾರ್‌ವಾಡಿಗಳು ಹಣಬಲದ ಮೂಲಕ ಪೂರ್ತಿ ಮಠವನ್ನು ತಮ್ಮ ಪಾರುಪತ್ಯಕ್ಕೆ ವಹಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜೋಗಿ ಸಮುದಾಯದ ಮಂದಿ ಆರೋಪಿಸಿದ್ದಾರೆ.

ಕರಾವಳಿಯಲ್ಲಿನ ಜೋಗಿ ಸಮುದಾಯದ ಮಂದಿ ಹಣವನ್ನೆಲ್ಲಾ ಒಟ್ಟು ಮಾಡಿ ದೇವಳದಲ್ಲಿ ಹಬ್ಬ ಹರಿದಿನಗಳನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದರು. ಆದ್ರೆ ಇದೀಗ ಇದಕ್ಕೂ ಅಡ್ಡಿಪಡಿಸುತ್ತಿರುವ ಆರೋಪ ಕೇಳಿಬಂದಿದೆ. ಸದ್ಯ ಯೋಗಿ ಆಧಿತ್ಯನಾಥರ (UP CM Yogi Adityanath) ಗುರುಗಳು ಸೇರಿದಂತೆ ಹಿಂದಿನಿಂದಲೂ ಪೂಜಿಸಿಕೊಂಡು ಬಂದಿದ್ದ ಕಾಳಭೈರವ ದೇವರ ವಿಗ್ರಹವನ್ನು ಪುನರ್ ಪ್ರತಿಷ್ಠಾಪನೆ ಮಾಡಬೇಕು, ಮಠದಲ್ಲಿ ನಮಗೂ ಅವಕಾಶ ನೀಡಬೇಕು ಎಂಬುದು ಶಿಷ್ಯ ವರ್ಗದ ಆಗ್ರಹವಾಗಿದೆ.

ವರದಿ: ಅಶೋಕ್ ಪೂಜಾರಿ, ಟಿವಿ 9, ಮಂಗಳೂರು

Published On - 1:12 pm, Sat, 8 April 23

‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ