ಮಂಗಳೂರು: ನಾಳೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ; ಎಲ್ಲರೂ ಪರೀಕ್ಷೆ ಬರೆಯಲು ಮುಸ್ಲಿಂ ಧರ್ಮಗುರುಗಳ ಕರೆ
ಸುಪ್ರೀಂಕೋರ್ಟ್ನಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ. ಅಲ್ಲಿಯವರೆಗೂ ಕಾಯುವುದರ ಜೊತೆಗೆ ಪರೀಕ್ಷೆ ಮುಖ್ಯ. ಈ ಪರೀಕ್ಷೆ ಜೀವನದ ಅತೀ ಮುಖ್ಯ ಹಂತ. ಗರಿಷ್ಠ ಅನುಕೂಲಗಳನ್ನು ಬಳಸಿ ಪರೀಕ್ಷೆ ಬರೆಯಬೇಕು.
ದಕ್ಷಿಣ ಕನ್ನಡ: ನಾಳೆಯಿಂದ ಎಸ್ಎಸ್ಎಲ್ಸಿ (SSLC) ಪರೀಕ್ಷೆ ಆರಂಭ ಹಿನ್ನಲೆಯಲ್ಲಿ ಎಲ್ಲರೂ ಪರೀಕ್ಷೆ(Exam) ಬರೆಯಲು ಮುಸ್ಲಿಂ ಧರ್ಮಗುರುಗಳು ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದ್ರೆಯ ಸಮಾವೇಶದಲ್ಲಿ ಕರೆ ನೀಡಿದ್ದಾರೆ. ಹಿಜಾಬ್ ಧರಿಸುವ ವಿಚಾರ ಸುಪ್ರೀಂಕೋರ್ಟ್ನಲ್ಲಿದೆ. ಸುಪ್ರೀಂಕೋರ್ಟ್ನಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ. ಅಲ್ಲಿಯವರೆಗೂ ಕಾಯುವುದರ ಜೊತೆಗೆ ಪರೀಕ್ಷೆ ಮುಖ್ಯ. ಈ ಪರೀಕ್ಷೆ ಜೀವನದ ಅತೀ ಮುಖ್ಯ ಹಂತ. ಗರಿಷ್ಠ ಅನುಕೂಲಗಳನ್ನು ಬಳಸಿ ಪರೀಕ್ಷೆ ಬರೆಯಬೇಕು. ಹಾಗಾಗಿ ಎಲ್ಲರೂ ಪರೀಕ್ಷೆ ಬರೆಯಲು ಧರ್ಮಗುರುಗಳಾದ ಉಲೆಮಾ ಎಪಿ ಅಬೂಬಕ್ಕರ್ ಮುಸ್ಲಿಯಾರ್(Ulema AP Aboobacker Musliyar) ಕಾಂತಾಪುರಂ ಕರೆ ನೀಡಿದ್ದಾರೆ.
ಉಡುಪಿ: ನಮ್ಮ ಸಮುದಾಯ ಶಿಕ್ಷಣದಿಂದ ವಂಚಿತರಾಗಬಾರದು: ಮುಸ್ಲಿಂ ಸಮುದಾಯಕ್ಕೆ ಉಡುಪಿ ಖಾಜಿ ಕಿವಿಮಾತು
ಕರ್ನಾಟಕದಲ್ಲಿ ಸೋಮವಾರದಿಂದ (ಮಾರ್ಚ್ 28) ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಲಿದೆ. ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಕೆಲ ವಿದ್ಯಾರ್ಥಿನಿಯರು ವಿದ್ಯಾಭ್ಯಾಸಕ್ಕಿಂತಲೂ ಧರ್ಮವೇ ಮುಖ್ಯ ಎಂಬರ್ಥದಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಉಡುಪಿಯ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡ ಖಾಜಿ ಅಬ್ದುಲ್ ಹಮೀದ್ ಮುಸಲಿಯಾರ್ ಮಾಣಿ, ‘ಪೋಷಕರು ತಮ್ಮ ಮಕ್ಕಳ ಪರೀಕ್ಷೆ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸೂಕ್ಷ್ಮ ವಿಷಯಗಳನ್ನು ದೀರ್ಘ ದೃಷ್ಟಿಯಿಂದ ನೋಡಬೇಕು. ದೇಶದಲ್ಲಿ ಕೋಮು ಸೌಹಾರ್ದತೆಗೆ ನಮ್ಮಿಂದ ಧಕ್ಕೆ ಆಗಬಾರದು’ ಎಂದು ಮನವಿ ಮಾಡಿದರು.
ಸಮವಸ್ತ್ರದ ಜತೆಗೆ ಹಿಜಾಬ್ ವಿಚಾರವೂ ಇದೀಗ ಸುಪ್ರೀಂಕೋರ್ಟ್ನಲ್ಲಿದೆ. ಸುಪ್ರೀಂಕೋರ್ಟ್ನಲ್ಲಿ ನ್ಯಾಯ ಸಿಗುವ ಸಂಪೂರ್ಣ ವಿಶ್ವಾಸವಿದೆ. ನಮ್ಮ ಸಮುದಾಯ ಶಿಕ್ಷಣದಿಂದ ವಂಚಿತರಾಗಬಾರದು. ಭಾರತ ಒಂದು ಜಾತ್ಯತೀತ ರಾಷ್ಟ್ರ. ಸಂವಿಧಾನವು ಅವರವರ ಧರ್ಮ ಆಚರಣೆಗೆ ಅವಕಾಶ ನೀಡಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ತಪ್ಪು ಮಾಹಿತಿಗಳು ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ ಎಂದು ನುಡಿದರು.
ಇದನ್ನೂ ಓದಿ:
ಸ್ವಾಮೀಜಿಗಳ ಬಟ್ಟೆ ಹಿಜಾಬ್ಗೆ ಹೋಲಿಸಿ ಹೇಳಿಕೆ ವಿಚಾರ: ಟ್ವೀಟ್ ಮಾಡಿ, ಅಪಪ್ರಚಾರವೆಂದ ವಿಪಕ್ಷ ನಾಯಕ ಸಿದ್ದರಾಮಯ್ಯ!
ನಾಳೆಯಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆ; ಹಿಜಾಬ್ ಧರಿಸಿಕೊಂಡು ಬಂದರೆ ಎಕ್ಸಾಂಗೆ ಅವಕಾಶ ಇಲ್ಲ
Published On - 5:10 pm, Sun, 27 March 22