Uppinangady Blast: ಟಯರ್ ವರ್ಕ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಪೋಟಗೊಂಡು ಕಾರ್ಮಿಕ ಸಾವು

ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಎಂಬಲ್ಲಿ ಟಯರ್ ವರ್ಕ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಪೋಟವಾಗಿದೆ.

Uppinangady Blast:  ಟಯರ್ ವರ್ಕ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಪೋಟಗೊಂಡು ಕಾರ್ಮಿಕ ಸಾವು
ಟಯರ್ ವರ್ಕ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ ಸ್ಪೋಟ
Updated By: ರಮೇಶ್ ಬಿ. ಜವಳಗೇರಾ

Updated on: Jan 18, 2023 | 3:49 PM

ಮಂಗಳೂರು: ಟಯರ್ ವರ್ಕ್ ಅಂಗಡಿಯಲ್ಲಿ ಏರ್ ಕಂಪ್ರೆಸರ್ (Tyre compressor) ಸ್ಪೋಟಗೊಂಡು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಇಂದು (ಜನವರಿ 18) ಪುತ್ತೂರು ತಾಲೂಕಿನ ಉಪ್ಪಿನಂಗಡಿಯ(Uppinangady) ಗಾಂಧಿ ಪಾರ್ಕ್ ಎಂಬಲ್ಲಿ ನಡೆದಿದೆ. ಅಲಂಕಾರು ಗ್ರಾಮದ ರಾಜೇಶ್ ಪೂಜಾರಿ(43) ಮೃತ ಕಾರ್ಮಿಕ. ಉಪ್ಪಿನಂಗಡಿ ಗಾಂಧಿ ಪಾರ್ಕ್ (Gandhi Park)ಬಳಿ ಇರುವ ಇಂಡಿಯನ್ ಟಯರ್ ಅಂಗಡಿಯಲ್ಲಿ ಟಯರ್ ರಿಸೋಲ್ ಕೆಲಸದ ವೇಳೆ ಏಕಾಏಕಿ ಕಂಪ್ರೆಸರ್ ಸ್ಫೋಟವಾಗಿದೆ.

ಟಯರ್ ರಿಸೋಲ್ ಮಾಡುತ್ತಿದ್ದಾಗ ಏಕಾಏಕಿ ಏರ್ ಕಂಪ್ರೆಸರ್ ಸ್ಫೋಟವಾಗಿದೆ. ಇದರಿಂದ ತೀವ್ರವಾಗಿ ಗಾಯೊಂಡಿದ್ದ ರಾಜೇಶ್ ಪೂಜಾರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕಾರ್ಮಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಗ್ಯಾಧಿಕಾರಿ ಆತ್ಮಹತ್ಯೆ

ಕೋಲಾರ: ಜಿಲ್ಲೆ ಮಾಲೂರು ತಾಲೂಕಿನ ಬಾಳಗಾನಹಳ್ಳಿಯ ಸಮುದಾಯದ ಆರೋಗ್ಯಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಸ್ತಿ ಸರ್ಕಾರಿ ಆಸ್ಪತ್ರೆಯ ವಸತಿ ಗೃಹದಲ್ಲಿ ಇಂದು(ಜನವರಿ 18) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವಾನಂದ ಜಕ್ಕಣ್ಣನವರ್(24)​ ಆತ್ಮಹತ್ಯೆ ಮಾಡಿಕೊಂಡ ಸಮುದಾಯ ಆರೋಗ್ಯಾಧಿಕಾರಿ. ಮೂಲತಃ ಬೆಳಗಾವಿ ಜಿಲ್ಲೆಯ ಇಂಚಲ ಗ್ರಾಮದ ಶಿವಾನಂದ ಅವರು ಕಳೆದ 9 ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದರು. ಆದ್ರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇನ್ನು ಘಟನಾ ಸ್ಥಳಕ್ಕೆ ಮಾಸ್ತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:18 pm, Wed, 18 January 23