ಕೊವಿಡ್ ನಿಯಮ ಉಲ್ಲಂಘನೆ: ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕಿಕ್ಕಿರಿದು ಕುಣಿದ ಜನ
ಕೊವಿಡ್ ಭಯ ಲೆಕ್ಕಿಸದೇ ನಿಯಮ ಉಲ್ಲಂಘಿಸಿ ತಡ ರಾತ್ರಿಯವರೆಗೆ ಭರ್ಜರಿ ಡ್ಯಾನ್ಸ್ ಕಾರ್ಯಕ್ರಮವನ್ನ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು, ಆರೋಪದ ಮಾತುಗಳು ಕೇಳಿ ಬರುತ್ತಿವೆ.

ಗದಗ: ಕೊವಿಡ್ ಭಯ ಲೆಕ್ಕಿಸದೇ ನಿಯಮ ಉಲ್ಲಂಘಿಸಿ ತಡ ರಾತ್ರಿಯವರೆಗೆ ಭರ್ಜರಿ ಡ್ಯಾನ್ಸ್ ಕಾರ್ಯಕ್ರಮವನ್ನ ರೋಣ ತಾಲೂಕಿನ ಮಾಡಲಗೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದು, ಅನುಮತಿ ಇಲ್ಲದೇ ಕಾರ್ಯಕ್ರಮ ಆಯೋಜಿಸಿರುವುದಾಗಿ ಗ್ರಾಮದ ಇಬ್ಬರು ಮುಖಂಡರ ವಿರುದ್ಧ ಆರೋಪದ ಮಾತು ಕೇಳಿ ಬಂದಿದೆ.
ಒಂದೇ ಗ್ರಾಮದಲ್ಲಿ ಎರಡು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಕಿಕ್ಕಿರಿದು ಜನ ಸೇರಿದ್ದರು. ಕೊವಿಡ್ ನಿಯಮದ ಕುರಿತಾಗಿ ಯಾವುದೇ ಗಮನ ಇಲ್ಲದೇ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾಹಿತಿ ಇದ್ದರೂ ಕಡಿವಾಣ ಹಾಕುವಲ್ಲಿ ರೋಣ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ನೀಡಿಲ್ಲ ಎಂದು ರೋಣ ತಹಶೀಲ್ದಾರ ಜಕ್ಕಣ್ಣವರ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.


ದೀಪಾವಳಿ ಹಿನ್ನೆಲೆ ಮಾರುಕಟ್ಟೆಯಲ್ಲಿ ಜನ ಜಂಗುಳಿ: ಕೊವಿಡ್ ನಿಯಮ ಉಲ್ಲಂಘನೆ, ಮಾರ್ಷಲ್‌ಗಳು ನಾಪತ್ತೆ




