ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದ್ರೂ ಆನ್ ಲೈನ್ ಗೇಮ್ ಗಳದ್ದೇ ಸದ್ದು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ, ಗಲ್ಲಿ ಗಲ್ಲಿಗಳಲ್ಲೂ ಅಪಾಯಕಾರಿ ಗೇಮ್ ನದ್ದೇ ಕಾರುಬಾರು. ಇದೀಗ ಕಾಲೇಜಿಗಳ ಫೆಸ್ಟ್ ನಲ್ಲೂ ಪಬ್ಜಿ, ಟಿಕ್ ಟಾಕ್ ನ ಹವಾ ಶುರುವಾಗಿದೆ..
ಕಾಲೇಜುಗಳಲ್ಲಿ ಫೆಸ್ಟ್, ಮೇಳ ಸರ್ವೇಸಾಮಾನ್ಯ. ಆದರೆ ಮೊದಲೆಲ್ಲ ಪೆಸ್ಟ್ ಗಳಲ್ಲಿ ದೇಶಿ ಆಟಗಳಿಗೆ ಹೆಚ್ಚಿನ ಪ್ರೂತ್ಸಾಹ ನೀಡುತ್ತಿದ್ದರು ಆದರೆ ಈಗ ಅಪಾಯಕಾರಿ ಆಟಗಳಿಗೆ ಮಾರು ಹೋದ ಯುವಕರು ದೇಶಿ ಆಟಗಳನ್ನು ಮೂಲೆ ಗುಂಪು ಮಾಡಿದ್ದಾರೆ. ಇಲ್ಲೊಂದು ಕಾಲೇಜಿನಲ್ಲಿ ಟ್ರೆಂಡ್ ಗೆ ತಕ್ಕ ಹಾಗೆ ಬದಲಾವಣೆಯಂತೆ ಪಬ್ಜಿ, ಟಿಕ್ ಟಾಕ್ ಗಳನ್ನು ಆಯೋಜಿಸಲಾಗಿದೆ.
ಹೆಬ್ಬಾಳದ ಸಿಂಧಿ ಕಾಲೇಜು ಈ ಬಾರಿಯ ಅಪಾಯಕಾರಿ ಪಬ್ಜಿ, ಟಿಕ್ ಟಾಕ್ ಫೆಸ್ಟ್ ಆಯೋಜಿಸಿದೆ. ಇಗಾಗಲೇ ಈ ಆಟಗಳಿಂದ ಅನಾಹುತಗಳು ಹೆಚ್ಚಾಗಿದ್ದು, ಕಾಲೇಜು ಮಂಡಳಿ ಮಾತ್ರ ವಿದ್ಯಾರ್ಥಿಗಳ ತಾಳಕ್ಕೆ ಹೆಜ್ಜೆ ಹಾಕಿದೆ. ಇಷ್ಟೆಲ್ಲಾ ಸಾವು ನೋವುಗಳನ್ನು ಕಂಡರು ಕಾಲೇಜುಗಳಲ್ಲಿ ಪಬ್ಜಿ, ಟಿಕ್ ಟಾಕ್ ಗಳ ಅಯೋಜನೆ ನಡಿತಾನೆ ಇದ್ದು, ಸಾರ್ವಜನಿಕರು ಕಾಲೇಜು ಮಂಡಳಿ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.