ದಾವಣಗೆರೆ: ನಟ ದರ್ಶನ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ನಗರದಲ್ಲಿರುವ ‘ಯಜಮಾನ’ನ ಅಭಿಮಾನಿಗಳ ತಮ್ಮ ನೆಚ್ಚಿನ ಹೀರೋ ಬರ್ತ್ ಡೇನ ಕೊಂಚ ಡಿಫರೆಂಟ್ ಆಗಿ ಆಚರಿಸಿದರು. ಹೌದು, ರಾಜ್ಯದ ಎಲ್ಲೆಡೆ ದರ್ಶನ್ ಫ್ಯಾನ್ಸ್ ಕೇಕ್ ಕತ್ತರಿಸಿ ಸಂಭ್ರಮಿಸಿದರೆ ಇತ್ತ ಬೆಣ್ಣೆನಗರಿಯ ದಚ್ಚು ಅಭಿಮಾನಿಗಳು ನಗರದ ಕೊರೊನಾ ವಾರಿಯರ್ಸ್ಗೆ ಸನ್ಮಾನ ಸಮಾರಂಭವನ್ನು ಆಯೋಜಿಸಿದ್ದರು.
ಜಿಲ್ಲೆಯ ಹೆಬ್ಬಾಳದಲ್ಲಿ ನಡೆದ ಸಮಾರಂಭದ ವೇಳೆ ದರ್ಶನ್ ಅಭಿಮಾನಿಗಳ ಬಳಗದಿಂದ ಕೊರೊನಾವಾರಿಯರ್ಸ್ಗೆ ಸನ್ಮಾನ ಮಾಡಲಾಯಿತು. ಜೊತೆಗೆ, ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಪೆನ್ಗಳನ್ನು ಉಡುಗೊರೆಯಾಗಿ ನೀಡಲಾಯಿತು. ಇದಲ್ಲದೆ, ಬಿಸಿಯೂಟ ತಯಾರಕರಿಗೆ ಬಟ್ಟೆಗಳನ್ನು ಸಹ ವಿತರಣೆ ಮಾಡಲಾಯಿತು.ಇದಾದ ಬಳಿಕ, ದರ್ಶನ್ ಅಭಿಮಾನಿ ಬಳಗ ಗ್ರಾಮಸ್ಥರಿಗೆ ಊಟದ ವ್ಯವಸ್ಥೆ ಸಹ ಮಾಡಿದರು.
ಇದನ್ನೂ ಓದಿ: D Boss Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಗುಣಗಳ ಬಗ್ಗೆ ನಿಮಗೆ ಗೊತ್ತಾ?
Published On - 9:59 pm, Tue, 16 February 21