TV9 Impact ಭ್ರಷ್ಟಾಚಾರ ಆರೋಪ ಹೊತ್ತಿದ್ದ BDA ಅಧಿಕಾರಿಗೆ ಎತ್ತಂಗಡಿ ಶಿಕ್ಷೆ
ಟಿವಿ9 ವರದಿ ಬಳಿಕ BDAನಲ್ಲಿ ಭಾರಿ ಬದಲಾವಣೆ ಸಂಭವಿಸಿದೆ. ನಿಮ್ಮ ಸುದ್ದಿವಾಹಿನಿಯ ವರದಿ ಬೆನ್ನಲ್ಲೇ ಭ್ರಷ್ಟಾಚಾರ ಆರೋಪ ಹೊತ್ತಿದ್ದ BDA ಅಧಿಕಾರಿಗೆ ಎತ್ತಂಗಡಿ ಶಿಕ್ಷೆ ಸಿಕ್ಕಿದೆ. ಭ್ರಷ್ಟಾಚಾರ ಆರೋಪ ಹೊತ್ತಿದ್ದ N.S.ಚಿದಾನಂದ್ ಅವರನ್ನು ಎತ್ತಂಗಡಿ ಮಾಡಲಾಗಿದೆ.
ಬೆಂಗಳೂರು: ಟಿವಿ9 ವರದಿ ಬಳಿಕ BDAನಲ್ಲಿ ಭಾರಿ ಬದಲಾವಣೆ ಸಂಭವಿಸಿದೆ. ನಿಮ್ಮ ಸುದ್ದಿವಾಹಿನಿಯ ವರದಿ ಬೆನ್ನಲ್ಲೇ ಭ್ರಷ್ಟಾಚಾರ ಆರೋಪ ಹೊತ್ತಿದ್ದ BDA ಅಧಿಕಾರಿಗೆ ಎತ್ತಂಗಡಿ ಶಿಕ್ಷೆ ಸಿಕ್ಕಿದೆ. ಭ್ರಷ್ಟಾಚಾರ ಆರೋಪ ಹೊತ್ತಿದ್ದ N.S.ಚಿದಾನಂದ್ ಅವರನ್ನು ಎತ್ತಂಗಡಿ ಮಾಡಲಾಗಿದೆ.
ಹಲವು ಹಗರಣಗಳಲ್ಲಿ ಚಿದಾನಂದ್ ಹೆಸರು ಕೇಳಿ ಬಂದಿತ್ತು. ಈ ನಡುವೆ, BDA ಅಧ್ಯಕ್ಷ S.R.ವಿಶ್ವನಾಥ್ ಸಹ ನೇರ ಆರೋಪ ಮಾಡಿದ್ದರು. ಚಿದಾನಂದ್ BDA ನಲ್ಲಿ ಉಪ ಕಾರ್ಯದರ್ಶಿ-1 ಹುದ್ದೆಯಲ್ಲಿದ್ದರು. ಈ ವೇಳೆ, ಭವಾನಿ ಹೌಸಿಂಗ್ ಸೊಸೈಟಿ ಗೋಲ್ಮಾಲ್ನಲ್ಲಿ ಭಾಗಿಯಾಗಿದ್ದರು ಎಂದು ವಿಶ್ವನಾಥ್ ಆರೋಪಿಸಿದ್ದರು. ಈ ಕುರಿತು, ಟಿವಿ9ನಲ್ಲಿ ನಿರಂತರ ವರದಿ ಪ್ರಸಾರ ಮಾಡಲಾಗಿತ್ತು. ಇದೀಗ, ಚಿದಾನಂದ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಎನ್.ಎಸ್.ಚಿದಾನಂದ ಅವರನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿಯಲ್ಲಿ ಉಪ ನಿರ್ದೇಶಕರಾಗಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
ಜೊತೆಗೆ, BDA ಗೆ 3 ಹೊಸ ಉಪ ಕಾರ್ಯದರ್ಶಿಗಳ ನೇಮಕವಾಗಿದೆ. ಉಪಕಾರ್ಯದರ್ಶಿ-1 ಆಗಿದ್ದ N.S.ಚಿದಾನಂದ್ ಸ್ಥಾನಕ್ಕೆ ಡಾ.ಮಧು.ಎನ್.ಎನ್ ನೇಮಕಗೊಂಡಿದ್ದಾರೆ. ಇದಲ್ಲದೆ, ಖಾಲಿಯಿದ್ದ ಉಪಕಾರ್ಯದರ್ಶಿ-3ರ ಹುದ್ದೆಗೆ ಡಾ.B.R.ಹರೀಶ್ ಮತ್ತು ಖಾಲಿ ಇದ್ದ ಉಪಕಾರ್ಯದರ್ಶಿ-4ರ ಹುದ್ದೆಗೆ ಗೀತಾ ಹುಡೇದ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ, ಉಪಕಾರ್ಯದರ್ಶಿ 3, 4ರ ಹುದ್ದೆಯಲ್ಲಿದ್ದ ರಾಜು ಹಾಗೂ ಶಿವೇಗೌಡನನ್ನು ಅಮಾನತು ಮಾಡಲಾಗಿತ್ತು.
ಇದನ್ನೂ ಓದಿ: Bhaskar Rao ರೈಲ್ವೆ ADGP ಆಗಿ ಭಾಸ್ಕರ್ ರಾವ್ ವರ್ಗಾವಣೆ
Published On - 7:35 pm, Tue, 16 February 21