Bhaskar Rao ರೈಲ್ವೆ ADGP ಆಗಿ ಭಾಸ್ಕರ್ ರಾವ್ ವರ್ಗಾವಣೆ

Bhaskar Rao: ರೈಲ್ವೆ ADGP ಆಗಿ IPS ಅಧಿಕಾರಿ ಭಾಸ್ಕರ್ ರಾವ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಭಾಸ್ಕರ್​ ರಾವ್ ಈ ಹಿಂದೆ ಆಂತರಿಕ ಭದ್ರತಾ ವಿಭಾಗದ ADGPಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

  • TV9 Web Team
  • Published On - 19:20 PM, 16 Feb 2021
Bhaskar Rao ರೈಲ್ವೆ ADGP ಆಗಿ ಭಾಸ್ಕರ್ ರಾವ್ ವರ್ಗಾವಣೆ
ಭಾಸ್ಕರ್ ರಾವ್

ಬೆಂಗಳೂರು: ರೈಲ್ವೆ ADGP ಆಗಿ IPS ಅಧಿಕಾರಿ ಭಾಸ್ಕರ್ ರಾವ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಭಾಸ್ಕರ್​ ರಾವ್ ಈ ಹಿಂದೆ ಆಂತರಿಕ ಭದ್ರತಾ ವಿಭಾಗದ ADGPಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇದೀಗ, ಭಾಸ್ಕರ್​ ರಾವ್ ಸ್ಥಾನಕ್ಕೆ ಅರುಣ್​ ಚಕ್ರವರ್ತಿ ಅವರನ್ನು ನೇಮಕ ಮಾಡಲಾಗಿದೆ. ರೈಲ್ವೆ ADGPಯಾಗಿದ್ದ ಅರುಣ್​ ಚಕ್ರವರ್ತಿ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ಟ್ರಾನ್ಸ್​ಫರ್​ ಮಾಡಲಾಗಿದೆ.

ಇದಲ್ಲದೆ, ಐವರು ಹಿರಿಯ IPS ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಅಧಿಕಾರಿಗಳ ವರ್ಗಾವಣೆ ವಿವರ ಹೀಗಿದೆ.

ಭಾಸ್ಕರ್ ರಾವ್, ADGP, ರೈಲ್ವೆ
ಪ್ರಶಾಂತ್ ಕುಮಾರ್ ಠಾಕೂರ್, ADGP, ಲೋಕಾಯುಕ್ತ
ಡಾ.ಎಸ್.ಮೂರ್ತಿ, ADGP & MD, KSPHC (ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ)
ಡಾ.ಕೆ.ರಾಮಚಂದ್ರರಾವ್, ADGP, BMTF
ಅರುಣ್ ಚಕ್ರವರ್ತಿ, ADGP, ಆಂತರಿಕ ಭದ್ರತಾ ವಿಭಾಗ

ಇದನ್ನೂ ಓದಿ: JC Madhuswamy ‘ಸಿದ್ದರಾಮಯ್ಯನವ್ರು ಏನು‌ ಬೇಕಾದ್ರೂ ತಿನ್ನಬಹುದು; ಈ ದೇಶದಲ್ಲಿ ಪೂಜೆ, ಊಟ ವೈಯಕ್ತಿಕ ಹಕ್ಕು’