ಹಾವೇರಿಯಲ್ಲೂ ದರ್ಶನ್​ ಗ್ಯಾಂಗ್ ಕ್ರೌರ್ಯ ಬೆಳಕಿಗೆ: ಆಟೋಗ್ರಾಫ್ ಕೇಳಲು ಹೋಗಿದ್ದ ಅಭಿಮಾನಿಗಳ ಮೇಲೆ ಹಲ್ಲೆ

|

Updated on: Jun 15, 2024 | 4:33 PM

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಕಳೆದ 4 ದಿನದಿಂದ ಪೊಲೀಸ್‌ ಕಷ್ಟಡಿಯಲ್ಲಿದ್ದಾರೆ. ಪ್ರಕರಣ ಬಗೆದಷ್ಟು ಬೆಚ್ಚಿ ಬೀಳಿಸುವ ಸಂಗತಿಗಳು ಹೊರಬರುತ್ತಿವೆ. ಈ ಮಧ್ಯೆ ಡಿ ಗ್ಯಾಂಗ್​ನ ಕ್ರೌರ್ಯ ದರ್ಶನ ಹಾವೇರಿಯಲ್ಲೂ ಪ್ರಕರಣ ಬೆಳಕಿಗೆ ಬಂದಿದೆ. ಸಂಗೊಳ್ಳಿ ರಾಯಣ್ಣ ಶತಮಾನೋತ್ಸವದ ದಿನದಂದು ದರ್ಶನ್ ಹಿಂಬಾಲಕರಿಂದ ಅಭಿಮಾನಿಗಳ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ.

ಹಾವೇರಿಯಲ್ಲೂ ದರ್ಶನ್​ ಗ್ಯಾಂಗ್ ಕ್ರೌರ್ಯ ಬೆಳಕಿಗೆ: ಆಟೋಗ್ರಾಫ್ ಕೇಳಲು ಹೋಗಿದ್ದ ಅಭಿಮಾನಿಗಳ ಮೇಲೆ ಹಲ್ಲೆ
ಹಾವೇರಿಯಲ್ಲೂ ದರ್ಶನ್​ ಗ್ಯಾಂಗ್ ಕೌರ್ಯ ಬೆಳಕಿಗೆ: ಆಟೋಗ್ರಾಫ್ ಕೇಳಲು ಹೋಗಿದ್ದ ಅಭಿಮಾನಿಗಳ ಮೇಲೆ ಹಲ್ಲೆ
Follow us on

ಹಾವೇರಿ, ಜೂನ್​ 15: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Darshan) ಕಳೆದ 4 ದಿನದಿಂದ ಪೊಲೀಸ್‌ ಕಷ್ಟಡಿಯಲ್ಲಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ 4 ರಾತ್ರಿ ಕಳೆದಿರುವ ದರ್ಶನ್, ಅಭಿಮಾನಿ ಕೊಂದಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇನ್ನು ಪ್ರಕರಣ ಬಗೆದಷ್ಟು ಬೆಚ್ಚಿ ಬೀಳಿಸುವ ಸಂಗತಿಗಳು ಹೊರಬರುತ್ತಿವೆ. ಈ ಮಧ್ಯೆ ಡಿ ಗ್ಯಾಂಗ್​ನ ಕ್ರೌರ್ಯ ದರ್ಶನ ಹಾವೇರಿಯಲ್ಲೂ ಪ್ರಕರಣ ಬೆಳಕಿಗೆ ಬಂದಿದೆ.

ಸಂಗೊಳ್ಳಿ ರಾಯಣ್ಣ ಶತಮಾನೋತ್ಸವದ ದಿನದಂದು ದರ್ಶನ್ ಹಿಂಬಾಲಕರಿಂದ ಅಭಿಮಾನಿಗಳ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ. ಆಟೋಗ್ರಾಫ್ ಕೇಳಲು ಹೋದ 4 ಜನ ಅಭಿಮಾನಿಗಳನ್ನು ಬಸ್​ನಲ್ಲಿ ಊರ ಹೊರಗೆ ಕರೆದು ಕೊಂಡು ಹೋಗಿ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ್ದಾರೆ. ದರ್ಶನ್ ಮುಂದೆಯೇ ಅಭಿಮಾಗಳಿಗೆ ಕೆಟ್ಟ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ‘ಲೋಫರ್ ಫ್ರೆಂಡ್ಸ್​ನಿಂದ ದರ್ಶನ್ ಹಾಳಾದ, ಆತನಿಗೆ ಶಿಕ್ಷಣದ ಕೊರತೆ ಇದೆ’; ನಟನ ಗುರುವಿನ ಮಾತು

ಘಟನೆ ಬಗ್ಗೆ ಚಿತ್ರಮಂದಿರದ ಮಾಲೀಕ್ ನಾಗನಗೌಡ ಪಾಟೀಲ್ ಪ್ರತಿಕ್ರಿಯಿಸಿದ್ದು, ಹಲ್ಲೆಗೊಳಗಾದ ಅಭಿಮಾನಿಗಳು ನಂತರ ರಟ್ಟಿಹಳ್ಳಿಯ ಚಿತ್ರಮಂದಿರಕ್ಕೆ ನೂಗ್ಗಿ ದರ್ಶನ್ ಕಟೌಟ್ ಹರಿದು ಸಂಗೊಳ್ಳಿ ರಾಯಣ್ಣ ಚಲನಚಿತ್ರ ನಿಲ್ಲಿಸುವಂತೆ ಪಟ್ಟು ಹಿಡಿದಿದ್ದರು. ಬಳಿಕ ಅವರನ್ನು ಸಮಾಧಾನ ಮಾಡಿ ಕಳಿಸಿದ್ದರು.

ಸಂಗೊಳ್ಳಿ ರಾಯಣ್ಣ ಚಿತ್ರ ಮೊದಲ ಶೋ ನೀಡಲು ನಾಗನಗೌಡ ಪಟ್ಟು ಹಿಡಿದಿದ್ದರು. ಆ ವೇಳೆ ದರ್ಶನ್​ ಎದುರು ದಿನಕರ್ ತೂಗುದೀಪ ಕಪಾಳಮೋಕ್ಷ ಮಾಡಿದ್ದರು ಎಂದಿದ್ದಾರೆ.

ಇದನ್ನೂ ಓದಿ: ರಾತ್ರಿ ಶರಣಾಗ್ತೀನಿ ಅಂದ್ರು, ಬೆಳಿಗ್ಗೆ ಉಲ್ಟಾ ಹೊಡೆದ್ರು; ದರ್ಶನ್​ಗೆ ಮೊದಲೇ ಶುರುವಾಗಿತ್ತು ಟೆನ್ಷನ್

ದೂರು ನೀಡಲು ಕುಟುಂಬಸ್ಥರು ಮನವಿ ಮಾಡಿದ್ದರು, ಆದರೆ ದರ್ಶನ ಅಭಿಮಾನದಿಂದ ನಾಗನಗೌಡ ಹಿಂದೆ ಸರಿದೆ. ದೇವರಂತೆ ಇದ್ದ ನಟ ಈಗ ಯಮನಾಗಿದ್ದಾನೆ ಎಂದು ಚಿತ್ರಮಂದಿರ ಮಾಲೀಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಕಿಗೆ ಲಾಕ್​ ಆಗಿರುವ ದರ್ಶನ್​ಗೆ ಪೊಲೀಸರ ವಿಚಾರಣೆ ಮೇಲೆ ವಿಚಾರಣೆ ಮಾಡುತ್ತಿದ್ದಾರೆ. ನಿನ್ನೆ ಮಧ್ಯರಾತ್ರಿ ಯಾರಿಗೂ ಗೊತ್ತಾಗದಂತೆ ದರ್ಶನ್​ನನ್ನ ಆರ್​ಆರ್​ ನಗರ ನಿವಾಸಕ್ಕೆ ಕರೆದೊಯ್ದಿರುವ ಪೊಲೀಸರು, ಸ್ಥಳ ಮಹಜರು ಮಾಡಿದ್ದಾರಂತೆ. ರೇಣುಕಾಸ್ವಾಮಿ ಕೊಲೆಯಾದ ದಿನ ದರ್ಶನ್​ ಬಳಸಿದ್ದ ಸೋಪು, ಟವೆಲ್​, ಅಂದು ಧರಿಸಿದ್ದ ಬಟ್ಟೆ, ಒಳ ಉಡುಪು, ಟೂಥ್​ ಬ್ರೆಶ್​, ಬಕೆಟ್​ ಸೇರಿ ಇತರೆ ವಸ್ತುಗಳನ್ನ ಸೀಜ್​ ಮಾಡಿದ್ದಾರೆ ಅನ್ನೋ ಬಗ್ಗೆ ಟಿವಿ9 ಗೆ ಎಕ್ಸ್​​ಕ್ಲೂಸಿವ್​ ಮಾಹಿತಿ ಸಿಕ್ಕಿದೆ.

ವರದಿ: ಅಣ್ಣಪ್ಪ ಬಾರ್ಕಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:13 pm, Sat, 15 June 24