ಬೆಂಗಳೂರು: ಹಬ್ಬದ ಋತುವಿನಲ್ಲಿ ಅಗತ್ಯ ಸಾಮಾಗ್ರಿಗಳ ಬೆಲೆ ಏರುವುದು ಸಾಮಾನ್ಯ. ಜನರು ಹೆಚ್ಚು ಓಡಾಡುವ ಈ ಸೀಸನ್ ಅನ್ನು ಬಂಡವಾಳವನ್ನಾಗಿ ಮಾಡಿಕೊಳ್ಳಲು ಮುಂದಾಗಿದ್ದ ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು ಹೆಚ್ಚಿಸಿದ್ದರು. ಇದರ ವಿರುದ್ಧ ಸಾರಿಗೆ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಇದೀಗ ಆಯುಧ ಪೂಜೆ ಹಿನ್ನೆಲೆ ಅಗತ್ಯ ಸಾಮಾಗ್ರಿಗಳ ಬೆಲೆಯನ್ನು ದಪ್ಪಟ್ಟು ಏರಿಸಲಾಗಿದೆ. ಆಯುಧ ಪೂಜೆಗೆ ಅಗತ್ಯವಾಗಿರುವ ಹೂವು, ಕುಂಬಳಕಾಯಿ, ಬಾಳೆ ಕಂಬ ದರ ದುಪ್ಪಟ್ಟಾಗಿದ್ದು, ಹೆಚ್ಚಿನ ಬೆಲೆ ತೆತ್ತು ಸಾಮಾಗ್ರಿಗಳನ್ನು ಖರೀದಿಸುವ ಸ್ಥಿತಿ ಸಾರ್ವಜನಿಕರದ್ದಾಗಿದೆ. ಆದರೆ ತರಕಾರಿ ಮತ್ತು ಹಣ್ಣುಗಳ ಬೆಲೆಯಲ್ಲಿ ಯಾವುದೇ ದರ ಏರಿಕೆಗಳು ಆಗಿಲ್ಲ ಎಂಬುದು ಕೊಂಚ ಸಮಾಧಾನಕರ ಸಂಗತಿ.
ಬೆಂಗಳೂರು ನಗರದ ಕೆ.ಆರ್ ಮಾರುಕಟ್ಟೆಯಲ್ಲಿ ಹಬ್ಬಕ್ಕೂ ಎರಡು ದಿನ ಮುನ್ನವೇ ಖರೀದಿ ಭರಾಟೆ ಜೋರಾಗಿದೆ. ನಾಳೆ (ಅ.3) ನಾಡಿದ್ದು (ಅ.4) ಹೂ, ಕುಂಬಳಕಾಯಿ ದರ ಮತ್ತಷ್ಟ ಹೆಚ್ಚಳ ಸಾಧ್ಯತೆ ಹಿನ್ನೆಲೆ ಗ್ರಾಹಕರು ಇಂದೇ ಖರೀದಿಗೆ ಮುಂದಾಗಿದ್ದಾರೆ. ಮಳೆ, ಬೆಳೆ ನಷ್ಟ ಹಿನ್ನೆಲೆ ದರ ಏರಿಕೆ ಮಾಡಲಾಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಕಳೆದ ವಾರ 10 ರೂಪಾಯಿ ಇದ್ದ ಕೆ.ಜಿ ಕುಂಬಳಕಾಯಿ ಇಂದು 30ರಿಂದ 40 ರೂಪಾಯಿಗೆ ಏರಿಕೆಯಾಗಿದೆ. ನಾಳೆ ಮತ್ತು ನಾಡಿದ್ದು ಮತ್ತಷ್ಟು ದರ ಏರಿಕೆ ಸಾಧ್ಯತೆ ಇದೆ. ಇದೇ ಅವಧಿಯಲ್ಲಿ ಹೂವಿನ ದರಗಳಲ್ಲೂ ಹೆಚ್ಚಳವಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ