ಬಿಜೆಪಿ ಪರಿಸ್ಥಿತಿ ನೋಡಿದರೆ ನಮಗೆ ಅಯ್ಯೋ ಅನಿಸುತ್ತಿದೆ: ಶಾಸಕ ಪ್ರಿಯಾಂಕ ಖರ್ಗೆ ವಾಗ್ಧಾಳಿ

ಜನರಿಗೆ ಏನು ಬೇಕಾಗಿದೆ, ನೀವು ಏನು ಮಾತಾಡ್ತಿದ್ದೀರಾ. ದೇಶವನ್ನು ಒಗ್ಗೂಡಿಸುವ ಯಾತ್ರೆ ಇದು ಭರವಸೆ ಮೂಡಿಸುವ ಯಾತ್ರೆ. ಬಿಜೆಪಿಯವರಿಗೆ ಇದು ಸಾಧ್ಯ ಇಲ್ಲ, ಬಿಜೆಪಿಯವರು ಇದುವರೆಗೆ ಏನೂ ಕಟ್ಟಿಯೇ ಇಲ್ಲ.

ಬಿಜೆಪಿ ಪರಿಸ್ಥಿತಿ ನೋಡಿದರೆ ನಮಗೆ ಅಯ್ಯೋ ಅನಿಸುತ್ತಿದೆ: ಶಾಸಕ ಪ್ರಿಯಾಂಕ ಖರ್ಗೆ ವಾಗ್ಧಾಳಿ
ಕಾಂಗ್ರೆಸ್​ ಶಾಸಕ ಪ್ರಿಯಾಂಕ ಖರ್ಗೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 02, 2022 | 3:06 PM

ಮೈಸೂರು: ಬಿಜೆಪಿಯವರು ರಾಜ್ಯದಲ್ಲಿ ಸಂಪೂರ್ಣ ಹತಾಶರಾಗಿದ್ದಾರೆ. ಬಿಜೆಪಿ (bjp) ಪರಿಸ್ಥಿತಿ ನೋಡಿದರೆ ನಮಗೆ ಅಯ್ಯೋ ಅನಿಸುತ್ತಿದೆ. ಸರ್ಕಾರದಿಂದ ಒಂದು ಯೋಜನೆಗಳ ಬಗ್ಗೆಯೂ ಹೇಳಿಕೊಳ್ಳಲು ಅವರಿಗೆ ಏನೂ ಇಲ್ಲ. ಏನೇ ಘಟನೆ ನಡೆದರೂ ಕೂಡ ನೆಹರೂ ವಿಚಾರ ತೆಗೆದು ನೆಹರೂ ಮೇಲೆ ಹಾಕುತ್ತಾರೆ. ರಾಜ್ಯದ ಘಟನೆ ಏನೇ ಆದರು ಸಿದ್ದರಾಮಯ್ಯ ಮೇಲೆ ಹಾಕುತ್ತಾರೆ ಎಂದು ಪ್ರೆಸ್ ಮೀಟ್​​ನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್​ ಶಾಸಕ ಪ್ರಿಯಾಂಕ ಖರ್ಗೆ ವಾಗ್ಧಾಳಿ ಮಾಡಿದರು. ರಾಹುಲ್ ಗಾಂಧಿ ಬಂದಾಗಿನಿಂದ ಕಳೆದ 48 ಗಂಟೆಗಳಲ್ಲಿ ಎಷ್ಟೆಲ್ಲ ಸ್ಟೇಟ್ಮೆಂಟ್ ಕೊಡುತ್ತಿದ್ದಾರೆಂದು ಲೆಕ್ಕ ಹಾಕಿ ಎಂದರು. ವಿದ್ಯುತ್ ದರ ನಾಲ್ಕನೇ ಬಾರಿ ಹೆಚ್ಚಳ ಆಗಿದೆ ಅದರ ಬಗ್ಗೆ ಕಮೆಂಟ್ ಬಂತಾ ಯಾರಿಂದಲಾರೂ. ವೃದ್ದೆಯೊಬ್ಬರನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕರೆತಂದಿದ್ದರು. ಬದಲಿ ನಿವೇಶನದಲ್ಲಿ ಭಾರೀ ಅಕ್ರಮ ಅರಗ ಜ್ಞಾನೇಂದ್ರ ಸೇರಿ ಹಲವರದು ಕೇಳಿಬಂದಿದೆ. ಕಳೆದ ಒಂದು ವರ್ಷದಲ್ಲಿ ಗೋಧಿ ಹಿಟ್ಟಿನ ಬೆಲೆ 28%, ಅಕ್ಕಿ ದರ 8% ಹೆಚ್ಚಳ ಆಗಿದೆ. ಬಿಬಿಎಂಪಿ ಅವಸ್ಥೆ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿದರು ಏನಾದರೂ ಮಾತಾಡಿದರಾ? ಬೆಂಗಳೂರು ಮತ್ತೆ ಕಳಪೆ ಸಾಧನೆ 43ನೇ ಸ್ಥಾನಕ್ಕೆ ಬಂದಿದೆ ಅದಕ್ಕೆ ಮಾತಾಡಿದರಾ? ಹಾಲ್ ಟಿಕೇಟ್ ಸಮಸ್ಯೆ ಬಗ್ಗೆ ಮಾತಾಡಿದರಾ? ವಾಟ್ಸಪ್ ಯುನಿವರ್ಸಿಟಿ ಇಂದ ಬಂದು ಅಷ್ಟು ದೊಡ್ಡ ಜಾಹೀರಾತು ಕೊಟ್ಟಿದ್ದೀರಾ. ಎಸ್.ಟಿ ಸ್ವಾಮೀಜಿ ಧರಣಿ ಕೂತು 180 ದಿನ ಆಯ್ತು ಅದರ ಬಗ್ಗೆ ಸಚಿವರು ಮಾತಾಡಿದರಾ? ಈಶ್ವರಪ್ಪ ಮದುವೆ ಗಂಡ ತರ ಕೂತಿದಿನಿ ಅಂತ ಹೇಳುತ್ತಾರೆ. ರಾಹುಲ್ ಗಾಂಧಿ ಮೇಲೆ ಗಮನ ಹರಿಸುವ ಬದಲಿ ನಿಮ್ಮ ಪಕ್ಷ ನೋಡಿಕೊಳ್ಳಿ ಸರ್ಕಾರ ನೋಡಿಕೊಳ್ಳಿ. ದಸರಾ ಗುತ್ತಿಗೆದಾರನೊಬ್ಬ 40% ಕಮಿಷನ್​ಗೆ ಆತ್ಮಹತ್ಯೆ ಮಾಡಿಕೊಳೂತ್ತೇನೆ ಎಂದು ಹೇಳುತ್ತಾರೆ ಅದರ ಬಗ್ಗೆ ಮಾತನಾಡುತ್ತಾರೆ ಎಂದು ಸಾಲು ಸಾಲು ಪ್ರಶ್ನೆಗಳ ಸುರಿಮಳೆ ಗೈದರು.

ಬಿಜೆಪಿಯವರು ಇದುವರೆಗೆ ಏನೂ ಕಟ್ಟಿಯೇ ಇಲ್ಲ

ಜನರಿಗೆ ಏನು ಬೇಕಾಗಿದೆ, ನೀವು ಏನು ಮಾತಾಡ್ತಿದ್ದೀರಾ. ದೇಶವನ್ನು ಒಗ್ಗೂಡಿಸುವ ಯಾತ್ರೆ ಇದು ಭರವಸೆ ಮೂಡಿಸುವ ಯಾತ್ರೆ. ಬಿಜೆಪಿಯವರಿಗೆ ಇದು ಸಾಧ್ಯ ಇಲ್ಲ, ಬಿಜೆಪಿಯವರು ಇದುವರೆಗೆ ಏನೂ ಕಟ್ಟಿಯೇ ಇಲ್ಲ. ಕಟ್ಟುವುದು ಅವರಿಗೇ ಗೊತ್ತಿಲ್ಲ. ಬಿಜೆಪಿಯ ರಥಯಾತ್ರೆಯಿಂದ ದೇಶ ಒಡೆದವರು ಅವರು. ಭಾರತ್ ತೋಡೋ ತೋಡೋ ಮಾಡಿದವರು ಅವರು. ನಾಳೆ ಕಪ್ಪು ಬಾವುಟ ತೋರಿಸಲು ಬಿಜೆಪಿ ರೆಡಿ ಆಗಿದೆ. ಅದರಿಂದ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ನಾವೂ ಅನಿವಾರ್ಯವಾಗಿ ಬುದ್ದ ಬಸವ ತತ್ವ ಬಿಟ್ಟು ಕೆಲಸ ಮಾಡಬೇಕಾಗುತ್ತದೆ ಎಂದು ಪ್ರಿಯಾಂಕ ಖರ್ಗೆ ಹೇಳಿದರು.

ಕರ್ನಾಟಕದ ಚರಿತ್ರೆಯಲ್ಲಿ ಇದೊಂದು ಐತಿಹಾಸಿಕ ದಿನ

23 ವರ್ಷಗಳ ಹಿಂದೆ ಬದನವಾಳು ಗ್ರಾಮದಲ್ಲಿ ದ್ವೇಷ ಹಿಂಸೆ ಉಂಟಾಗಿತ್ತು. ಈ ಗ್ರಾಮದಲ್ಲಿ ಮನಸ್ಸುಗಳು ಒಂದಾಗಬೇಕು ಅಂತ ರಾಹುಲ್ ಮುಂದಾಗಿದ್ದಾರೆ. ಯಾವ ಮನೆಗೆ ಪೇಂಟ್ ಇರಲಿಲ್ಲ ಅಲ್ಲಿ ಬಣ್ಣ ಹಚ್ಚಿದ್ದೇವೆ. ಎರಡು ಸಮಾಜದವರನ್ನು ಕೂರಿಸಿ ರಾಹುಲ್ ಗಾಂಧಿ ಜೊತೆಗೆ ಸಹಭೋಜನವನ್ನೂ ಮಾಡಿದ್ದಾರೆ. ಕರ್ನಾಟಕದ ಚರಿತ್ರೆಯಲ್ಲಿ ಇದೊಂದು ಐತಿಹಾಸಿಕ ದಿನ. ಇದು ಇಡೀ ದೇಶದಲ್ಲೇ ಮೊದಲ ಬಾರಿಗೆ ಪ್ರಯತ್ನ. ಇದೇ ಭಾರತ ಜೋಡೋ ಭಾರತ ಐಕ್ಯತೆ ಕಾರ್ಯಕ್ರಮ. ಖಾದಿ ಗ್ರಾಮೋದ್ಯೋಗದಲ್ಲಿ ಯಾರು ನೋವು ಅನುಭವಿಸುತ್ತಿದ್ದರೋ ಅವರ ಬಳಿಯೂ ಮಾತನಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು