Updated on: Oct 02, 2022 | 6:40 PM
ವಿಶ್ವವಿಖ್ಯಾತ ಮೈಸೂರು ದಸರಾ 2022 ಇಂದು ಏಳನೇ ದಿನಕ್ಕೆ ಕಾಲಿಟ್ಟಿದೆ. ಮೈಸೂರು ವಿವಿ ಹಾಕಿ ಮೈದಾನದಲ್ಲಿ ಸಾಕು ಪ್ರಾಣಿ ಪ್ರದರ್ಶನ ನಡೆಯಿತು.
ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ ಮೈನ್ ಅಟ್ರ್ಯಾಕ್ಷನ್ ಚಾರ್ಲಿ. ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾದಲ್ಲಿ ನಟಿಸಿದ್ದ ಚಾರ್ಲಿ ಕೆಂಪ್ಪು ಬಣ್ಣದ ಬಟ್ಟೆ ತೊಟ್ಟು ಪ್ರದರ್ಶನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಸಾಕು ನಾಯಿ ಪ್ರದರ್ಶನದಲ್ಲಿ ವಿದೇಶದ ಕೆಲವು ನಾಯಿಗಳು ಸಹ ಭಾಗಿಯಾಗಿದ್ದು, ಜನರ ಗಮನ ಸೆಳೆದವು.
ಪ್ರದರ್ಶನದಲ್ಲಿ ನೂರಾರು ನಾಯಿಗಳು ಭಾಗಿಯಾಗಿದ್ದು, ಸಂಜೆಯವರೆಗೂ ಪ್ರದರ್ಶನ ನಡೆಯಿತು.
ಲ್ಯಾಬ್ ಗೋಲ್ಡ್‌ನ್ ರಿಟ್ರಿವರ್, ಮುಧೋಳ್ ಪಸ್ಮಿ ಗ್ರೇಟ್ ಡೆನ್, ರಾಟ್ ವೀಲರ್ ಸೈಬಿರಿಯನ್ ಹಸ್ಕಿ, ಜರ್ಮನ್ ಶೆಫರ್ಡ್ ಶ್ವಾನಗಳು ಭಾಗಿ.
ಸೀಡ್ಜ್, ಪಗ್, ಪಿಟ್ ಬುಲ್, ಬುಲ್ ಡಾಗ್, ಪರ್ಸಿಯನ್ ಕ್ಯಾಟ್ಸ್, ಲವ್ ಬರ್ಡ್ಸ್ ಪ್ರದರ್ಶನದಲ್ಲಿ ಭಾಗಿ.