ಕೊರೊನಾದಿಂದ ಮೃತಪಟ್ಟು 12 ದಿನ ಕಳೆದರೂ ಶವ ನೀಡದೆ ತಕರಾರು.. ಆಸ್ಪತ್ರೆ ವಿರುದ್ಧ ಮಗಳ ಆಕ್ರೋಶ

|

Updated on: May 26, 2021 | 1:10 PM

ಮೇ 14ರಂದೇ ಕೊರೊನಾ ಸೋಂಕಿಗೆ ವ್ಯಕ್ತಿ ಮೃತಪಟ್ಟಿದ್ದಾರೆ. ಆದರೆ ವಿಪರ್ಯಾಸವೆಂದರೆ ಇನ್ನೂ ಕೂಡ ಶವವನ್ನು ಕುಟುಂಬಸ್ಥರಿಗೆ ನೀಡಿಲ್ಲ. ₹1.67 ಲಕ್ಷ ಪಾವತಿಸಿ ಮೃತದೇಹ ಪಡೆಯುವಂತೆ ಆಸ್ಪತ್ರೆ ಸಿಬ್ಬಂದಿ ಒತ್ತಾಯಿಸಿದ್ದಾರೆ ಎಂದು ಮೃತ ವ್ಯಕ್ತಿಯ ಕುಟುಂಬಸ್ಥರು ಬೆಂಗಳೂರಿನ ಈಸ್ಟ್ ಪಾಯಿಂಟ್ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಕೊರೊನಾದಿಂದ ಮೃತಪಟ್ಟು 12 ದಿನ ಕಳೆದರೂ ಶವ ನೀಡದೆ ತಕರಾರು.. ಆಸ್ಪತ್ರೆ ವಿರುದ್ಧ ಮಗಳ ಆಕ್ರೋಶ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವ ನೀಡಲು ಆಸ್ಪತ್ರೆ ಸಿಬ್ಬಂದಿ ತಕರಾರು ಮಾಡುತ್ತಿರುವ ಅಮಾನವೀಯ  ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಗ್ಯ ಇಲಾಖೆ ಆದೇಶಕ್ಕೆ ಖಾಸಗಿ ಆಸ್ಪತ್ರೆ ಡೋಂಟ್‌ ಕೇರ್ ರೀತಿ ವರ್ತಿಸುತ್ತಿದೆ.

ಮೇ 14ರಂದೇ ಕೊರೊನಾ ಸೋಂಕಿಗೆ ವ್ಯಕ್ತಿ ಮೃತಪಟ್ಟಿದ್ದಾರೆ. ಆದರೆ ವಿಪರ್ಯಾಸವೆಂದರೆ ಇನ್ನೂ ಕೂಡ ಶವವನ್ನು ಕುಟುಂಬಸ್ಥರಿಗೆ ನೀಡಿಲ್ಲ. ₹1.67 ಲಕ್ಷ ಪಾವತಿಸಿ ಮೃತದೇಹ ಪಡೆಯುವಂತೆ ಆಸ್ಪತ್ರೆ ಸಿಬ್ಬಂದಿ ಒತ್ತಾಯಿಸಿದ್ದಾರೆ ಎಂದು ಮೃತ ವ್ಯಕ್ತಿಯ ಕುಟುಂಬಸ್ಥರು ಬೆಂಗಳೂರಿನ ಈಸ್ಟ್ ಪಾಯಿಂಟ್ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಅಪ್ಪ, ಅಮ್ಮ ಇಬ್ಬರನ್ನೂ ಕಳೆದುಕೊಂಡಿರುವ ಮಗಳು ಕಣ್ಣೀರಿಟ್ಟಿದ್ದಾರೆ. ಬಾಕಿ ಬಿಲ್‌ ಕಟ್ಟಲು ಒತ್ತಡ ಹೇರಬಾರದು ಎಂದು ಶವ ನೀಡದೇ ಸತಾಯಿಸುವ ಆಸ್ಪತ್ರೆಗಳ ವಿರುದ್ಧ ಮೊನ್ನೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಈ ಆದೇಶಕ್ಕೂ ಆಸ್ಪತ್ರೆ ತಲೆ ಕೆಡಿಸಿಕೊಂಡಿಲ್ಲ. ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆ ನೀಡಿದ್ರೂ ಪ್ರಯೋಜನವಾಗಿಲ್ಲ. ಸರ್ಕಾರದ ಆದೇಶಕ್ಕೆ ಈಸ್ಟ್ ಪಾಯಿಂಟ್ ಆಸ್ಪತ್ರೆ ಕ್ಯಾರೆ ಎನ್ನುತ್ತಿಲ್ಲ. 12 ದಿನಗಳಾದ್ರೂ ತಂದೆ ಮೃತದೇಹ ಸಿಗದೆ ಮಗಳ ಕಣ್ಣೀರಿಟ್ಟಿದ್ದಾರೆ. 12 ದಿನಗಳಿಂದ ಹಣಕ್ಕಾಗಿ ಕಂಗಾಲಾಗಿದ್ದು ಹಣದ ವ್ಯವಸ್ಥೆ ಮಾಡಲಾಗದೆ ತಂದೆಯ ಮೃತದೇಹವನ್ನೂ ಪಡೆಯಲಾಗಿದೆ ಮಗಳು ನೊಂದಿದ್ದಾರೆ.

ಆದಷ್ಟು ಬೇಗ ಈ ಘಟನೆ ಸಂಬಂಧ ಅಧಿಕಾರಿಗಳು ಕ್ರಮಕೈಗೊಂಡು ಮೃತ ತಂದೆಯ ಶವವನ್ನು ಮಗಳಿಗೆ ಹಸ್ತಾಂತರಿಸಿ ಕೊರೊನಾದಿಂದ ಬಲಿಯಾದ ವ್ಯಕ್ತಿಯ ಆತ್ಮಕ್ಕೆ ಶಾಂತಿ ನೀಡುವ ಕಾರ್ಯ ಮಾಡಬೇಕಿದೆ.

ಇದನ್ನೂ ಓದಿ: Health Tips: ಕಲ್ಲು ಸಕ್ಕರೆಯಲ್ಲಿನ ಸಿಹಿಯಿಂದ ದೇಹಕ್ಕೆ ಪ್ರಯೋಜನವೇನು? ವೈದ್ಯರ ಸಲಹೆಗಳೇನು?

Published On - 1:09 pm, Wed, 26 May 21