ಹುಬ್ಬಳ್ಳಿಗೆ 25 ಜಂಬೋ ಸಿಲಿಂಡರ್ ಕಳಿಸಿಕೊಟ್ಟ ಸೋನು ಸೂದ್; ಎಡಿಜಿಪಿ ಭಾಸ್ಕರ್‌ರಾವ್ ನೇತೃತ್ವದಲ್ಲಿ ಆಕ್ಸಿಜನ್ ಕೇಂದ್ರ ಸ್ಥಾಪನೆ
Sonu Sood: ಹುಬ್ಬಳ್ಳಿ ರೈಲ್ವೆ ಪೊಲೀಸರು ಕೂಡಾ ಸೋನು ಸೂದ್ ಚಾರಿಟಿ ಪೌಂಡೇಶನ್ ಗೆ ಸಾಥ್ ನೀಡಿದ್ದು, ಅವರೇ ಖುದ್ದು ಮುಂದೆ ನಿಂತು ಇನ್ಮೇಲೆ ಯಾರಿಗೆ ಆಕ್ಸಿಜನ್ ಅವಶ್ಯಕತೆ ಇದೆಯೋ ಅಂತಹವರು ಇಲ್ಲಿಗೆ ಬರಬಹುದು, ಅಥವಾ ಚಾರಿಟಿ ನೀಡಿರೋ 70699 99961 ಹೆಲ್ಪ್ ಲೈನ್ ನಂಬರ್ಗೆ ಪೊನ್ ಕಾಲ್ ಮಾಡಿದ್ರು ಪೊಲೀಸರ ನೆರವನೊಂದಿಗೆ ಆಕ್ಸಿಜನ್ ಸಪ್ಲೈ ಮಾಡಲಾಗುತ್ತಂತೆ.
ಹುಬ್ಬಳ್ಳಿ: ಇಡೀ ದೇಶವೇ ಕೊರೊನಾ ಎಂಬ ಮಹಾ ಹೆಮ್ಮಾರಿಯ ಎರಡನೇ ಅಲೆಗೆ ತತ್ತರಿಸಿ ಹೋಗಿದೆ. ಕೊರೊನಾ ಹೊಡತೆಕ್ಕೆ ಅದೆಷ್ಟೋ ಜೀವಗಳು ಬಲಿಯಾಗಿವೆ.ಎರಡನೆ ಅಲೆಯ ಹೊಡೆತಕ್ಕೆ ಇಡಿ ದೇಶದಲ್ಲಿ ದೊಡ್ಡ ಮಟ್ಟದ ಆಕ್ಸಜನ್ ಸಮಸ್ಯೆ ಎದುರಾಗಿದ್ದು ನಾವೆಲ್ಲಾ ನೋಡಿದ್ದಿವಿ. ಅಲ್ಲದೆ ಅದೇ ಪ್ರಾಣವಾಯುವಿಲ್ಲದೇ ಅದೆಷ್ಡೋ ಜನ ಬೀದಿ ಹೆಣವಾಗಿದ್ದು ನೋಡಿದ್ದಿವಿ.ಆದ್ರೆ ಅಂತಹ ಜನರಿಗೆ ಸಧ್ಯ ಬಹುಭಾಷ ನಟ ಸೋನು ಸೂದ್ ದೇವರ ರೂಪದಲ್ಲಿ ಕಾಣಿಸುತ್ತಿದ್ದಾರೆ.
ರೀಲ್ ನಲ್ಲಿ ವಿಲನ್ ರೀಯಲ್ ಲೈಫ್ ನಲ್ಲಿ ಸೂಪರ್ ಹಿರೋ: ಹೌದು. ಕಳೆದ ವರ್ಷ ಮೊದಲೆನೆಯ ಅಲೆಯಲ್ಲೂ ಬಡ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದ ಈ ರೀಯಲ್ ಹಿರೋ ಸಧ್ಯ ಮತ್ತೆ ಮಾನವಿಯತೆ ಮೆರೆಯೊಧ್ರ ಜೊತೆಗೆ ಅದೆಷ್ಟೋ ಜೀವಗಳಿಗೆ ಪ್ರಾಣವಾಯು ನೀಡುತ್ತಿದ್ದಾರೆ. ಹೌದು ಸೋನು ಸೂದ್ ದೇಶದ ನಾನಾ ಕಡೆಗಳಲ್ಲಿ ಆಕ್ಸಿಜನ್ ಸೆಂಟರ್ ಗಳನ್ನ ತೆಗೆದಿದ್ದಾರೆ. ಸಧ್ಯ ಅದೇ ರೀತಿಯಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಗೂ ಸೋನು ಸೂದ್ ತಮ್ಮ ಆಕ್ಸಿಜನ್ ಸೆಂಟರ್ ವಿಸ್ತರಣೆ ಮಾಡಿದ್ದಾರೆ. ರಾಜ್ಯ ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಅವರ ಆಸಕ್ತಿ ಹಿನ್ನೆಲೆ. ಸೋನು ಉತ್ತರ ಕರ್ನಾಟಕ ಭಾಗದ ಜನರಿಗೆ ಪ್ರಾಣವಾಯು ಒದಗಿಸೋಕೆ ಮುಂದಾಗಿದ್ದಾರೆ. ಅದಕ್ಕಾಗೇ ಹುಬ್ಬಳ್ಳಿಯ ರೈಲ್ವೆ ಪೊಲೀಸ್ ಠಾಣೆ ಆವರಣದಲ್ಲಿ ಆಕ್ಸಿಜನ್ ಸೆಂಟರ್ ಓಪನ್ ಮಾಡಿದ್ದಾರೆ.
ಬೆಂಗಳೂರಿನ ಸ್ವ್ಯಾಗ್ ಸಂಸ್ಥೆಯ ಸಹಯೋಗದೊಂದಿಗೆ ಸಧ್ಯ ಈ ಸೆಂಟರ್ ಓಪನ್ ಆಗಿದ್ದು, ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳ ಜನರಿಗೆ ಇದರ ನೆರವು ಸಿಗಲಿದೆಯಂತೆ.ಯಾರಿಗೆ ಆಕ್ಸಿಜನ್ ಅವಶ್ಯಕತೆ ಇದಿಯೋ ಅವರು ಒಂದು ಪೋನ್ ಕಾಲ್ ಮಾಡಿದ್ರೆ ಸಾಕು ಆಕ್ಸಿಜನ್ ಒದಗಿಸೋ ಕೆಲಸ ರೈಲ್ವೆ ಪೊಲೀಸರು ಹಾಗೂ ಸಂಸ್ಥೆ ಮಾಡಲಿದೆ. ಸಧ್ಯ ಮೊದಲ ಹಂತವಾಗಿ 25 ಜಂಬೋ ಸಿಲೆಂಡಿರ್ ಗಳನ್ನ ನೀಡಿತೋ ಸೋನು ಸೂದ್ ಅವಶ್ಯಕತೆ ಎಷ್ಟು ಬರುತ್ತದಯೋ ಅಷ್ಟು ಆಕ್ಸಿಜನ್ ಪೂರೈಸಲು ಸಿದ್ದ ಎನ್ನುತ್ತಿದ್ದಾರೆ. ಹೀಗಾಗೇ ಯಾರು ಕೂಡಾ ಆಕ್ಸಿಜನ್ ಇಲ್ಲದೆ ಪ್ರಾಣ ಕಳೆದುಕೊಳ್ಳಬಾರದು ಎನ್ನೋ ಉದ್ದೇಶ ಸೋನು ಸೂದ್ ಚಾರಟಿ ಫೌಂಡೇಶನ್ ನದ್ದು. ಹೀಗಾಗಿ ಇಂದು ರೈಲ್ವೆ ಪೊಲೀಸರಿಗೆ ಆಕ್ಸಿಜನ್ ಬಗ್ಗೆ ಡೆಮೋ ನೀಡಿದ ತಂಡ ವೈಧ್ಯಕೀಯ ತಂಡದ ಸಹಾಯದೊಂದಿಗೆ ರೋಗಿಗಳಿಗೆ ಆಕ್ಸಿಜನ್ ಒದಗಿಸಲಾಗುತ್ತಂತೆ.
ಇನ್ನು ರೈಲ್ವೆ ಪೊಲೀಸರು ಕೂಡಾ ಸೋನು ಸೂದ್ ಚಾರಿಟಿ ಪೌಂಡೇಶನ್ ಗೆ ಸಾಥ್ ನೀಡಿದ್ದು, ಅವರೇ ಖುದ್ದು ಮುಂದೆ ನಿಂತು ಇನ್ಮೇಲೆ ಯಾರಿಗೆ ಆಕ್ಸಿಜನ್ ಅವಶ್ಯಕತೆ ಇದೆಯೋ ಅಂತಹವರು ಇಲ್ಲಿಗೆ ಬರಬಹುದು, ಅಥವಾ ಚಾರಿಟಿ ನೀಡಿರೋ 70699 99961 ಹೆಲ್ಪ್ ಲೈನ್ ನಂಬರ್ಗೆ ಪೊನ್ ಕಾಲ್ ಮಾಡಿದ್ರು ಪೊಲೀಸರ ನೆರವನೊಂದಿಗೆ ಆಕ್ಸಿಜನ್ ಸಪ್ಲೈ ಮಾಡಲಾಗುತ್ತಂತೆ. – ದತ್ತಾತ್ರೇಯ ಪಾಟೀಲ್
(Super hero sonu sood sends 25 jumbo oxygen cylinders railway adgp bhaskar rao takes initiation in hubballi)
Sonu Sood: ಕೊರೊನಾ ಸೋಂಕಿತರ ನೆರವಿಗಾಗಿ ಮತ್ತೊಂದು ಸಾಹಸಕ್ಕೆ ಮುಂದಾದ ರಿಯಲ್ ಹೀರೋ ಸೋನು ಸೂದ್
Published On - 1:28 pm, Wed, 26 May 21