AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಶಾನಕ್ಕಾಗಿ ಹೋರಾಟ: ಗ್ರಾಮ ಪಂಚಾಯತ್ ಮುಂದೆನೇ ಗುಂಡಿ ತೋಡಿದ ದಲಿತ ಕುಟುಂಬಗಳು

ಶಾನಕ್ಕೆ ಜಾಗ ಕೊಡುವಂತೆ ಆಗ್ರಹಿಸಿದ ಹೋರಾಟ ನಡೆಸುತ್ತಿದ್ದರೂ ಕ್ಯಾರೇ ಎನ್ನದ ಅಧಿಕಾರಿಗಳ ವಿರುದ್ಧ ದಲಿತ ಕುಟುಂಬಗಳು ಸಿಡಿದೆದ್ದಿದ್ದು, ಪಂಚಾಯಯತ್ ಮುಂದೆಯೇ ಗುಂಡಿ ತೋಡಿದ ಪ್ರಸಂಗವೊಂದು ದಾವಣಗೆರೆ ತಾಲೂಕಿನ ಎಮ್ಮನಬೇತೂರು‌ ಗ್ರಾಮದಲ್ಲಿ ನಡೆದಿದೆ.

ಸ್ಮಶಾನಕ್ಕಾಗಿ ಹೋರಾಟ: ಗ್ರಾಮ ಪಂಚಾಯತ್ ಮುಂದೆನೇ ಗುಂಡಿ ತೋಡಿದ ದಲಿತ ಕುಟುಂಬಗಳು
ಸ್ಮಶಾನಕ್ಕಾಗಿ ಹೋರಾಟ ನಡೆಸಿ ಬೇಸತ್ತ ದಲಿತ ಕುಟುಂಬಗಳು ಗ್ರಾಮ ಪಂಚಾಯತ್ ಮುಂದೆನೇ ಗುಂಡಿ ತೋಡಿದರು
TV9 Web
| Updated By: Rakesh Nayak Manchi|

Updated on:Sep 24, 2022 | 9:34 AM

Share

ದಾವಣಗೆರೆ: ಸ್ಮಶಾನಕ್ಕೆ ಜಾಗ ಕೊಡುವಂತೆ ಆಗ್ರಹಿಸಿದ ಹೋರಾಟ ನಡೆಸುತ್ತಿದ್ದರೂ ಕ್ಯಾರೇ ಎನ್ನದ ಅಧಿಕಾರಿಗಳ ವಿರುದ್ಧ ದಲಿತ ಕುಟುಂಬಗಳು ಸಿಡಿದೆದ್ದಿದ್ದು, ಪಂಚಾಯಯತ್ ಮುಂದೆಯೇ ಗುಂಡಿ ತೋಡಿದ್ದಾರೆ. ಈ ಘಟನೆ ದಾವಣಗೆರೆ ತಾಲೂಕಿನ ಎಮ್ಮನಬೇತೂರು‌ ಗ್ರಾಮದಲ್ಲಿ ನಡೆದಿದ್ದು,  ಮುಂದೆ ಯಾರಾದರೂ ಸಾವನ್ನಪ್ಪಿದರೆ ತೋಡಿದ ಗುಂಡಿಯಲ್ಲೇ ಅಂತ್ಯಸಂಸ್ಕಾರ ನಡೆಸಲು ಮುಂದಾಗಿದ್ದಾರೆ. ಸ್ಮಶಾನಕ್ಕೆ ಸ್ಥಳವಿಲ್ಲದೇ ಅಂತ್ಯಸಂಸ್ಕಾರ ನೆರವೇರಿಸಲು ಸಮಸ್ಯೆ ಎದುರಿಸುತ್ತಿರುವ ಗ್ರಾಮದ ದಲಿತ ಕುಟುಂಬಗಳು ಜಿಲ್ಲಾಧಿಕಾರಿ ಸೇರಿದಂತೆ ಹತ್ತಾರು ಕಡೆ ಮನವಿ ಸಲ್ಲಿಸಿವೆ. ಆದರೆ ಮನವಿಗೆ ಯಾವುದೇ ಅಧಿಕಾರಿ ಸ್ಪಂದಿಸದ ಹಿನ್ನೆಲೆ ವಿನೂತನ ಹೋರಾಟಕ್ಕೆ ದಲಿತ ಕುಟುಂಬಗಳು ಇಳಿದಿವೆ. ಅದರಂತೆ ಗ್ರಾಮ ಪಂಚಾಯತ್ ಮುಂದೆಯೇ ಮೃತದೇಹ ಹೂಳುವ ಗುಂಡಿ ತೋಡಿ ಅದರಲ್ಲೇ ಮುಂದೆ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿವೆ. ಈ ವೇಳೆ ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಬಸವಂತಪ್ಪ ಹಾಗೂ ಗ್ರಾಮದ ಪ್ರ‌ಮುಖರು ಸೇರಿ ಸ್ಮಶಾನಕ್ಕೆ ಜಮೀನು‌ ನೀಡುವ ಬಗ್ಗೆ ಭರವಸೆ ನೀಡಿದರು. ನಂತರ ಅಗೆದ ಸ್ಮಶಾನ ಗುಂಡಿಯನ್ನು ಪ್ರತಿಭಟನಾಕಾರರು ಮುಚ್ಚಿದ ವಾಪಸ್ಸಾದರು.

ಕೊನೆಗೂ ಸೆರೆಸಿಕ್ಕ ಉಪಟಳ ನೀಡುತ್ತಿದ್ದ ಚಿರತೆ

ರಾಮನಗರ: ಕಳೆದ ಹದಿನೈದು ದಿನಗಳಿಂದ ಜನರನ್ನು ಕಾಡುತ್ತಿದ್ದ ಚಿರತೆಯೊಂದು ಕೊನೆಗೂ ಸೆರೆಸಿಕ್ಕಿದೆ. ಇದರಿಂದಾಗಿ ಜಿಲ್ಲೆಯ ಮಾಗಡಿ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದ ಜನರು ನಿಟ್ಟುಸಿರು ಬಿಡುವಂತಾಗಿದೆ. ಆಹಾರ ಅರಸಿಕೊಂಡು ಗ್ರಾಮಕ್ಕೆ ನುಗ್ಗಿದ್ದ ಚಿರತೆ 15 ದಿನಗಳಿಂದ ಜನರನ್ನು ಕಾಡಿತ್ತು. ಅದರಂತೆ ಒಂದು ವಾರದ ಹಿಂದೆ ಅರಣ್ಯ ಇಲಾಖೆ ಸಿಬ್ಬಂದಿಗಳು ಗೊಲ್ಲರಹಟ್ಟಿ ಗ್ರಾಮದ ಬಳಿ ಚಿರತೆ ಸೆರೆಹಿಡಿಯುವ ಬೋನ್ ಇರಿಸಿದ್ದರು. ಸದ್ಯ ಆಹಾರ ಹರಿಸಿ ಬಂದ ಚಿರತೆ ಈ ಬೋನಿಗೆ ಬಿದ್ದಿದೆ. ಸೆರೆಯಾದ ಚಿರತೆ 5 ವರ್ಷದ ಗಂಡು ಚಿರತೆಯಾಗಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ಬೈಕ್ ಸವಾರ, ಸಾವಿನಲ್ಲೂ ಸಾರ್ಥಕತೆ

ತುಮಕೂರು: ಗೂಡ್ಸ್​ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ತಾಲೂಕಿನ ಲೆಂಕನಹಳ್ಳಿ ಬಳಿ ನಡೆದಿದೆ. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆ ಬಳಿ ವ್ಯಕ್ತಿ ಜತೆ ಮಾತನಾಡುತ್ತಾ ನಿಂತಿದ್ದ ನರಿಗೇಹಳ್ಳಿ ನಿವಾಸಿಯಾಗಿರುವ ಬೈಕ್ ಸವಾರ ದರ್ಶನ್ (20)ಗೆ ಗೂಡ್ಸ್​ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ದರ್ಶನ್ ಸಾವನ್ನಪ್ಪಿದ್ದು, ಸುರೇಶ್ ಎಂಬವರಿಗೆ ಗಾಯಗಳಾಗಿವೆ. ಇತ್ತ ಅಂಗಾಂಗ ದಾನದ ಮೂಲಕ ದರ್ಶನ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹಲವು ಸಮಾಜ ಮುಖಿ ಕೆಲಸ ಮಾಡಿಕೊಂಡಿದ್ದ ದರ್ಶನ್ ಸಾವಿನ ನಂತರ ಅವರ ಕುಟುಂಬಸ್ಥರು ದರ್ಶನ್ ಕಣ್ಣುಗಳನ್ನು ಆದಿ ಚುಂಚನಗಿರಿ ಆಸ್ಪತ್ರೆಯಲ್ಲಿ ದಾನ ಮಾಡಿದ್ದಾರೆ. ರಸ್ತೆಯಲ್ಲಿ ಸ್ಪಿಡ್ ಬ್ರೆಕರ್ ಇಲ್ಲದ ಕಾರಣ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದಿದೆ. ಹೀಗಾಗಿ ರಸ್ತೆಗೆ ಸ್ಪೀಡ್ ಬ್ರೇಕರ್ ಹಾಕುವಂತೆ ಜನರು ಒತ್ತಾಯಿಸಿದ್ದಾರೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:34 am, Sat, 24 September 22