ದಾವಣಗೆರೆ: ಪತ್ನಿ ಇದ್ರು‌‌ ಮತ್ತೊಬ್ಬಳೊಂದಿಗೆ ಚಕ್ಕಂದ; ಕಿಲಾಡಿ ಪೊಲೀಸ್ ಕಾನ್ಸ್​ಸ್ಟೇಬಲ್ ಅಮಾನತು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 27, 2024 | 8:02 PM

ತಪ್ಪು ಮಾಡದಂತೆ ತಡೆಯಬೇಕಾದ ಪೊಲೀಸ್​ವೊಬ್ಬ ಪತ್ನಿ ಇದ್ದರೂ ಮತ್ತೊಬ್ಬಳೊಂದಿಗೆ ಚಕ್ಕಂದ ಆಡುತ್ತಿದ್ದ ಘಟನೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿತ್ತು. ಈ ಕುರಿತು ಎಸ್ಪಿ ಉಮಾ ಪ್ರಶಾಂತ್ ಅವರು ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಿ, ಆರೋಪ ಸತ್ಯವೆಂದು ಸಾಭೀತಾದ ಮೇಲೆ ಆತನನ್ನು ಅಮಾನತುಗೊಳಿಸಿದ್ದಾರೆ.

ದಾವಣಗೆರೆ: ಪತ್ನಿ ಇದ್ರು‌‌ ಮತ್ತೊಬ್ಬಳೊಂದಿಗೆ ಚಕ್ಕಂದ; ಕಿಲಾಡಿ ಪೊಲೀಸ್ ಕಾನ್ಸ್​ಸ್ಟೇಬಲ್ ಅಮಾನತು
ಪ್ರಾತಿನಿಧಿಕ ಚಿತ್ರ
Follow us on

ದಾವಣಗೆರೆ, ಜು.27: ಮನೆಯಲ್ಲಿ ಪತ್ನಿ ಇದ್ದರೂ ಮತ್ತೊಬ್ಬಳೊಂದಿಗೆ ಚಕ್ಕಂದ ಆಡುತ್ತಿದ್ದ ಪೊಲೀಸ್ ಕಾನ್ಸ್​ಸ್ಟೇಬಲ್(Police Constable) ​ನ್ನು ಅಮಾನತ್ತು ಮಾಡಿ ಎಸ್ಪಿ ಉಮಾ ಪ್ರಶಾಂತ್ ಬಿಸಿ ಮುಟ್ಟಿಸಿದ್ದಾರೆ. ಹೌದು, ಹೊನ್ನಾಳಿ ಪೊಲೀಸ್ ಠಾಣೆಯ ಸಿಪಿಸಿ 124 ನಂಬರ್ ಪ್ರಸನ್ ಟಿ. ಅಮಾನತ್ತು ಆದ ಪೇದೆ. ಪತ್ನಿಯಿಂದ‌ ದೂರು‌ಪಡೆದು ನಂತರ ಹಿರಿಯ ಅಧಿಕಾರಿಗಳಿಂದ ‌ತನಿಖೆ ಮಾಡಿಸಿ ಆರೋಪ ಸತ್ಯವೆಂದು‌ ಗೊತ್ತಾದ ಬಳಿಕ ಅಮಾನತ್ತುಗೊಳಿಸಿದ್ದಾರೆ.

ಪತ್ನಿಯ ತಲೆಗೆ ಕಬ್ಬಿಣದ ವಸ್ತುವಿನಿಂದ ಹೊಡೆದು ಹಲ್ಲೆ‌ ಮಾಡಿದ್ದ ಪೇದೆ

ಪರಸ್ತ್ರೀ ಸಂಘ ಮಾಡಿ ‌ಕೆಲ‌ ತಿಂಗಳಿಂದ ಮನೆಗೆ ಬರುವುದನ್ನೇ ಪೇದೆ ಪ್ರಸನ್ ನಿಲ್ಲಿಸಿದ್ದ. ಒಂದು ಗಂಡು, ಒಂದು‌ ಹೆಣ್ಣು ಮಕ್ಕಳ‌ನ್ನ ಕಟ್ಟಿಕೊಂಡು ಕುಟುಂಬ ನಡೆಸಲು ಪ್ರಸನ್ನ ಅವರ ಪತ್ನಿ ಪರದಾಡುತ್ತಿದ್ದರು. ಈ ಮಧ್ಯೆ ಮತ್ತೊಬ್ಬಳೊಂದಿಗೆ ರಂಗಿನಾಟ ಪ್ರಶ್ನೆ ಮಾಡಿದಕ್ಕೆ ಪತ್ನಿಯ ತಲೆಗೆ ಕಬ್ಬಿಣದ ವಸ್ತುವಿನಿಂದ ಹೊಡೆದು ಹಲ್ಲೆ‌ಮಾಡಿದ್ದ. ಆತನ ದೌರ್ಜನ್ಯದಿಂದ ಬೇಸತ್ತು ಪತ್ನಿ ದೂರು ನೀಡಿದ್ದರು. ಈ ಹಿನ್ನಲೆ ಹಿರಿಯ ಅಧಿಕಾರಿಗಳಿಂದ ಎಸ್​ಪಿ ತನಿಖೆ ಮಾಡಿಸಿದ್ದರು. ಆರೋಪ ಸತ್ಯವೆಂದು ಸಾಭೀತಾದ ಮೇಲೆ ಕ್ರಮಕೈಗೊಂಡಿದ್ದಾರೆ.

ಇದನ್ನೂ ಓದಿ: ಶಾಲಾ ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಕಿರುಕುಳ ನೀಡಿರುವ ಆರೋಪ, ಪೊಲೀಸ್ ಪೇದೆ ಅಮಾನತು

ಪಕ್ಕದ ಮನೆ ನಿವಾಸಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಆರೋಪಿ ಬಂಧನ

ಹುಬ್ಬಳ್ಳಿ: ಅಯೋಧ್ಯೆ ನಗರದಲ್ಲಿ ಜುಲೈ 23ರಂದು ಪಕ್ಕದ ಮನೆ ನಿವಾಸಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಆರೋಪಿಯನ್ನು ಪೊಲೀರು ಬಂಧಿಸಿದ್ದಾರೆ. ಆಕಾಶ್ ದೊಡ್ಮನಿ ಬಂಧಿತ ಆರೋಪಿ. ಅನೂಪ್ ದೊಡ್ಮನಿ ದೂರಿನ ಮೇರೆಗೆ ಆಕಾಶ್‌ನನ್ನು ಹಳೇ ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:58 pm, Sat, 27 July 24