ದಾವಣಗೆರೆ ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆ ಟೆಂಡರ್‌ನಲ್ಲಿಯೂ ನಡೆದಿದ್ಯಾ ಬ್ರಹ್ಮಾಂಡ ಭ್ರಷ್ಟಾಚಾರ
ದಾವಣಗೆರೆ. ಬೆಣ್ಣೆ ನಗರಿ ಅಂತಾ ಕರೆಯೋ ಈ ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದೆ. ಅದ್ರೆ ಬೆಣ್ಣೆ ನಗರಿ ಪಟ್ಟದ ಜೊತೆಗೆ ಡೇಂಜರ್ ಸಿಟಿ ಅನ್ನೋ ಹೆಸರು ಕೂಡ ಬಂದಿದೆ. ಯಾಕಂದ್ರೆ ಈ ಸಿಟಿಯಲ್ಲಿರೋ ಬೀದಿ ನಾಯಿಗಳ ಹಾವಳಿಯಿಂದ.
ದಾವಣಗೆರೆ: ಎಲ್ಲ ಊರಿನಲ್ಲೂ ಬೀದಿ ನಾಯಿಗಳು ಇದ್ದೇ ಇರುತ್ತವೆ. ಆದ್ರೆ ಈ ನಗರ ಬೀದಿ ನಾಯಿಗಳ ಸಮಸ್ಯೆಯಲ್ಲಿಯೇ ಮುಳುಗಿ ಹೋಗಿದೆ. ಅದೇ ಸಮಸ್ಯೆಯನ್ನು ಬಂಡವಾಳವನ್ನಾಗಿ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಸಖತ್ ಲಾಭ ಮಾಡಿಕೊಳ್ತಿದ್ದಾರಂತೆ.
ದಾವಣಗೆರೆ. ಬೆಣ್ಣೆ ನಗರಿ ಅಂತಾ ಕರೆಯೋ ಈ ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿದೆ. ಅದ್ರೆ ಬೆಣ್ಣೆ ನಗರಿ ಪಟ್ಟದ ಜೊತೆಗೆ ಡೇಂಜರ್ ಸಿಟಿ ಅನ್ನೋ ಹೆಸರು ಕೂಡ ಬಂದಿದೆ. ಯಾಕಂದ್ರೆ ಈ ಸಿಟಿಯಲ್ಲಿರೋ ಬೀದಿ ನಾಯಿಗಳ ಹಾವಳಿಯಿಂದ. ಇತ್ತೀಚಗೆ ದಾವಣಗೆರೆ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಮಿತಿ ಮೀರಿದೆ. ಅದರಲ್ಲೂ ದಾವಣಗೆರೆ ನಗರದ ಹಳೆ ಬಡಾವಣೆಗಳಲ್ಲಿ ನಾಯಿಗಳ ಅಟ್ಟಹಾಸ ಮೀತಿಮೀರಿದ್ದು, ಮಕ್ಕಳ ಮೇಲೆ ಅತ್ಯಂತ ಅಪಾಯಕಾರಿಯಾಗಿ ದಾಳಿ ಮಾಡುತ್ತಿವೆ. ಹಾಗಾಗಿ ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಪಾಲಿಕೆ ಮೇಲೆ ಒತ್ತಡವೇರಿದ್ರು. ಕೂಡಲೇ ಅಲರ್ಟ್ ಆದ ಪಾಲಿಕೆ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನಹರಣ ಚಿಕಿತ್ಸೆ ನಡೆಸಲು ಟೆಂಡರ್ ಕರೆದಿದ್ರು. ಆದ್ರೆ ಈ ಟೆಂಡರ್‌ನಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ.
ಅಂದಹಾಗೆ ದಾವಣಗೆರೆ ನಗರದಲ್ಲಿ 20 ಸಾವಿರ ಬೀದಿ ನಾಯಿಗಳಿವೆಯೆಂದು ಅಂದಾಜಿಸಲಾಗಿದೆ. ಪಾಲಿಕೆ ಅಧಿಕಾರಿಗಳು ಅವುಗಳ ಸಂತಾನಹರಣ ಶಸ್ತ್ರ ಚಿಕಿತ್ಸೆಗೆಂದು 25 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ. ಆದ್ರೂ, ಬೀದಿ ನಾಯಿಗಳ ಕಾಟ ಕಡಿಮೆಯಾಗಿಲ್ಲ. ಪ್ರತಿಯೊಂದು ನಾಯಿಯ ಸಂತಾನಹರಣ ಚಿಕಿತ್ಸೆಗಾಗಿ 800ರೂಪಾಯಿ ಖರ್ಚು ತೋರಿಸಿರುವುದು ಇದೀಗ ವಿಪಕ್ಷಗಳ ಕಣ್ಣು ಕೆಂಪಗಾಗಿಸಿದೆ. ನಾಯಿಗಳ ನಿಯಂತ್ರಣಕ್ಕೆ ಕರೆಯಲಾದ ಟೆಂಡರ್‌ನಲ್ಲೂ ಅವ್ಯವಹಾರ ಕೇಳಿ ಬಂದಿರೋದ್ರಿಂದ, ಪಾಲಿಕೆ ಮೇಯರ್ ತನಿಖೆ ಮಾಡಿಸುವುದಾಗಿ ಹೇಳಿದ್ದಾರೆ.
ದಾವಣಗೆರೆ ಸ್ಮಾರ್ಟ್ ನಗರವಾಗುವತ್ತ ವೇಗವಾಗಿ ದಾಪುಗಾಲಿಡುತ್ತಿದೆ. ಅಗತ್ಯ ಕಾಮಗಾರಿಗಳೂ ಭರದಿಂದ ಸಾಗುತ್ತಿವೆ. ಆದ್ರೆ ಬೀದಿನಾಯಿಗಳ ನಿಯಂತ್ರಣ ಮಾಡಲಾಗದಿರುವುದು ಪಾಲಿಕೆ ಆಡಳಿತಕ್ಕೆ ಕಪ್ಪು ಚುಕ್ಕೆಯಾಗಿದೆ.
ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ
ಇದನ್ನೂ ಓದಿ: ಅಧಿಕಾರಿಗಳಲ್ಲಿ ಭಯ ಹುಟ್ಟಿಸಲಿದೆ ಐಎಎಸ್ ನಿಯೋಜನೆ ನಿಯಮಗಳ ಬದಲಾವಣೆ: ಪ್ರಧಾನಿ ಮೋದಿಗೆ ಪತ್ರ ಬರೆದ ಕೇರಳ ಸಿಎಂ ಪಿಣರಾಯಿ ವಿಜಯನ್