ಕೇಸರಿ ಪಡೆಯಿಂದ ಹಸಿರು ಕ್ರಾಂತಿ; ದಾವಣಗೆರೆಯಲ್ಲಿ ವಿನೂತನ ಪ್ರಯತ್ನ

| Updated By: sandhya thejappa

Updated on: Aug 29, 2021 | 5:20 PM

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ, ಪ್ರೊ.ಲಿಂಗಣ್ಣ, ಮಾಜಿ ಶಾಸಕ ಬಿ.ಪಿ.ಹರೀಶ್ ಹೀಗೆ ಹತ್ತಾರು ಜನ ಬಿಜೆಪಿ ಮುಖಂಡರು ಬೀಜದುಂಡೆ ಸಜ್ಜು ಮಾಡುತ್ತಿದ್ದಾರೆ. ಇದು ಬಿಜೆಪಿ ಪಕ್ಷದಿಂದ ಶುರುವಾದ ಅಭಿಯಾನ.

ಕೇಸರಿ ಪಡೆಯಿಂದ ಹಸಿರು ಕ್ರಾಂತಿ; ದಾವಣಗೆರೆಯಲ್ಲಿ ವಿನೂತನ ಪ್ರಯತ್ನ
ಬೀಜದುಂಡೆಯನ್ನು ಎಸೆಯುತ್ತಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ
Follow us on

ದಾವಣಗೆರೆ: ಕೊರೊನಾ (Coronavirus) ಸಂಕಷ್ಟದ ಕಾಲದಲ್ಲಿ ಬಹುತೇಕರ ಬಾಯಲ್ಲಿ ಕೇಳಿ ಬಂದಿದ್ದು ಆಕ್ಸಿಜನ್. ಈ ಆಕ್ಸಿಜನ್ ಸಿಗುವುದೇ ಗಿಡ ಮರಗಳಿಂದ. ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ಆಕ್ಸಿಜನ್ ಕೊರತೆ ದೊಡ್ಡ ಸಮಸ್ಯೆಯಾಗಿತ್ತು. ಆಕ್ಸಿಜನ್ ಸಿಗದೆ ಅದೆಷ್ಟೋ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದರು. ಹೀಗಾಗಿ ಆಕ್ಸಿಜನ್ ಮೂಲ ಗಿಡ, ಮರಗಳನ್ನು ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ವಿನೂತನ ಕಾರ್ಯಕ್ರಮಕ್ಕೆ ಕೈ ಹಾಕಿದೆ. ಬೀಜದುಂಡೆ ಬಿತ್ತನೆ ಕಾರ್ಯಕ್ಕೆ ಇಂದು (ಆಗಸ್ಟ್ 29) ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಚಾಲನೆ ನೀಡಿದ್ದಾರೆ.

ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ, ಪ್ರೊ.ಲಿಂಗಣ್ಣ, ಮಾಜಿ ಶಾಸಕ ಬಿ.ಪಿ.ಹರೀಶ್ ಹೀಗೆ ಹತ್ತಾರು ಜನ ಬಿಜೆಪಿ ಮುಖಂಡರು ಬೀಜದುಂಡೆ ಸಜ್ಜು ಮಾಡುತ್ತಿದ್ದಾರೆ. ಇದು ಬಿಜೆಪಿ ಪಕ್ಷದಿಂದ ಶುರುವಾದ ಅಭಿಯಾನ. ಇಂತಹ ಅಭಿಯಾನಕ್ಕೆ ಶಾಸಕ ಎಂ.ಪಿ.ರೇಣುಕಾಚಾರ್ಯ ದಂಪತಿಗಳು ಬಂದು ಕೆಲ ಹೊತ್ತು ಬೀಜದ ಉಂಡೆಗಳನ್ನ ತಯಾರಿಸಿದರು. ಬಿಜೆಪಿ ಕಾರ್ಯಕರ್ತರೇ ಸ್ವಯಂ ಪ್ರೇರಣೆಯಿಂದ ಬಂದು ಹುಣಸೆ ಮಾವು, ಹಲಸು ಹೀಗೆ 20ಕ್ಕೂ ಹೆಚ್ಚು ಜಾತಿಯ ಬೀಜಗಳ ಉಂಡೆಯನ್ನು ಸಿದ್ಧಪಡಿಸಿದ್ದಾರೆ.

ಸಿದ್ಧಪಡಿಸಿದ ಬೀಜದ ಉಂಡೆಗಳನ್ನು ಅರಣ್ಯ ಹಾಗೂ ಸರ್ಕಾರಿ ಜಮೀನಿನಲ್ಲಿ ಹಾಕಲು ನಿರ್ಧರಿಸಲಾಗಿದೆ. ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಜಗಳೂರು, ಹರಿಹರಗಳಿಗೆ 60 ಸಾವಿರ ಬೀಜದ ಉಂಡೆಗಳನ್ನ ಹಂಚಲು ನಿರ್ಧರಿಸಲಾಗಿದೆ. ದಾವಣಗೆರೆ ತಾಲೂಕಿನಲ್ಲಿಯೇ ಮಾಯಕೊಂಡ, ದಾವಣಗೆರೆ ದಕ್ಷಿಣ, ದಾವಣಗೆರೆ ಉತ್ತರ ಮೂರು ವಿಧಾನಸಭಾ ಕ್ಷೇತ್ರಗಳಿವೆ. ಇವುಗಳ ಪಕ್ಕದಲ್ಲಿರುವ ಬಾತಿ ಗುಡ್ಡ, ಕೊಂಡಜ್ಜಿ ಅರಣ್ಯ, ಆನಗೋಡ ಪಾರ್ಕ್​ಗಳಲ್ಲಿ ಬೀಜದ ಉಂಡೆ ಹಾಕಲು ನಿರ್ಧರಿಸಲಾಗಿದೆ. ಇದನ್ನ ಬಿಜೆಪಿ ಕಾರ್ಯರ್ತರೇ ನೇರವಾಗಿ ಹೋಗಿ ಹಾಕಿ ಬರಲು ಮುಂದಾಗಿದ್ದಾರೆ.

ಕೊರೊನಾ ಸಂಕಷ್ಟದ ಕಾಲದಲ್ಲಿ ಪ್ರತಿಯೊಬ್ಬರು ಆಕ್ಸಿಜನ್ ಆಕ್ಸಿಜನ್ ಎಂದು ಪರದಾಡುತ್ತಿದ್ದರು. ಹೀಗಾಗಿ ಬರುವ ದಿನಗಳಲ್ಲಿ ಇಂತಹ ಸಂಕಷ್ಟದಿಂದ ಮನುಕುಲವನ್ನ ಉಳಿಸಬೇಕು ಎಂಬ ಸಂಕಲ್ಪದಿಂದ ಭಾರತೀಯ ಜನತಾ ಪಾರ್ಟಿ ಈ ಕೆಲಸಕ್ಕೆ ಮುಂದಾಗಿದೆ. ಕಳೆದ ಆರು ದಿನಗಳಿಂದ ಬೆಳಿಗ್ಗೆ ಆರು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆ ವರೆಗೆ ಆಯಾ ಕ್ಷೇತ್ರದ ಕಾರ್ಯಕರ್ತರು ಬಂದು ಬೀಜದ ಉಂಡೆ ಮಾಡುತ್ತಾರೆ.

ಇದನ್ನೂ ಓದಿ

ಟ್ರಕ್‌ನಲ್ಲಿ ಸಾಗಿಸುತ್ತಿದ್ದ 3,400 ಕೆಜಿ ಗಾಂಜಾ ಜಪ್ತಿ; 21 ಕೋಟಿ ರೂ. ಮೌಲ್ಯದ ಅಮಲು ಪದಾರ್ಥ ವಶಕ್ಕೆ

ಮೈಸೂರು ಅತ್ಯಾಚಾರ ಪ್ರಕರಣ: ಆರೋಪಿಗಳಿಂದ ತಪ್ಪೊಪ್ಪಿಗೆ, ಹೇಳಿಕೆ ನೀಡಲು ಸಂತ್ರಸ್ತೆ ನಿರಾಕರಣೆ; ಆರೋಪಿಗಳಿಗೆ ಇಂದೇ ವೈದ್ಯಕೀಯ ಪರೀಕ್ಷೆ

(BJP MLAs and MPs have made seed Balls in davanagere)

Published On - 5:20 pm, Sun, 29 August 21