ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಮೇಲಿದ್ದ ಒಟ್ಟು ನಾಲ್ಕು ಕೇಸ್ಗಳು ಖುಲಾಸೆ ಮಾಡಿ, ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಸದ್ಯ ಶಾಸಕ ರೇಣುಕಾಚಾರ್ಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 2018 ದಾಖಲಾದ ನಾಲ್ಕು ಪ್ರಕರಣಗಳಲ್ಲಿ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಕೇಸ್ ಖುಲಾಸೆಯಾಗಿದೆ.
ಕೋರ್ಟ್ನಲ್ಲಿ ಕೆಲ ಅಧಿಕಾರಿಗಳೇ ಉಲ್ಟಾ ಹೇಳಿಕೆ ನೀಡಿದ್ದು, ಇನ್ನೂ ಕೆಲ ಪ್ರಕರಣಗಳಲ್ಲಿ ಸಾಕ್ಷ್ಯಾಧಾರದ ಕೊರೆತೆ ಹಿನ್ನೆಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲದ ನ್ಯಾಯ ಮೂರ್ತಿ ಜೆ.ಪ್ರೀತ್ ಪ್ರಕರಣಗಳನ್ನ ಖುಲಾಸೆ ಗೊಳಿಸಿ ಆದೇಶ ಹೊರಡಿಸಿದರು. 2018 ಡಿಸೆಂಬರ್ 10ರಂದು ಅಕ್ರಮ ಮರಳು ಸಾಗಾಣಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ ಮಾಡಿದ್ದು, ಪೊಲೀಸರ ಕಾರ್ಯಕ್ಕೆ ಅಡ್ಡಿ ಪಡಿಸಿದ ಆರೋಪವನ್ನ ರೇಣುಕಾಚಾರ್ಯ ಎದುರಿಸುತ್ತಿದ್ದರು.
ಮೇ 13, 2018 ವಿಧಾನಸಭೆ ಚುನಾವಣೆ ವೇಳೆ ಮುಷ್ಠಿ ಅಕ್ಕಿ ಅಭಿಯಾನದ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿತ್ತು. ಅಕ್ರಮವಾಗಿ ಮರಳು ತುಂಬಿಕೊಂಡು ಹೋಗುವಂತೆ ಜನರಿಗೆ ಕರೆ ನೀಡಿದ್ದ ಆರೋಪವನ್ನು ರೇಣುಕಾಚಾರ್ಯ ಎದುರಿಸುತ್ತಿದ್ದರು. ಒಟ್ಟು ನಾಲ್ಕು ಪ್ರಕರಣಗಳಲ್ಲಿ ರೇಣುಕಾಚಾರ್ಯ ಖುಲಾಸೆಯಾಗಿದೆ.
ಇದನ್ನೂ ಓದಿ: ಕರ್ನಾಟಕದ ವಿವಿಧೆಡೆ ಪೌರಕಾರ್ಮಿಕರ ಪ್ರತಿಭಟನೆ: ಇಂದು ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ