ದಾವಣಗೆರೆ​ ರಿಂಗ್​ ರೋಡ್​​ ಕಾಮಗಾರಿಗಾಗಿ ತೆರವು ಕಾರ್ಯಾಚರಣೆ; 144 ನಿಷೇಧಾಜ್ಞೆ ಜಾರಿ, ಪಾಲಿಕೆ ಆಯುಕ್ತೆ ವಿರುದ್ಧ ಆಕ್ರೋಶ

| Updated By: ಆಯೇಷಾ ಬಾನು

Updated on: Dec 02, 2023 | 10:29 AM

ದಾವಣಗೆರೆ​ ರಿಂಗ್​ ರೋಡ್​​ ಕಾಮಗಾರಿ ಪೂರ್ಣಗೊಳಿಸುವ ಹಿನ್ನೆಲೆ ದಾವಣಗೆರೆ ನಗರದ ಮಾಗಾನಹಳ್ಳಿ ರಸ್ತೆಯಲ್ಲಿ ಇರುವ ರಾಮಕೃಷ್ಣ ಹೆಗಡೆ ನಗರ ತೆರವು ಕಾರ್ಯಾಚರಣೆ ಆರಂಭವಾಗಿದೆ. 144 ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಏಕಾಏಕಿ ಜೆಸಿಬಿಯಿಂದ ಮನೆ ಕೆಡವಿದ್ದರಿಂದ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಮನೆಯಲ್ಲಿರುವ ವಸ್ತುಗಳನ್ನು ತೆಗೆಯಲು ಬಿಡದೆ ಜೆಸಿಬಿಯಿಂದ‌ ಮನೆ ಕೆಡವಿದ ಆರೋಪ ಮಾಡಿ ಪಾಲಿಕೆ ಆಯುಕ್ತೆ ರೇಣುಕಾರವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದಾವಣಗೆರೆ​ ರಿಂಗ್​ ರೋಡ್​​ ಕಾಮಗಾರಿಗಾಗಿ ತೆರವು ಕಾರ್ಯಾಚರಣೆ; 144 ನಿಷೇಧಾಜ್ಞೆ ಜಾರಿ, ಪಾಲಿಕೆ ಆಯುಕ್ತೆ ವಿರುದ್ಧ ಆಕ್ರೋಶ
ದಾವಣಗೆರೆ​ ರಿಂಗ್​ ರೋಡ್​​ ಕಾಮಗಾರಿಗಾಗಿ ತೆರವು ಕಾರ್ಯಾಚರಣೆ
Follow us on

ದಾವಣಗೆರೆ, ಡಿ.02: ದಾವಣಗೆರೆ​ ರಿಂಗ್​ ರೋಡ್​​ ಕಾಮಗಾರಿ ಪೂರ್ಣಗೊಳಿಸುವ (Davangere Ring Road) ಹಿನ್ನೆಲೆ ದಾವಣಗೆರೆ ನಗರದ ಮಾಗಾನಹಳ್ಳಿ ರಸ್ತೆಯಲ್ಲಿ ಇರುವ ರಾಮಕೃಷ್ಣ ಹೆಗಡೆ ನಗರ ತೆರವು ಕಾರ್ಯಾಚರಣೆ ಆರಂಭವಾಗಿದೆ. ನಗರದ ಹಲವು ಮನೆಗಳ ತೆರವು ಕಾರ್ಯ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಇಂದು ಬೆಳಗ್ಗೆ 5ರಿಂದ ನಾಳೆ ಸಂಜೆ 5ಗಂಟೆ ತನಕ 144 ನಿಷೇಧಾಜ್ಞೆ ಜಾರಿ (144 Section) ಮಾಡಿ ದಾವಣಗೆರೆ ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಆದೇಶ ಹೊರಡಿಸಿದ್ದಾರೆ. ಜೆಸಿಬಿ ಮೂಲಕ ಪೊಲೀಸರ ಸಮ್ಮುಖದಲ್ಲಿ ತೆರವು ಕಾರ್ಯ ನಡೆಯುತ್ತಿದೆ. ಬಹುತೇಕ ಅಲ್ಪಸಂಖ್ಯಾತರ ಮನೆಗಳನ್ನು ತೆರವು ಮಾಡಲಾಗುತ್ತಿದೆ.

ಸುಮಾರು 419ಕ್ಕೂ ಹೆಚ್ಚು ಮನೆಗಳ ತೆರವಿಗೆ ಪ್ಲಾನ್​ ಮಾಡಿಕೊಳ್ಳಲಾಗಿದ್ದು, ಕೆಲವರಿಗೆ ಬೇರೆಡೆ ವಾಸಿಸಲು ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ. ಹಕ್ಕು ಪತ್ರ ಸಿಗದವರು ತೆರವು ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ADC ಲೋಕೇಶ್, ಎಎಸ್ ಪಿ ವಿಜಯಕುಮಾರ ಸಂತೋಷ, ಎಸಿ ದುರ್ಗಾಶ್ರೀ ನೇತ್ರತ್ವದಲ್ಲಿ‌ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪಾಲಿಕೆ ಆಯುಕ್ತೆ ರೇಣುಕಾರವರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು

ಇನ್ನು ಏಕಾಏಕಿ ಜೆಸಿಬಿಯಿಂದ ಮನೆ ಕೆಡವಿದ್ದರಿಂದ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಮನೆಯಲ್ಲಿರುವ ವಸ್ತುಗಳನ್ನು ತೆಗೆಯಲು ಬಿಡದೆ ಜೆಸಿಬಿಯಿಂದ‌ ಮನೆ ಕೆಡವಿದ ಆರೋಪ ಮಾಡಿ ಪಾಲಿಕೆ ಆಯುಕ್ತೆ ರೇಣುಕಾರವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಪೊಲೀಸ್, ಜೆಸಿಪಿ ತಂದು ಹೆದರಿಸಿದರೇ ನಾವು ಹೆದರಲ್ಲ. ನೀವು ಹಠ ಸಾಧಿಸುತ್ತಿದ್ದರೆ, ಹಠ ಸಾಧಿಸಿ ಏನ್ ಮಾಡ್ತೀರಾ ನೋಡೋಣ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಸ್ಥಳೀಯ ಮುಖಂಡ ಖಾದರ್ ಸಾಬ್ ಅವರು ಪಾಲಿಕೆ ಆಯುಕ್ತೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:19 am, Sat, 2 December 23