ದಾವಣಗೆರೆ ಹರಿಹರದಲ್ಲಿ ತುಂಗಭದ್ರಾ ಆರತಿ ಮಂಟಪಕ್ಕೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ

ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಹರಿಹರ ಪುಣ್ಯಕ್ಷೇತ್ರ ದೇಶದ ಗಮನ ಸೆಳೆಯಲಿದೆ. ಗಂಗಾ ಆರತಿಯಂತೆ ತುಂಗಭದ್ರಾ ಆರತಿ ಆದಷ್ಟು ಬೇಗ ಆರಂಭ ಆಗಲಿದೆ.

ದಾವಣಗೆರೆ ಹರಿಹರದಲ್ಲಿ ತುಂಗಭದ್ರಾ ಆರತಿ ಮಂಟಪಕ್ಕೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ
ಆರತಿ ಮಂಟಪಕ್ಕೆ ಸಿಎಂ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದರು.
Follow us
TV9 Web
| Updated By: sandhya thejappa

Updated on:Feb 20, 2022 | 11:37 AM

ದಾವಣಗೆರೆ: ಉತ್ತರ ಭಾರತದ ಗಮನ ಸೆಳೆಯುವ ತುಂಗಭದ್ರಾ ಆರತಿ ಮಂಟಪ (Arathi Mantapa) ನಿರ್ಮಾಣಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಶಂಕುಸ್ಥಾಪನೆ ನೆರವೇರಿಸಿದರು. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಸುಮಾರು 30 ಕೋಟಿ ವೆಚ್ಚದಲ್ಲಿ ವಾರಾಣಸಿಯ ಗಂಗಾರತಿ ಮಾದರಿಯಲ್ಲಿ ತುಂಗಭದ್ರಾ ಆರತಿ ಮಂಟಪ ನಿರ್ಮಾಣವಾಗಲಿದ್ದು, ತುಂಗಭದ್ರಾ 108 ಯೋಗ ಮಂಟಪಗಳ ನಿರ್ಮಾಣಕ್ಕೆ ಇಂದು ಸಿಎಂ ಶಂಕುಸ್ಥಾಪನೆ ಮಾಡಿದರು. ಈ ವೇಳೆ ಮುಖ್ಯಮಂತ್ರಿಗೆ ಸಚಿವರಾದ ನಿರಾಣಿ, ಭೈರತಿ ಬಸವರಾಜ್, ಸಂಸದ ಸಿದ್ದೇಶ್ವರ, ಶಾಸಕ ರಾಮಪ್ಪ, ವಚನಾನಂದಶ್ರೀ ಸಾಥ್ ನೀಡಿದರು.

ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ಹರಿಹರ ಪುಣ್ಯಕ್ಷೇತ್ರ ದೇಶದ ಗಮನ ಸೆಳೆಯಲಿದೆ. ಗಂಗಾ ಆರತಿಯಂತೆ ತುಂಗಭದ್ರಾ ಆರತಿ ಆದಷ್ಟು ಬೇಗ ಆರಂಭ ಆಗಲಿದೆ. ತುಂಗಭದ್ರಾ ಆರತಿ ಹಿನ್ನೆಲೆ ಈಗಾಲೇ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಲಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ತುಂಗಭದ್ರಾ ನದಿ ದಡದಲ್ಲಿ ವಾಯು ವಿವಾರಕ್ಕೆ ಅನುಕೂಲ ಆಗುವಂತೆ ಮಾಡಲಾಗುವುದು. ಇಲ್ಲಿ 108 ಮಂಟಪಗಳ ನಿರ್ಮಾಣ ಆಗಲಿವೆ ಎಂದು ತಿಳಿಸಿದರು.

ಪ್ರಧಾನಿ ನಮಗೆ ಸ್ಫೂರ್ತಿ- ವಚನಾನಂದ ಸ್ವಾಮೀಜಿ: ಭಾರತ ಹಿಂದೆ ಹಾವಾಡಿಗರ ದೇಶವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಬಂದ ಮೇಲೆ ಹಿಂದು ಸನಾತನ ಧರ್ಮ ಪ್ರಚಾರಕ್ಕೆ ಬಂದಿದೆ ಅಂತ ತುಂಗಭದ್ರಾ ಆರುತಿ ಸಮಾರಂಭದಲ್ಲಿ ಪಂಚಮಸಾಲಿ ಗುರುಪೀಠ ವಚನಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನಿರ್ಧಾರದಿಂದ ಗಂಗಾ ನದಿ ಶುದ್ಧವಾಗಿದೆ‌. ಈಗ ಗಂಗೆ ಪರಿಶುದ್ಧರಾಗಿದ್ದಾಳೆ. ಪ್ರಧಾನಿ ನರೇಂದ್ರ ಮೋದಿ ನಮಗೆ ಒಂದು ರೀತಿಯಲ್ಲಿ ಸ್ಫೂರ್ತಿ. ವಿದೇಶದಲ್ಲಿಗಳ ಭಾರತವನ್ನ ನೋಡುವ ದೃಷ್ಟಿ ಬದಲಾಗಿದೆ‌. ಇದಕ್ಕೆ ಕಾರಣ ನರೇಂದ್ರ ಮೋದಿ. ಮೋದಿ ಅವರ ಭವ್ಯ ದಿವ್ಯ ಎಂದು ಒಂಬತ್ತು ನೂರು ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ. ಇದೇ ರೀತಿ ಹರಿಹರ ಅಭಿವೃದ್ಧಿ ಪಡಿಸಬೇಕು ಅಂತ ವಚನಾನಂದ ಸ್ವಾಮೀಜಿ ಸಿಎಂಗೆ ಆಗ್ರಹಿಸಿದರು.

ಇದನ್ನೂ ಓದಿ

ಈ ವೃತ್ತದಲ್ಲಿ ಎಷ್ಟು ಸಂಖ್ಯೆ ಕಾಣುತ್ತಿದೆ? ಉತ್ತರ ಹುಡುಕಲು ತಲೆಕೆಡಿಸಿಕೊಂಡ ನೆಟ್ಟಿಗರು

ದೀಪಿಕಾ ನಟನೆಯ ‘ಗೆಹರಾಯಿಯಾ’ ಚಿತ್ರ ನೋಡಿ ಮುಲಾಜಿಲ್ಲದೇ ಜಾಡಿಸಿದ ಭಾಸ್ಕರ್​ ರಾವ್​

Published On - 11:33 am, Sun, 20 February 22