ದೀಪಿಕಾ ನಟನೆಯ ‘ಗೆಹರಾಯಿಯಾ’ ಚಿತ್ರ ನೋಡಿ ಮುಲಾಜಿಲ್ಲದೇ ಜಾಡಿಸಿದ ಭಾಸ್ಕರ್​ ರಾವ್​

ಮಾಜಿ ಕಮಿಷನರ್​ ಭಾಸ್ಕರ್​ ರಾವ್​ ಅವರು ‘ಗೆಹರಾಯಿಯಾ’ ಚಿತ್ರದ ಕಟು ವಿಮರ್ಶೆ ಮಾಡಿದ್ದಾರೆ. ತಮ್ಮ ಅನಿಸಿಕೆ ವ್ಯಕ್ತಪಡಿಸುವಲ್ಲಿ ಅವರು ಯಾವುದೇ ಮುಲಾಜು ತೋರಿಸಿಲ್ಲ.

ದೀಪಿಕಾ ನಟನೆಯ ‘ಗೆಹರಾಯಿಯಾ’ ಚಿತ್ರ ನೋಡಿ ಮುಲಾಜಿಲ್ಲದೇ ಜಾಡಿಸಿದ ಭಾಸ್ಕರ್​ ರಾವ್​
ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಗೆಹರಾಯಿಯಾ ಸಿನಿಮಾದ ದೃಶ್ಯ
Follow us
TV9 Web
| Updated By: ಮದನ್​ ಕುಮಾರ್​

Updated on:Feb 20, 2022 | 10:01 AM

ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ಅಭಿನಯಿಸಿರುವ ‘ಗೆಹರಾಯಿಯಾ’ ಸಿನಿಮಾ ಭಾರಿ ಚರ್ಚೆಗೆ ಕಾರಣ ಆಗಿದೆ. ‘ಅಮೇಜಾನ್​ ಪ್ರೈಂ ವಿಡಿಯೋ’ ಮೂಲಕ ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಆದ ಈ ಚಿತ್ರವನ್ನು ಅನೇಕರು ನೋಡಿ ಇಷ್ಟಪಟ್ಟಿದ್ದಾರೆ. ಅದರೆ ಕೆಲವರು ‘ಗೆಹರಾಯಿಯಾ’ (Gehraiyaan Movie) ಸಿನಿಮಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಚಿತ್ರದ ಕಥೆ ಕೆಲವರಿಗೆ ಇಷ್ಟ ಆಗಿಲ್ಲ. ಶಕುನ್​ ಭಾತ್ರ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ನಟ ಸಿದ್ಧಾಂತ್ ಚತುರ್ವೇದಿ ಅವರು ತುಂಬ ಬೋಲ್ಡ್​ ಆಗಿ ನಟಿಸಿದ್ದಾರೆ. ಈ ಕಾಲದ ಯುವಕ-ಯುವತಿಯರ ಸಂಬಂಧಗಳು ಯಾವ ಹಂತವನ್ನು ತಲುಪಿವೆ ಎಂಬುದನ್ನು ‘ಗೆಹರಾಯಿಯಾ’ ಸಿನಿಮಾ ವಿವರಿಸುತ್ತದೆ. ಬೆಂಗಳೂರು ಮಾಜಿ ಕಮಿಷನರ್​ ಭಾಸ್ಕರ್​ ರಾವ್​ (Bhaskar Rao) ಅವರು ಕೂಡ ಈ ಚಿತ್ರವನ್ನು ನೋಡಿದ್ದಾರೆ. ಆದರೆ ಪೂರ್ತಿ ಸಿನಿಮಾ ವೀಕ್ಷಿಸಲು ಅವರಿಗೆ ಮನಸ್ಸಾಗಿಲ್ಲ. ಅಲ್ಲದೇ ಚಿತ್ರದ ಬಗ್ಗೆ ತಮ್ಮ ಅನಿಸಿಕೆ ಏನು ಎಂಬುದನ್ನು ಅವರು ಟ್ವಿಟರ್​ ಮೂಲಕ ತಿಳಿಸಿದ್ದಾರೆ. ಭಾಸ್ಕರ್​ ಅವರ ಅಭಿಪ್ರಾಯಕ್ಕೆ ಕೆಲವರು ಸಹಮತ ಸೂಚಿಸಿದ್ದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾದರೆ ‘ಗೆಹರಾಯಿಯಾ’ ಸಿನಿಮಾ ಬಗ್ಗೆ ಭಾಸ್ಕರ್​ ರಾವ್​ ಅವರು ಹೇಳಿದ್ದೇನು? ಇಲ್ಲಿದೆ ಪೂರ್ತಿ ವಿವರ..

ಟ್ವಿಟರ್​ ಮೂಲಕ ಭಾಸ್ಕರ್​ ರಾವ್​ ಅವರು ‘ಗೆಹರಾಯಿಯಾ’ ಚಿತ್ರದ ಕಟು ವಿಮರ್ಶೆ ಮಾಡಿದ್ದಾರೆ. ತಮ್ಮ ಅನಿಸಿಕೆ ವ್ಯಕ್ತಪಡಿಸುವಲ್ಲಿ ಅವರು ಯಾವುದೇ ಮುಲಾಜು ತೋರಿಸಿಲ್ಲ. ‘ನಾವು ಗೆಹರಾಯಿಯಾ ಸಿನಿಮಾ ನೋಡಲು ಪ್ರಾರಂಭಿಸಿದೆವು. 20 ನಿಮಿಷದ ನಂತರ ಸಿನಿಮಾ ನೋಡುವುದನ್ನು ನಿಲ್ಲಿಸಿದೆವು. ನಾನು ಕೂಡ ದೀಪಿಕಾ ಪಡುಕೋಣೆಯ ಅಭಿಮಾನಿ. ಅವರು ನಮ್ಮ ಬೆಂಗಳೂರಿನ ಹುಡುಗಿ. ಲಕ್ಷಾಂತರ ಜನರು ಅವರನ್ನು ಮಾದರಿಯಾಗಿ ಇಟ್ಟುಕೊಂಡಿದ್ದಾರೆ. ವಿವಾಹೇತರ ಸಂಬಂಧ, ಸಂಸಾರ ಒಡೆಯುವುದು ಇಂಥದ್ದನ್ನೆಲ್ಲ ಕೆಲವರು ಓಕೆ ಎನ್ನಬಹುದು. ಅದು ತುಂಬ ತಪ್ಪು ಸಂದೇಶ. ನಾನು ಹಳೇ ಕಾಲದವನೇ?’ ಎಂದು ಭಾಸ್ಕರ್​ ರಾವ್​ ಅವರು ಟ್ವೀಟ್​ ಮಾಡಿದ್ದಾರೆ.

ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಭಾಸ್ಕರ್​ ರಾವ್​ ಅವರ ಮಾತನ್ನು ಒಪ್ಪಿಕೊಂಡಿಲ್ಲ. ಬದಲಾಗಿ, ಪೂರ್ತಿ ಸಿನಿಮಾ ನೋಡುವಂತೆ ಅವರು ಸಲಹೆ ನೀಡಿದ್ದಾರೆ. ‘ನೀವು ಪೂರ್ತಿ ಸಿನಿಮಾ ನೋಡಬೇಕು. ದೀಪಿಕಾ ಪಡುಕೋಣೆ ಅವರ ನಟನೆ ಚೆನ್ನಾಗಿದೆ. ಕೊನೆಯಲ್ಲಿ ಕೆಲವು ಟ್ವಿಸ್ಟ್​ಗಳಿವೆ’ ಎಂದು ಕಿರಣ್ ಮಜುಂದಾರ್ ಶಾ ಕಮೆಂಟ್​ ಮಾಡಿದ್ದಾರೆ. ಅದಕ್ಕೆ ಭಾಸ್ಕರ್​ ರಾವ್​ ಪ್ರತಿಕ್ರಿಯಿಸಿದ್ದಾರೆ.

‘ಯಾವುದೇ ಪಾತ್ರದಲ್ಲೂ ದೀಪಿಕಾ ಪಡುಕೋಣೆ ಅವರ ನಟನೆ ಚೆನ್ನಾಗಿ ಇರುತ್ತದೆ. ಲಕ್ಷಾಂತರ ಜನರಿಗೆ ಮಾದರಿ ಆಗಿರುವ ಒರ್ವ ವ್ಯಕ್ತಿಯಿಂದ ಈ ರೀತಿ ಸಂದೇಶ ರವಾನೆ ಆಗುವುದರ ಬಗ್ಗೆ ನಾನು ಪ್ರತಿಕ್ರಿಯಿಸಿದ್ದೇನೆ. ಯುವಜನರು ಸಿನಿಮಾ ನಟ-ನಟಿಯರನ್ನು ಹೇಗೆ ಅನುಕರಿಸುತ್ತಾರೆ ಎಂಬುದನ್ನು ಓರ್ವ ಪೊಲೀಸ್​ ಅಧಿಕಾರಿಯಾಗಿ ನಾನು ಕಂಡಿದ್ದೇನೆ. ಇಂಥದ್ದೆಲ್ಲ ಓಕೆ ಎಂದು ಯುವಕರು ಭಾವಿಸುತ್ತಾರೆ. ಕುಟುಂಬಗಳು ಹಾಳಾಗುತ್ತವೆ, ಕ್ರೈಂ ಹೆಚ್ಚುತ್ತದೆ’ ಎಂದು ಭಾಸ್ಕರ್​ ರಾವ್​ ಅವರು ಪ್ರತಿಕ್ರಿಯಿಸಿದ್ದಾರೆ.

ಸಿನಿಮಾ ಕೇವಲ ಕಾಲ್ಪನಿಕ ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ಮೆಚ್ಯುರಿಟಿ ಜನರಿಗೆ ಇರಬೇಕು ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ಅದಕ್ಕೂ ಭಾಸ್ಕರ್​ ರಾವ್​ ಪ್ರತಿಕ್ರಿಯಿಸಿದ್ದಾರೆ. ‘ನಿಮ್ಮ ರೀತಿ ಎಲ್ಲರಿಗೂ ಮೆಚ್ಯುರಿಟಿ ಇರುವುದಿಲ್ಲ. ಕನ್ನಡದ ‘ದಂಡುಪಾಳ್ಯ’ ಸಿನಿಮಾ ಬಿಡುಗಡೆ ಆದ ಬಳಿಕ ಆ ಚಿತ್ರದಲ್ಲಿ ತೋರಿಸಿದ ರೀತಿಯೇ ವೃದ್ಧರ ಕೊಲೆಗಳು ಹೆಚ್ಚಾಗಿದ್ದನ್ನು ನಾವು ಕಂಡಿದ್ದೆವು. ಅದನ್ನು ಕೊಲೆಗಾರರು ಒಪ್ಪಿಕೊಂಡಿದ್ದರು ಕೂಡ. ರೌಡಿಗಳನ್ನು ಸಿನಿಮಾದಲ್ಲಿ ವಿಜೃಂಭಿಸುವುದರಿಂದ ರೌಡಿಸಂ, ದರೋಡೆ ಹೆಚ್ಚಾಗಿದೆ’ ಎಂದು ಭಾಸ್ಕರ್​ ರಾವ್​ ಅವರು ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನೂ ಓದಿ:

ತಾವೇ ನಿರ್ಮಿಸಿದ ‘ಗೆಹರಾಯಿಯಾ’ ಚಿತ್ರವನ್ನು ಟ್ರೋಲ್​ ಮಾಡಿದ ಧರ್ಮ ಪ್ರೊಡಕ್ಷನ್​

‘ಗೆಹರಾಯಿಯಾ’ ನೋಡಿ ದೀಪಿಕಾ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ ನಟ; ಅಭಿಮಾನಿಗಳಿಂದ ತರಾಟೆ

Published On - 9:58 am, Sun, 20 February 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ