ತಾವೇ ನಿರ್ಮಿಸಿದ ‘ಗೆಹರಾಯಿಯಾ’ ಚಿತ್ರವನ್ನು ಟ್ರೋಲ್​ ಮಾಡಿದ ಧರ್ಮ ಪ್ರೊಡಕ್ಷನ್​

‘ಗೆಹರಾಯಿಯಾ’ ಚಿತ್ರವನ್ನು ಟೀಕಿಸಿ ಓರ್ವ ಟ್ವೀಟ್​ ಒಂದನ್ನು ಮಾಡಿದ್ದ. ಸಿನಿಮಾ ನೋಡಿದ ನಂತರದಲ್ಲಿ ಮಿದುಳು ಹಾಳಾಯಿತು ಎಂಬರ್ಥ ಬರುವ ರೀತಿಯಲ್ಲಿ ಈ ಟ್ವೀಟ್​ ಇತ್ತು. ಇದನ್ನು ಧರ್ಮ ಪ್ರೊಡಕ್ಷನ್​ ಇನ್​ಸ್ಟಾಗ್ರಾಮ್​ ಸ್ಟೇಟಸ್​​ನಲ್ಲಿ ಹಂಚಿಕೊಂಡಿತ್ತು. ಅರ್ಧ ಗಂಟೆಗೂ ಅಧಿಕ ಕಾಲ ಈ ಸ್ಟೇಟಸ್​ ಹಾಗೆಯೇ ಇತ್ತು.

ತಾವೇ ನಿರ್ಮಿಸಿದ ‘ಗೆಹರಾಯಿಯಾ’ ಚಿತ್ರವನ್ನು ಟ್ರೋಲ್​ ಮಾಡಿದ ಧರ್ಮ ಪ್ರೊಡಕ್ಷನ್​
ದೀಪಿಕಾ-ಕರಣ್​
TV9kannada Web Team

| Edited By: Rajesh Duggumane

Feb 13, 2022 | 9:15 PM

ದೀಪಿಕಾ ಪಡುಕೋಣೆ (Deepika Padukone) , ಸಿದ್ಧಾಂತ್​ ಚತುರ್ವೇದಿ, ಅನನ್ಯಾ ಪಾಂಡೆ ಮೊದಲಾದವರು ನಟಿಸಿರುವ ‘ಗೆಹರಾಯಿಯಾ’ ಸಿನಿಮಾ (Gehraiyaan Movie) ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆಧುನಿಕ ಜಗತ್ತಿನ ಗೊಂದಲಮಯ ಮನಸ್ಸುಗಳ ಬಗ್ಗೆ ನಿರ್ದೇಶಕ ಶಕುನ್​ ಭಾತ್ರ  ಹೇಳಿದ ಕಥೆ ಅನೇಕರಿಗೆ ಇಷ್ಟವಾಗಿಲ್ಲ. ಕೆಲವರು ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಅದ್ಭುತವಾಗಿದೆ ಸಿನಿಮಾ ಎಂದು ಕೊಂಡಾಡಿದ್ದಾರೆ. ಈ ಸಿನಿಮಾ ಬಗ್ಗೆ ಸಾಕಷ್ಟು ಮೀಮ್​ಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಕೆಲವರು ಈ ಚಿತ್ರವನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ್ದಾರೆ. ವಿಚಿತ್ರ ಎಂದರೆ ಸ್ವತಃ ಧರ್ಮ ಪ್ರೊಡಕ್ಷನ್ (Dharma Production)​ ಅವರು ಈ ಚಿತ್ರದ ಬಗ್ಗೆ ಟೀಕೆ ​ ಮಾಡಿದ್ದಾರೆ! ಸದ್ಯ, ಈ ಪೋಸ್ಟ್ ಸಾಕಷ್ಟು ವೈರಲ್​ ಆಗುತ್ತಿದೆ. ಈ ಚಿತ್ರದ ಬಗ್ಗೆ ಟೀಕೆ ಮಾಡೋಕೆ ಟ್ರೋಲಿಗರಿಗೆ ಮತ್ತಷ್ಟು ಸರಕು ಸಿಕ್ಕಂತಾಗಿದೆ.ದನ್ನು ಮಾಡಿಕೊಂಡಿದೆ.

‘ಗೆಹರಾಯಿಯಾ’ ಚಿತ್ರವನ್ನು ಟೀಕಿಸಿ ಓರ್ವ ಟ್ವೀಟ್​ ಒಂದನ್ನು ಮಾಡಿದ್ದ. ಸಿನಿಮಾ ನೋಡಿದ ನಂತರದಲ್ಲಿ ಮಿದುಳು ಹಾಳಾಯಿತು ಎಂಬರ್ಥ ಬರುವ ರೀತಿಯಲ್ಲಿ ಈ ಟ್ವೀಟ್​ ಇತ್ತು. ಇದನ್ನು ಧರ್ಮ ಪ್ರೊಡಕ್ಷನ್​ ಇನ್​ಸ್ಟಾಗ್ರಾಮ್​ ಸ್ಟೇಟಸ್​​ನಲ್ಲಿ ಹಂಚಿಕೊಂಡಿತ್ತು. ಅರ್ಧ ಗಂಟೆಗೂ ಅಧಿಕ ಕಾಲ ಈ ಸ್ಟೇಟಸ್​ ಹಾಗೆಯೇ ಇತ್ತು. ತಪ್ಪಿನ ಅರಿವಾದ ನಂತರದಲ್ಲಿ ಇದನ್ನು ಡಿಲೀಟ್​ ಮಾಡಲಾಗಿದೆ.

ಈ ಘಟನೆ ಬಳಿಕ ‘ಗೆಹರಾಯಿಯಾ’ಚಿತ್ರವನ್ನು ಮತ್ತಷ್ಟು ಟ್ರೋಲ್​ ಮಾಡಲಾಗುತ್ತಿದೆ. ದೀಪಿಕಾ ಹಾಗೂ ಅನನ್ಯಾ ಅವರನ್ನು ಮಾತ್ರ ಹೈಲೈಟ್​ ಮಾಡಲಾಗುತ್ತಿದೆ ಎಂದು ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ, ದೀಪಿಕಾ ಈ ಬಗ್ಗೆ ಯಾವುದೇ ನೆಗೆಟಿವ್ ಕಮೆಂಟ್​ಗಳನ್ನು ಹಂಚಿಕೊಳ್ಳುತ್ತಿಲ್ಲ. ಅವರು ಈ ಸಿನಿಮಾ ಬಗ್ಗೆ ಸಂತಸ ಹೊಂದಿದ್ದಾರೆ.

ಇದನ್ನೂ ಓದಿ: Divya Suresh: ನೈಟ್ ಕರ್ಫ್ಯೂ ವೇಳೆ ಬಿಗ್​ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕಿರಿಕ್?; ವಿಡಿಯೋ ಇಲ್ಲಿದೆ

‘ಬಿಗ್​ ಬಾಸ್ 15’​ ಫಿನಾಲೆಯಲ್ಲಿ ಶಮಿತಾ ಶೆಟ್ಟಿ; ವಿನ್ನರ್​ ಪಟ್ಟಕ್ಕಾಗಿ ಹಣಾಹಣಿ ನಡೆಸುತ್ತಿರೋದು ಯಾರೆಲ್ಲ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada