ಪ್ರತ್ಯೇಕ ರಾಷ್ಟ್ರದ ಹೇಳಿಕೆ: ದಾವಣಗೆರೆ ಜಿಲ್ಲಾ BJP ಯುವ ಘಟಕದಿಂದ ಡಿಕೆ ಸುರೇಶ್ ವಿರುದ್ಧ ದೂರು
ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಿರುದ್ಧ ದಾವಣಗೆರೆ ಜಿಲ್ಲಾ ಬಿಜೆಪಿ ಯುವ ಘಟಕದಿಂದ ದೂರು ನೀಡಲಾಗಿದೆ. ಪಾಲಿಕೆ ಸದಸ್ಯ ಶಿವಪ್ರಕಾಶ್ ನೇತೃತ್ವದಲ್ಲಿ ನಗರ ಡಿವೈಎಸ್ ಮಲ್ಲೇಶ್ ದೊಡ್ಡಮನಿ ಮೂಲಕ ಎಸ್ಪಿಗೆ ದೂರು ನೀಡಲಾಗಿದೆ. ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ದಾವಣಗೆರೆ, ಫೆಬ್ರವರಿ 17: ದಾವಣಗೆರೆ ಜಿಲ್ಲಾ ಬಿಜೆಪಿ ಯುವ ಘಟಕದಿಂದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ (DK Suresh) ವಿರುದ್ಧ ದೂರು ನೀಡಲಾಗಿದೆ. ದೇಶದ ಅಖಂಡತೆಗೆ ಧಕ್ಕೆ ಬರುವ ಹೇಳಿಕೆ ನೀಡಿದ್ದಾರೆ. ದೇಶ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ. ಇದೊಂದು ರೀತಿಯಲ್ಲಿ ಸಂವಿಧಾನಕ್ಕೆ ಅಗೌರವ ತೊರಿದಂತಾಗಿದೆ. ಹೀಗಾಗಿ ಪಾಲಿಕೆ ಸದಸ್ಯ ಶಿವಪ್ರಕಾಶ್ ನೇತೃತ್ವದಲ್ಲಿ ನಗರ ಡಿವೈಎಸ್ ಮಲ್ಲೇಶ್ ದೊಡ್ಡಮನಿ ಮೂಲಕ ಎಸ್ಪಿಗೆ ದೂರು ನೀಡಲಾಗಿದೆ. ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಸಂಸದ ಡಿ.ಕೆ.ಸುರೇಶ್‌ರವರ ದೇಶ ವಿಭಜನೆ ಯೋಚನೆಯೇ ತಪ್ಪು: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
ನವದೆಹಲಿಯಲ್ಲಿ ಬಿಜೆಪಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ಸಂಸದ ಡಿ.ಕೆ.ಸುರೇಶ್‌ರವರ ದೇಶ ವಿಭಜನೆ ಯೋಚನೆಯೇ ತಪ್ಪು. ದೇಶ ವಿಭಜನೆಗಾಗಿ ಸ್ವಾತಂತ್ರ್ಯ ತಂದುಕೊಟ್ರಾ? ಹಿಂದೂ ಹಾಗೂ ಮುಸ್ಲಿಂ ದೇಶ ಮಾಡಿ ವಿಭಜನೆ ಮಾಡಿದ್ದರು. ಇದನ್ನು ಮುಂದುವರಿಸುವ ಚಿಂತನೆ ತಪ್ಪು. ಡಿ.ಕೆ.ಸುರೇಶ್ ಹೇಳಿಕೆ ತಪ್ಪು ಅಂತಾ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಹ ಹೇಳಿದ್ದಾರೆ. ತಪ್ಪಾಗಿದೆ ಎಂದು ಹೇಳಿದ್ದಕ್ಕೆ ನನ್ನ ವಿರುದ್ಧ ಎಫ್ಐಆರ್ ಹಾಕಿದರು ಎಂದು ಹೇಳಿದ್ದಾರೆ.
ನನ್ನ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳೋ ಪ್ರಶ್ನೆಯೇ ಇಲ್ಲ: ಡಿ.ಕೆ.ಸುರೇಶ್
ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಸುರೇಶ್, ತಮ್ಮ ಹೇಳಿಕೆಗೆ ಬದ್ಧರಾಗಿರುವ ಡಿ.ಕೆ.ಸುರೇಶ್ ನನ್ನ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳೋ ಪ್ರಶ್ನೆಯೇ ಇಲ್ಲ ಅಂತ ಖಡಕ್ ಆಗಿಯೇ ಹೇಳಿದ್ದಾರೆ. ನನ್ನ ಹೇಳಿಕೆಯನ್ನು ಪ್ರತಿ ಹಂತದಲ್ಲೂ ಬಿಜೆಪಿಯವರು ನನ್ನ ಮಾತನ್ನು ತಿರುಚುತ್ತಿದ್ದಾರೆ. ಅನಿವಾರ್ಯ ಎಂಬುದನ್ನು ದೇಶ ವಿಭಜನೆ ಅಂದರೆ ಏನೂ ಮಾಡುವುದಕ್ಕೆ ಆಗಲ್ಲ ಅಂತ ಟಕ್ಕರ್ ಕೊಟ್ಟಿದ್ದಾರೆ.
ಇದನ್ನೂ ಓದಿ: ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ, ದೇಶ ವಿಭಜನೆ ಬಗ್ಗೆ ಮಾತಾಡಿಲ್ಲ: ಡಿಕೆ ಸುರೇಶ್
ಪ್ರಧಾನಿಯವರು ಸಂಸತ್ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಯಾವ ಭಾಷೆ ಮಾತಾಡುತ್ತಾರೆ ಎಂದಿದ್ದರು. ಇದಕ್ಕೂ ಟಾಂಗ್ ಕೊಟ್ಟ ಡಿ.ಕೆ ಸುರೇಶ್ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಏನು ಮಾತಾಡಿದ್ದರು ನೆನಪಿಸಿಕೊಳ್ಳಲಿ ಎಂದಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ಷೇಪರ್ಹ ಹೇಳಿಕೆ: ಸಂಸದ ಅನಂತಕುಮಾರ ಹೆಗಡೆಗೆ ಹೈಕೋರ್ಟ್ ಚಾಟಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ವಿಧಾನಸಭೆಯಲ್ಲಿ ಅನ್ಯಾಯ ಆಗಿದೆ ಅಂತ ಬೊಮ್ಮಾಯಿಯವರು ಹೇಳಿಲ್ವಾ? ಅಂತ ಡಿ.ಕೆ.ಸುರೇಶ್ ಪ್ರಶ್ನೆ ಮಾಡಿದ್ದಾರೆ. ರಾಜಕೀಯಕ್ಕೋಸ್ಕರ ನಾಟಕ ಆಡ್ತಿದ್ದಾರೆ ಗರಂ ಆದರು.
ಇನ್ನು ಈಶ್ವರಪ್ಪ ಮತ್ತು ಡಿಕೆ ಬ್ರದರ್ಸ್ ನಡುವಿನ ಜಗಳ ವೈಯಕ್ತಿಕ ಹಂತಕ್ಕೆ ಹೋಗ್ತಿದೆಯಾ ಅನ್ನೋ ಪ್ರಶ್ನೆಗೆ ಇಷ್ಟರಲ್ಲೇ ಎದುರಿಗೆ ಹೋಗ್ತೀನಿ ಗುಂಡಿಕ್ಕಿ ಕೊಲ್ಲಲಿ ಅಂತಾ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.