ಆರ್​ಎಸ್​ಎಸ್ ​ಬಗ್ಗೆ ಮಾತನಾಡುವ ಕಾಂಗ್ರೆಸ್​​ನವರಿಗೆ ಬುದ್ಧಿಭ್ರಮಣೆ ಆಗಿದೆ: ಸಚಿವ ಭೈರತಿ ಬಸವರಾಜ್

ಆರ್​ಎಸ್​ಎಸ್ ದೇಶ ಸೇವೆಗೆ ಹೆಸರಾದ ಸಂಸ್ಥೆ. RSS ಬಗ್ಗೆ ಮಾತನಾಡುವ ಕಾಂಗ್ರೆಸ್​​ನವರಿಗೆ ಬುದ್ಧಿಭ್ರಮಣೆ ಆಗಿದೆ. ಈ ರೀತಿ ಹೇಳಿಕೆ ನೀಡುವುದು ಸಿದ್ದರಾಮಯ್ಯಗೆ ಶೋಭೆ ತರಲ್ಲ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಭೈರತಿ ಬಸವರಾಜ್ ಕಿಡಿಕಾರಿದ್ದಾರೆ.

ಆರ್​ಎಸ್​ಎಸ್ ​ಬಗ್ಗೆ ಮಾತನಾಡುವ ಕಾಂಗ್ರೆಸ್​​ನವರಿಗೆ ಬುದ್ಧಿಭ್ರಮಣೆ ಆಗಿದೆ: ಸಚಿವ ಭೈರತಿ ಬಸವರಾಜ್
ಸಚಿವ ಭೈರತಿ ಬಸವರಾಜ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jun 05, 2022 | 11:59 AM

ದಾವಣಗೆರೆ: ಆರ್​ಎಸ್​ಎಸ್ ವಿಚಾರಕ್ಕೆ ಬಂದರೆ ಕಾಂಗ್ರೆಸ್ ಸರ್ವನಾಶವಾಗುತ್ತೆ. ಚಡ್ಡಿ ಅಭಿಯಾನದ ಬಗ್ಗೆ ಮಾತಾಡುವ ಸಿದ್ದರಾಮಯ್ಯಗೆ ಬುದ್ಧಿ ಇಲ್ಲ ಎಂದು ದಾವಣಗೆರೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿಕೆ ನೀಡಿದ್ದಾರೆ. ಆರ್​ಎಸ್​ಎಸ್ ದೇಶ ಸೇವೆಗೆ ಹೆಸರಾದ ಸಂಸ್ಥೆ. RSS ಬಗ್ಗೆ ಮಾತನಾಡುವ ಕಾಂಗ್ರೆಸ್​​ನವರಿಗೆ ಬುದ್ಧಿಭ್ರಮಣೆ ಆಗಿದೆ. ಈ ರೀತಿ ಹೇಳಿಕೆ ನೀಡುವುದು ಸಿದ್ದರಾಮಯ್ಯಗೆ ಶೋಭೆ ತರಲ್ಲ ಎಂದು ಕಾಂಗ್ರೆಸ್ ವಿರುದ್ಧ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ವಾಗ್ದಾಳಿ ಮಾಡಿದರು. ರೋಹಿತ್​​ ಚಕ್ರತೀರ್ಥ ದ್ವಿತೀಯ PU ಪಠ್ಯ ಪರಿಷ್ಕರಣೆ ಹೊಣೆ ವಿಚಾರವಾಗಿ ಮಾತನಾಡಿದ್ದು, ದ್ವಿತೀಯ PU ಪಠ್ಯ ಪರಿಷ್ಕರಣೆ ಜವಾಬ್ದಾರಿ ನೀಡಿದ ವಿಚಾರ ಗೊತ್ತಿಲ್ಲ ಎಂದು ಹೇಳಿದರು.

ಭಾರಿ ಮಳೆಗೆ ಕೊಚ್ಚಿಹೋದ ಭದ್ರಾ ಕಾಲುವೆ

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮ ಭದ್ರಾ ಕಾಲುವೆ ಭಾರಿ ಮಳೆಗೆ ಕೊಚ್ಚಿಹೋಗಿದ್ದು, ರೈತರಲ್ಲಿ ಆತಂಕ ಉಂಟಾಗಿದೆ. ಸ್ವಂತ ಖರ್ಚಿನಲ್ಲಿ ಕಾಲುವೆ ದುರಸ್ತಿಗೆ ಚಂದ್ರಶೇಖರ ಪೂಜಾರ ಮುಂದಾಗಿದ್ದು, ರೈತರ ಸಹಕಾರದಿಂದ ಕಾಲುವೆ ದುರಸ್ತಿ ಮಾಡಲಾಗಿದೆ. 1 ಸಾವಿರ ಎಕರೆ ಪ್ರದೇಶದಲ್ಲಿ ಒಣಗುತ್ತಿರುವ ಬೆಳೆಗೆ ಮರುಜೀವ ಬಂದಿದ್ದು, 5 ದಿನ ನಿರಂತರವಾಗಿ ದುರಸ್ತಿ ನಂತರ ಜಮೀನಿಗೆ ನೀರು ಪೂರೈಕೆ ಮಾಡಲಾಗಿದ್ದು, 6 ಗ್ರಾಮಗಳ ರೈತರು ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ.

ಪೆಟ್ರೋಲ್​​, ಡೀಸೆಲ್​ ದರ ಮತ್ತಷ್ಟು ಇಳಿಕೆ

ಕೆಲ ದಿನಗಳಲ್ಲಿ ಪೆಟ್ರೋಲ್​​, ಡೀಸೆಲ್​ ದರ ಮತ್ತಷ್ಟು ಇಳಿಕೆ ಆಗಲಿದೆ ಎಂದು ಜಿಲ್ಲೆಯಲ್ಲಿ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್​ ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ. ಕೆಲ ಕಡೆ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸುವ ಯತ್ನ ನಡೆದಿದೆ. ಕೃತಕ ಅಭಾವ ಸೃಷ್ಟಿಸುವವರನ್ನು ಪತ್ತೆ ಹಚ್ಚಿ ಕಠಿಣ ಕ್ರಮಕೈಗೊಳ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಬಾಂಗ್ಲಾದೇಶ: ಹೊತ್ತಿ ಉರಿದ ಕಂಟೈನರ್ ಡಿಪೋ, 16 ಮಂದಿ ಸಾವು, 450 ಮಂದಿಗೆ ಗಂಭೀರ ಗಾಯ

ಕಾಂಗ್ರೆಸ್​ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ

ಹುಬ್ಬಳ್ಳಿ: ಆರ್​ಎಸ್​ಎಸ್​ ಚಡ್ಡಿ ಸುಡುತ್ತೇವೆಂಬ ಕಾಂಗ್ರೆಸ್ ಹೇಳಿಕೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದು, ಕಳೆದ 75 ವರ್ಷದಿಂದ ಆರ್​ಎಸ್​ಎಸ್ ಜನಸೇವೆ ಮಾಡುತ್ತಿದೆ. ಜನರು ಸಂಕಷ್ಟದಲ್ಲಿದ್ದಾಗ ಆರ್​ಎಸ್​ಎಸ್ ಸಹಾಯ ಮಾಡಿದೆ. ಹೀಗಾಗಿ ಕಾಂಗ್ರೆಸ್​ ಜನರನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸುತ್ತಿದೆ. ಸಿದ್ದರಾಮಯ್ಯ ಆರ್​ಎಸ್​ಎಸ್​ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗೆ ಮಾಡೇ ಎಲ್ಲೆಡೆ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳಲಿದೆ ಎಂದು ಕಾಂಗ್ರೆಸ್​ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ಮಾಡಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.