ದಾವಣಗೆರೆ: ಅಪಘಾತವೊಂದಕ್ಕೆ ಪರಿಹಾರ ನೀಡಲು ಕೆಎಸ್ಆರ್ಟಿಸಿ ಹಿಂದೇಟು ಹಾಕಿದ ಕಾರಣಕ್ಕೆ ಕೋರ್ಟ್ ಸಿಬ್ಬಂದಿ ಕೆಎಸ್‌ಆರ್‌ಟಿಸಿ ಬಸ್ಸನ್ನು ಸೀಜ್ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಬಸ್ ನಿಲ್ದಾಣದಲ್ಲಿ ನಡೆದಿದೆ. ಹುಬ್ಬಳ್ಳಿ ವಿಭಾಗದ KA 63 F 0082 ನೋಂದಣಿ ಬಸ್ ಜಪ್ತಿಗೊಳಗಾದದ್ದು. 13 ಸೆಪ್ಟಂಬರ್ 2017 ರಂದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ಕ್ರಾಸ್ ಬಳಿ ಬೈಕ್ ಹಾಗೂ ಕೆಎಎಸ್ಆರ್ಟಿಸಿ ಬೈಕ್ ಮಧ್ಯೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಹೊಸಳ್ಳಿ ಗ್ರಾಮದ ನಿವಾಸಿಗಳಾದ ಮಂಜುನಾಥ (26), ಬಸವರಾಜ್ (28) ಎಂಬ ಇಬ್ಬರು ಯುವಕರು ಮೃತಪಟ್ಟಿದ್ದರು. ಮಂಜುನಾಥ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದರು. ಬಸವರಾಜ್ ಕೃಷಿಕರಾಗಿದ್ದರು. ಪರಿಹಾರ ಕೋರಿ ಮೃತರ ತಂದೆ ಚಂದ್ರಪ್ಪ ಪ್ರಕರಣ ದಾಖಲಿಸಿದ್ದರು. ಹರಿಹರದ ನ್ಯಾಯಾಲಯ ಪ್ರಕರಣದಲ್ಲಿ 18.17 ಲಕ್ಷ ಪರಿಹಾರ ನೀಡಲು ಆದೇಶಿಸಿತ್ತು.
ನಂತರ ಹೆಚ್ಚುವರಿ ಪರಿಹಾರಕ್ಕಾಗಿ ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ₹ 47.84 ಲಕ್ಷ ಪರಿಹಾರ ಜತೆ ಶೇ.ಕಡಾ 6ರಷ್ಟು ಬಡ್ಡಿಯನ್ನು ಪರಿಹಾರ ರೂಪದಲ್ಲಿ ಮೃತರ ಪೋಷಕರಿಗೆ ನೀಡುವಂತೆ ಕೆಎಸ್ಆರ್ಟಿಸಿಗೆ ಆದೇಶಿಸಿತ್ತು. ಕೋರ್ಟ್ ಆದೇಶವನ್ನು ಕೆಎಸ್ಆರ್ಟಿಸಿ ಪಾಲಿಸದ ಕಾರಣ ಕೋರ್ಟ್ ಸಿಬ್ಬಂದಿ ಇಂದು ದಾವಣಗೆರೆ ಜಿಲ್ಲೆಯ ಹರಿಹರ ಬಸ್ ನಿಲ್ದಾಣದಲ್ಲಿ ಬಸ್ಸನ್ನು ಜಪ್ತಿ ಮಾಡಿದ್ದಾರೆ. ಸಂತ್ರಸ್ತರ ಪರ ವಕೀಲ ಕಿತ್ತೂರು ಶೇಖ್ ಇಬ್ರಾಹಿಂ ವಾದ ಮಂಡಿಸಿದ್ದರು.
ಬೆಂಗಳೂರಿಗೆ ವಿಮಾನದಲ್ಲಿ ಬಂದು ಮನೆಗಳ್ಳತನ ಮಾಡುತ್ತಿದ್ದರು! ನಾಲ್ವರು ಆರೋಪಿಗಳನ್ನು ಬಂಧಿಸಿದ ಬಸವನಗುಡಿ ಪೊಲೀಸರು
ಕಳೆದ ನಾಲ್ಕು ವರ್ಷದಿಂದ ಮನೆಗಳ್ಳತನ ಮಾಡುತ್ತಿದ್ದ ಆರೋಪದಡಿ ಬೆಂಗಳೂರಿನ ಬಸವನಗುಡಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರು ಬೆಂಗಳೂರಿನಲ್ಲಿ ಒಟ್ಟು 12 ಮನೆಗಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಗಳಾಗಿದ್ದಾರೆ. ಬೆಂಗಳೂರಿಗೆ ವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಿದ್ದರು. ಕದ್ದ ಮಾಲನ್ನು ಹೈದರಾಬಾದದ್ನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಳಿಸರು ತಿಳಿಸಿದ್ದಾರೆ. ಸ್ವಂತ ಊರಿನಲ್ಲಿ ತಾವು ಬೆಂಗಳೂರಿನಲ್ಲಿ ಬ್ಯುಸಿನೆಸ್ ಮಾಡುವುದಾಗಿ ಆರೋಪಿಗಳು ಹೇಳಿಕೊಂಡಿದ್ದರು.
ಸಲೀಂ ಶೇಖ್, ಬಿಲಾಲ್ ಮಂಡಲ್, ಜಾಲಿಕ್ ಬಂಧಿತರು. ಇವರಿಂದ 3.3 ಕೆಜಿ ಚಿನ್ನದ ಆಭರಣ, 18 ಕೆಜಿ ಬೆಳ್ಳಿ ಸಾಮಾಗ್ರಿಗಳೂ ಸೇರಿ ಒಟ್ಟು ₹1.60 ಕೋಟಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಶ. ಈ ಆರೋಪಿಗಳನ್ನು ಕರ್ನಾಟಕ ಪೊಲೀಸರು ಇದೇ ಮೊದಲ ಬಾರಿಗೆ ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವನಾದ ಸಲೀಂ ಅಲಿಯಾಸ್ ಶೋಕಿ ಸಲೀಂ ಈಹಿಂದೆ ಮುಂಬೈ ಪೊಲೀಸರಿಂದಲೂ ಬಂಧಿಸಲ್ಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:
ಬೆಂಗಳೂರಿಗೆ ವಿಮಾನದಲ್ಲಿ ಬಂದು ಮನೆಗಳ್ಳತನ ಮಾಡುತ್ತಿದ್ದರು! ನಾಲ್ವರು ಆರೋಪಿಗಳನ್ನು ಬಂಧಿಸಿದ ಬಸವನಗುಡಿ ಪೊಲೀಸರು
ಭಾರತ- ಪಾಕಿಸ್ತಾನದ ಜಗಳದಲ್ಲಿ ಅಫ್ಘಾನಿಸ್ತಾನವನ್ನು ಎಳೆದು ತರಬೇಡಿ; ತಾಲಿಬಾನ್ ಸೂಚನೆ
(Daavanagere harihar bus stand KSRTC bus seized to compensate for accident)
Published On - 4:27 pm, Mon, 30 August 21