ದೇವಿ ಹೊತ್ತ ದಲಿತ ಪೂಜಾರಿ ಬೆನ್ನ ಮೇಲೆ ಪಾದ ಇಟ್ರೇ ಕಷ್ಟಗಳು ಪರಿಹಾರ; ಸಮಾಜದಲ್ಲಿ ಕೀಳಾಗಿ ನೋಡುವ ದಲಿತನೇ ಇಲ್ಲಿ ದೇವರು

| Updated By: ಆಯೇಷಾ ಬಾನು

Updated on: Jan 02, 2022 | 12:27 PM

ಬೆಳಗ್ಗೆ ದೇವರು ಗ್ರಾಮದ ಹೊರವಲಯದಲ್ಲಿನ ಕೆರೆಗೆ ಹೋಗುತ್ತದೆ. ಅಲ್ಲಿ ಮುತ್ತೈದೆಯರಿಂದ ಮಂಗಳಾರತ್ತಿ ಪೂಜೆ ನಡೆಯುತ್ತದೆ. ಇದಾದ ಬಳಿಕ ದೇವರನ್ನ ಹೊತ್ತ ಪೂಜಾರಿ ದುರ್ಗಪ್ಪ ಸಾವಿರಾರು ಜನರ ಬೆನ್ನ ಮೇಲೆ ನಡೆದುಕೊಂಡು ಬರುತ್ತಾನೆ. ಜನರನ್ನ ಬರಗಾಲದಲ್ಲಿ ಬದುಕಿಸಿದ ಖ್ಯಾತಿ ದೇವಿಗಿದೆ.

ದೇವಿ ಹೊತ್ತ ದಲಿತ ಪೂಜಾರಿ ಬೆನ್ನ ಮೇಲೆ ಪಾದ ಇಟ್ರೇ ಕಷ್ಟಗಳು ಪರಿಹಾರ; ಸಮಾಜದಲ್ಲಿ ಕೀಳಾಗಿ ನೋಡುವ ದಲಿತನೇ ಇಲ್ಲಿ ದೇವರು
ದೇವಿ ಹೊತ್ತ ದಲಿತ ಪೂಜಾರಿ ಬೆನ್ನ ಮೇಲೆ ಪಾದ ಇಟ್ರೇ ಕಷ್ಟಗಳು ಪರಿಹಾರ
Follow us on

ವಿಜಯನಗರ: ದಂಡಿದುರ್ಗಮ್ಮನ ಮೂರ್ತಿ ಹೊತ್ತ ದಲಿತ ಪೂಜಾರಿ ಭಕ್ತರ ಬೆನ್ನು ಮೇಲೆ ನಡೆದುಕೊಂಡು ದೇವಸ್ಥಾನಕ್ಕೆ ಹೋಗುವ ವಿಶಿಷ್ಟ ಸಂಪ್ರದಾಯದ ಜಾತ್ರೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ನಡೆದಿದೆ.

ಅದೊಂದು ವಿಶಿಷ್ಟ ಸಂಪ್ರದಾಯ. ದಲಿತರಿಗೆ ಹೋಟೆಲ್ನಲ್ಲಿ ಚಹಾ ಕುಡಿಯುವ ಕಪ್ ಹೊರಗಿಟ್ಟಿರುತ್ತಾರೆ. ದೇವಸ್ಥಾನ ಕೆರೆ ಬಾವಿಗಳಿಗೆ ಪ್ರವೇಶ ನೀಡದೇ ಇರುವ ಸಾವಿರಾರು ನಿದರ್ಶನಗಳಿವೆ. ಆದ್ರೆ ಇಲ್ಲಿ ಮಾತ್ರ ಇದಕ್ಕೆ ವಿರುದ್ಧವಾದ ಸಂಪ್ರದಾಯವೊಂದು ಜೀವಂತವಿದೆ. ಇಲ್ಲಿ ದಲಿತನೇ ದೇವರು. ಇಂತಹ ವಿಶಿಷ್ಟ ಸಂಪ್ರದಾಯ ಜೀವಂತ ಇರುವುದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸಿಕೆರೆ ದಂಡಿದುರ್ಗಮ್ಮನ ಜಾತ್ರೆಯಲ್ಲಿ. ಪ್ರತಿವರ್ಷ ಈ ಜಾತ್ರೆ ಜನವರಿಯಲ್ಲಿ ನಡೆಯುತ್ತದೆ. ಬೆಳಿಗ್ಗೆ 5.30 ರಿಂದ ಒಂಬತ್ತರವರೆಗೆ ಈ ಜಾತ್ರೆಯ ಸಂಭ್ರಮ ಹೆಚ್ಚಾಗಿರುತ್ತದೆ.

ಮೂರು ದಿನಗಳ ಕಾಲ ನಡೆಯುವ ದುರ್ಗಮ್ಮನ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಜನ ಬರುತ್ತಾರೆ. ಇದೊಂದು ಹೊಬಳಿ ಮಟ್ಟದ ಗ್ರಾಮ. ಈ ಹಿಂದೆ ದಾವಣಗೆರೆ ಜಿಲ್ಲೆಯ ಭಾಗವಾಗಿತ್ತು. ಈಗ ವಿಜಯನಗರ ಜಿಲ್ಲೆಗೆ ಸೇರಿದೆ. ಜಗಳೂರು ವಿಧಾನ ಸಭಾ ಕ್ಷೇತ್ರದಲ್ಲಿದೆ. ದೇವರ ಹೆಸರೇ ವಿಶೇಷ ದಂಡಿ. ಎಂದರೆ ಎರಡು. ಇಲ್ಲಿ ಪೂಜೆ ಮಾಡುವುದು ದುರ್ಗಮ್ಮನ ಎರಡು ಮೂರ್ತಿಗಳನ್ನ. ಶತಮಾನಗಳ ಹಿಂದೆ ತೀವ್ರ ಬರಗಾಲದ ವೇಳೆ ಜನ ಊಟಕ್ಕಿಲ್ಲದೆ ಸಾವನ್ನಪ್ಪುತ್ತಿದ್ದರು. ಆ ವೇಳೆ ಜನರ ಸಂಕಷ್ಟಕ್ಕೆ ಕೂಲಿ ಕಾರ್ಮಿಕನ ಮೂಲಕ ಗ್ರಾಮಕ್ಕೆ ಬಂದು ನೆಲೆಸಿದವಳೇ ದುರ್ಗಮ್ಮ. ಹೀಗಾಗಿ ಈ ದೇವಿಯನ್ನ ಗ್ರಾಮಕ್ಕೆ ತಂದಂತಹ ವ್ಯಕ್ತಿ ದಲಿತ ವರ್ಗಕ್ಕೆ ಸೇರಿದಾತ. ಹೀಗಾಗಿ ಇತನೇ ಈ ದೇವರ ಪೂಜಾರಿ. ಹೆಚ್ಚಾಗಿ ಬ್ರಾಹ್ಮಣರು, ಜಂಗಮರು, ಪಂಚಮಸಾಲಿಗಳೇ ಪೂಜಾರಿಗಳಾಗಿರುವ ವಿಶೇಷ. ಆದ್ರೆ ಇಲ್ಲಿ ಮಾತ್ರ ದಲಿತ ಪೂಜಾರಿ. ಅವರನ್ನ ಮುಟ್ಟಿಸಿಕೊಳ್ಳಲುಹಿಂದೇಟು ಹಾಕುವ ಸ್ಥಿತಿ ದೇಶದಲ್ಲಿದೆ. ಆದ್ರೆ ಈ ಗ್ರಾಮದಲ್ಲಿ ದಲಿತ ಕಾಲಿಗೆ ನಮಸ್ಕರಿಸುವ ಸಂಪ್ರದಾಯವಿದೆ.

ದಂಡಿ ದುರ್ಗಮ್ಮನ ಜಾತ್ರೆ

ಬೆಳಗ್ಗೆ ದೇವರು ಗ್ರಾಮದ ಹೊರವಲಯದಲ್ಲಿನ ಕೆರೆಗೆ ಹೋಗುತ್ತದೆ. ಅಲ್ಲಿ ಮುತ್ತೈದೆಯರಿಂದ ಮಂಗಳಾರತ್ತಿ ಪೂಜೆ ನಡೆಯುತ್ತದೆ. ಇದಾದ ಬಳಿಕ ದೇವರನ್ನ ಹೊತ್ತ ಪೂಜಾರಿ ದುರ್ಗಪ್ಪ ಸಾವಿರಾರು ಜನರ ಬೆನ್ನ ಮೇಲೆ ನಡೆದುಕೊಂಡು ಬರುತ್ತಾನೆ. ಜನರನ್ನ ಬರಗಾಲದಲ್ಲಿ ಬದುಕಿಸಿದ ಖ್ಯಾತಿ ದೇವಿಗಿದೆ. ತಮ್ಮ ಕಷ್ಟಗಳಿಗೆ ದೇವಿ ಸ್ಪಂಧಿಸುವುದು ಖಚಿತ. ನಾವೆಲ್ಲಾ ಇವಳ ಉತ್ಸವ ಜಾತ್ರೆಯಲ್ಲಿ ಕೆಲ ನಿಯಮಗಳನ್ನ ಪಾಲಿಸಿಕೊಂಡು ಬಂದಿದ್ದೇವೆ. ಇಲ್ಲಿ ಸುಮಾರು ಮೂರು ಕಿಲೋ ಮೀಟರ್ ದೂರದವರೆಗೆ ಪೂಜಾರಿ ದುರ್ಗಪ್ಪ ದೇವರನ್ನ ಹೊತ್ತುಕೊಂಡು ಹೋಗುತ್ತಿರುತ್ತಾನೆ. ಹೀಗೆ ಕೆರೆಯಿಂದ ಪೂಜೆ ಸಲ್ಲಿಸಿ ದೇವಿಯನ್ನ ಹೊತ್ತ ತಕ್ಷಣವೇ ಹಲವಾರು ಪ್ರಮುಖರ ಮೇಲೆ ಪೂಜಾರಿ ಕಾಲಿಡುತ್ತಾನೆ. ಹೀಗೆ ಸಾವಿರಾರು ಜನರ ಬೆನ್ನಿನ ಮೇಲೆ ಕಾಲಿಡುತ್ತಾ ಸಾಗುತ್ತಾನೆ. ಇದಲ್ಲಿ ಮಹಿಳೆಯರು ಮಕ್ಕಳು, ಹಿರಿಯರು ಸೇರಿದಂತೆ ಎಲ್ಲಾ ಜಾತಿಯ ಜನರು ಸಹ ಇರುತ್ತಾರೆ. ಲಿಂಗಾಯತರು, ಬ್ರಾಹ್ಮಣರು ಸಹ ಈ ದೇವಿಯ ಪರಮ ಭಕ್ತರು.

ಈ ಕಾರಣಕ್ಕಾಗಿ ಈ ಉತ್ಸವ ವಿಭಿನ್ನವಾಗಿ ಕಾಣುತ್ತದೆ. ಜಾತಿ ಜಾತಿಗಳ ನಡುವೆ ನಿತ್ಯ ಜಗಳಾಟಗಳು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ದಲಿತನನ್ನ ಪೂಜ್ಯ ಸ್ಥಾನದಲ್ಲಿಟ್ಟು ಗೌರವಿಸುವ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಜೊತೆಗೆ ಇಂತಹ ಅಪರೂಪದ ಜಾತ್ರೆ ಬಗ್ಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ನಾನಾ ಕಡೆ ಸಂಶೋಧನೆ ಸಹ ಆಗಿದೆ. ದಲಿತ ವ್ಯಕ್ತಿಯೊಬ್ಬ ತಮ್ಮ ಬೆನ್ನಿನ ಮೇಲೆ ಕಾಲಿಟ್ಟರೆ ಕಷ್ಟಗಳು ದೂರಾಗುತ್ತವೆ ಎಂಬುದು ನಂಬಿಕೆ.

ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ

ದಂಡಿ ದುರ್ಗಮ್ಮ

ಇದನ್ನೂ ಓದಿ: ಐತಿಹಾಸಿಕ ದಂಡಿ ದುರ್ಗಮ್ಮ ಪುಣ್ಯಕ್ಷೇತ್ರದ ಪೂಜಾರಿ ನಿಧನ