ಐತಿಹಾಸಿಕ ದಂಡಿ ದುರ್ಗಮ್ಮ ಪುಣ್ಯಕ್ಷೇತ್ರದ ಪೂಜಾರಿ ನಿಧನ

  • Publish Date - 7:42 am, Sun, 13 September 20
ಐತಿಹಾಸಿಕ ದಂಡಿ ದುರ್ಗಮ್ಮ ಪುಣ್ಯಕ್ಷೇತ್ರದ ಪೂಜಾರಿ ನಿಧನ

ದಾವಣಗೆರೆ: ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ ಐತಿಹಾಸಿಕ ದಂಡಿ ದುರ್ಗಮ್ಮ ಪುಣ್ಯಕ್ಷೇತ್ರದ ಪೂಜಾರಿ ಮೃತಪಟ್ಟಿದ್ದಾರೆ. ದುರ್ಗಪ್ಪ (54) ಮೃತ ಪೂಜಾರಿ.

ಕೆಲ ದಿನಗಳಿಂದ ದುರ್ಗಪ್ಪ ಅನಾರೋಗ್ಯದಿಂದ ಬಳಲುತ್ತಿದ್ದರು. ಅರಸೀಕೆರೆಯಲ್ಲಿ ನಡೆಯುವ ದಂಡಿ ದುರ್ಗಮ್ಮ ಜಾತ್ರೆ ವೇಳೆ ದೇವರ ಹೊತ್ತು ಭಕ್ತರ ಬೆನ್ನು ಮೇಲೆ ನಡೆದುಕೊಂಡು ಹೋಗುತ್ತಿದ್ದ ಪೂಜಾರಿ ಇವರು. ಈ ರೀತಿ ಬೆನ್ನು ಮೇಲೆ ನಡೆದರೇ ಭಕ್ತರ ಕಷ್ಟ ದೂರ ಆಗುತ್ತವೆ ಎಂಬ ನಂಬಿಕೆ ಇದೆ. ಆದರೆ ಅನಾರೋಗ್ಯದಿಂದ ಭಕ್ತರ ಕಷ್ಟನೀಗಿಸುತ್ತಿದ್ದದ ಪೂಜಾರಿ ನಿಧನರಾಗಿದ್ದಾರೆ.

Click on your DTH Provider to Add TV9 Kannada