
ದಾವಣಗೆರೆ, ಅಕ್ಟೋಬರ್ 08: ಮನೆಯಲ್ಲಿದ್ದ ಬಾಯ್ಲರ್ ಸ್ಫೋಟಗೊಂಡು (Boiler explosion)
11 ವರ್ಷದ ಬಾಲಕಿ ಸಾವನ್ನಪ್ಪಿದ್ದು (death), ಮೂವರಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಬಳಿ ನಡೆದಿದೆ. ಬಾಯ್ಲರ್ ಪಕ್ಕದಲ್ಲೇ ಇದ್ದ ಸ್ವೀಕೃತಿ ಮೃತ ಬಾಲಕಿ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗ್ಗೆ ಬಾಯ್ಲರ್ ಆನ್ ಮಾಡಿದಾಗ ಸ್ಟೋಟಗೊಂಡಿದೆ. ಈ ವೇಳೆ ಬಾಯ್ಲರ್ ಪಕ್ಕದಲ್ಲೇ ಬಾಲಕಿ ಸ್ವೀಕೃತಿ ಇದ್ದಳು. ಹೀಗಾಗಿ ಸ್ಟೋಟದ ತೀವ್ರತೆಗೆ ಸ್ವೀಕೃತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತೀರ್ಥಿ ಬಾಯಿ, ಹೂವಾ ನಾಯ್ಕ್ ಮತ್ತು ಸುನೀತಾ ಬಾಯಿಗೆ ಗಂಭೀರ ಗಾಯಗಳಾಗಿದ್ದು, ಸಾವು, ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಡಿಲು ಬಡಿದು ಸೀಮೆ ಹಸು ಸಾವನ್ನಪ್ಪಿರುವಂತಹ ಘಟನೆ ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಗಾಜಲಬಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀನಿವಾಸ್ ಎಂಬುವರಿಗೆ ಸೇರಿದ ಸೀಮೆ ಹಸುವನ್ನು ಹುಣಸೆ ಮರದ ಕೆಳಗೆ ಹಸು ಕಟ್ಟಲಾಗಿತ್ತು.
ಇದನ್ನೂ ಓದಿ: ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಸುಮಾರು 1 ಲಕ್ಷ ರೂ ಬೆಲೆ ಬಾಳುವ ಸೀಮೆ ಹಸು, ಪ್ರತಿನಿತ್ಯ 8 ರಿಂದ 10 ಲೀಟರ್ ಹಾಲು ಕೊಡುತ್ತಿತ್ತು. ಮುಳಬಾಗಲು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸರಕು ಸಾಗಣೆ ರೈಲಿನ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಘಟನೆ ಧಾರವಾಡ ಹೊರವಲಯದ ಗೇಟ್ ಬಳಿ ನಡೆದಿದೆ. ಗೋವಾ ಕಡೆಯಿಂದ ಹುಬ್ಬಳ್ಳಿಗೆ ಗೂಡ್ಸ್ ರೈಲು ತೆರಳುತ್ತಿತ್ತು. ಮಾರ್ಗಮಧ್ಯೆ ಕೆಟ್ಟುನಿಂತಿತ್ತು. ಈ ವೇಳೆ ಗೂಡ್ಸ್ ರೈಲಿನ ಎಂಜಿನ್ನಲ್ಲಿ ಬೆಂಕಿ ಕಾಣಿಕೊಂಡಿತ್ತು.
ಇದನ್ನೂ ಓದಿ: ಬೆಂಗಳೂರು: ವಿಲ್ಸನ್ ಗಾರ್ಡನ್ ನಿಗೂಢ ಸ್ಫೋಟದ ಕಾರಣ ಪತ್ತೆ
ಘಟನೆಯಿಂದಾಗಿ ಸುಮಾರು 1 ಗಂಟೆ ಕಾಲ ಹಳಿಯಾಳ ರಸ್ತೆಯ ರೈಲ್ವೆ ಗೇಟ್ ಬಳಿ ರೈಲು ನಿಂತುಕೊಂಡಿತ್ತು. ಮತ್ತೊಂದು ಇಂಜಿನ್ ಅಳವಡಿಸಿ ಸಿಬ್ಬಂದಿ ರೈಲು ತೆರವು ಮಾಡಿದೆರು. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:03 pm, Wed, 8 October 25