ಮಿಸ್ಸೆಸ್ ಇಂಡಿಯಾ ಕಿರೀಟ ಗೆದ್ದ ಬೆಣ್ಣೆ ನಗರಿ ಬೆಡಗಿ: ಹಳ್ಳಿ ಹುಡುಗಿಯ ಸಾಧನೆ ಎಂಥವರಿಗೂ ಸ್ಫೂರ್ತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 16, 2023 | 8:50 PM

ಇತ್ತೀಚಿಗೆ ಉತ್ತರ ಪ್ರದೇಶದ ನೊಯಿಡಾದಲ್ಲಿ ನಡೆದ ರಾಷ್ಟ್ರೀಯ ಮಿಸ್ಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಎಲ್ಲ ಸುತ್ತುಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ದಾವಣಗೆರೆಯ ಮೇಘನಾ ಅವರು ಮಿಸ್ಸೆಸ್ ಇಂಡಿಯಾ ಪ್ರಶಸ್ತಿಯ ಕಿರೀಟವನ್ನು ಮುಡಿಗೆರಿಸಿಕೊಂಡಿದ್ದಾರೆ.

ಮಿಸ್ಸೆಸ್ ಇಂಡಿಯಾ ಕಿರೀಟ ಗೆದ್ದ ಬೆಣ್ಣೆ ನಗರಿ ಬೆಡಗಿ: ಹಳ್ಳಿ ಹುಡುಗಿಯ ಸಾಧನೆ ಎಂಥವರಿಗೂ ಸ್ಫೂರ್ತಿ
ಮಿಸ್ಸೆಸ್ ಇಂಡಿಯಾ ಪಟ್ಟ ಗೆದ್ದ ಮೇಘನಾ
Follow us on

ದಾವಣಗೆರೆ: ಬಣ್ಣದ ಲೋಕ, ಫ್ಯಾಷನ್​ ಲೋಕ ಎಲ್ಲರನ್ನೂ ಸೆಳೆದರೂ ಯಶಸ್ಸು ಸಿಗುವುದು ಕೆಲವೇ ಕೆಲವರಿಗೆ ಮಾತ್ರ. ಅವರು ಅಪ್ಪಟ ಹಳ್ಳಿ ಹುಡುಗಿ. ತಾಯಿ ಅಂಗನವಾಡಿ ಶಿಕ್ಷಕಿ. ತಂದೆ ಕೃಷಿಕ. ಇಂತಹ ಹುಡುಗಿಗೆ ಫ್ಯಾಶನ್ ಹುಚ್ಚು. ನಾನು ವಿಶ್ವ ಸುಂದರಿ ಸ್ಪರ್ಧೆ(National Mrs India Contest)ಯಲ್ಲಿ ಪಾಲ್ಗೊಳ್ಳಬೇಕು ಎಂಬ ಛಲ. ಆದರೆ ಮದುವೆ ಆಗಿ ಬಿಟ್ಟಿತ್ತು. ಮದುವೆ ಮಾಡಿಕೊಂಡರೆ ಜೀವನವೇ ಮುಗಿಯಿತು ಎನ್ನುವ ಹೆಣ್ಣು ಮಕ್ಕಳೇ ಜಾಸ್ತಿ. ಆದರೆ ಹಟ ಬಿಡದ ಹಳ್ಳಿ ಹುಡುಗಿ ಅಲ್ಲಿ ಇಲ್ಲಿ ತರಬೇತಿ ಪಡೆದು ಕೊನೆಗೊಂದು ದಿನ ಮಿಸ್ಸೆಸ್ ಇಂಡಿಯಾ ಕಿರೀಟ ಗೆದ್ದು ಬಿಟ್ಟರು. ಆ ಕುರಿತು ಒಂದು ವರದಿ ಇಲ್ಲಿದೆ.

ಇತ್ತೀಚಿಗೆ ಉತ್ತರ ಪ್ರದೇಶದ ನೊಯಿಡಾದಲ್ಲಿ ನಡೆದ ರಾಷ್ಟ್ರೀಯ ಮಿಸ್ಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಎಲ್ಲ ಸುತ್ತುಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಮೇಘನಾ ಅವರು ಮಿಸ್ಸೆಸ್ ಇಂಡಿಯಾ ಪ್ರಶಸ್ತಿಯ ಕಿರೀಟವನ್ನು  ಮುಡಿಗೆರಿಸಿಕೊಂಡಿದ್ದಾರೆ. ದಾವಣಗೆರೆ ತಾಲೂಕಿನ ಅಣಜಿ ಎಂಬ ಹಳ್ಳಿಯ ಹುಡುಗಿ ಮೇಘನಾ ಅವರು. ತಾಯಿ ಅಂಗನವಾಡಿ ಶಿಕ್ಷಕಿ ಹಾಗೂ ತಂದೆ ಕೃಷಿಕ. ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣ ಹಳ್ಳಿಯಲ್ಲಿ ಮುಗಿಸಿ ಪದವಿಯನ್ನ ದಾವಣಗೆರೆ ಸರ್ಕಾರಿ ಪದವಿ ಕಾಲೇಜ್​ನಲ್ಲಿ ಪೂರೈಸಿದ್ದಾರೆ.

ಇಂಗ್ಲಿಷ್​ ಭಾಷೆ ಮೇಲೆ ಹಿಡಿತ. ವಿಭಿನ್ನ ಉಡುಪುಗಳಿಂದ ಬಹುತೇಕ ಕಡೆ ಗಮನ ಸೆಳೆದ ಇವರು ಒಮ್ಮೆ ಹಳ್ಳಿ ಹುಡುಗಿ ವಿಶ್ವ ಸುಂದರಿ ಸ್ಪರ್ಧೆಗೆ ಹೋಗಬೇಕು ಎಂದು ಹುಬ್ಬಳ್ಳಿ ಸೇರಿದಂತೆ ಹಲವಾರು ಕಡೆ ತರಬೇತಿ ಪಡೆದರು. ಆದರೆ ತಂದೆ ತಾಯಿ ಹಳ್ಳಿಯವರು ಮಗಳೆ ದೊಡ್ಡವಳಾದಳು ಎಂದು ಮದುವೆ ಮಾಡಿ ಬಿಟ್ಟರು.

ಇದನ್ನೂ ಓದಿ: Weird Superstitions: ಶತ ಶತಮಾನಗಳಿಂದ ನಡೆದು ಬಂದಿದೆ ಇಂತಹ ವಿಚಿತ್ರ ಆಚರಣೆ, ನೋಡಿದವರ ಎದೆ ಝಲ್ ಅನ್ನುತ್ತದೆ! ಸರ್ಕಾರ ಇದಕ್ಕೆ ನಿರ್ಬಂಧ ಹಾಕಬೇಕಿದೆ

ಆದರೆ ಇವರ ಉತ್ಸಾಹ ಮಾತ್ರ ಕಡಿಮೆ ಆಗಲಿಲ್ಲ. ಪತಿ ಪಂಚಾಕ್ಷರಿ ಕೂಡ ಶಿಕ್ಷಕರಾಗಿದ್ದು, ಪತ್ನಿಗೆ ಆಸೆಗೆ ಬೆಂಬಲವಾಗಿ ನಿಂತುಕೊಂಡರು. ಇಂತಹ ಹಳ್ಳಿ ಹುಡುಗಿ ವಿಶ್ವ ಸುಂದರಿ ಸ್ಪರ್ಧೆಯ ಕನಸು ನನಸಾಗದಿದ್ದರು, ಮಿಸ್ಸೆಸ್ ಇಂಡಿಯಾ ಪ್ರಶಸ್ತಿಯ ಪಡೆದುಕೊಂಡಿದ್ದಾರೆ.

ನೋಯಿಡಾದಲ್ಲಿ ನಡೆದ ಸ್ಪರ್ಧೆಗೆ ದೇಶದ ಪ್ರತಿಯೊಂದು ರಾಜ್ಯದಿಂದ ಸ್ಪರ್ಧಿಗಳು ಆಗಮಿಸಿದ್ದರು. ಒಟ್ಟು 120ಕ್ಕೂಕ ಹೆಚ್ಚು ಸ್ಪರ್ಧೆಗಳು ಭಾಗವಹಿಸಿದ್ದರು. ಮೊದಲಿಗೆ ಆಡಿಷನ್, ಸಂಪ್ರದಾಯಿಕ ಉಡುಗೆ, ಇಂಟ್ರುಡೆಕ್ಷನ್ ರೌಂಡ್, ಈವ್ನಿಂಗ್ ಗೌನ್ ರೌಂಡ್, ಕ್ವೆಷನ್ ಆಂಡ್ ಆನ್ಸರ್ ರೌಂಡ್ ಹಾಗೂ ವಿನ್ನರ್ ಓನೌನ್ಸ್ ಮೆಂಟ್ ಹೀಗೆ ಆರು ಸುತ್ತುಗಳಲ್ಲಿ ಮೇಘನಾ ನೂರಕ್ಕೆ ನೂರು ಅಂಕಗಳನ್ನ ಗಳಿಸಿದ್ದಾರೆ.

ಜಮ್ಮು ಕಾಶ್ಮೀರ ಸೇರಿದಂತೆ ಹತ್ತಾರು ರಾಜ್ಯಗಳ ಪ್ರತಿನಿಧಿಗಳು ಅಂತಿಮ ಸುತ್ತಿಗೆ ಬಂದಿದ್ದರು. ಆದರೆ ಅದೃಷ್ಠ ಮೇಘನಾ ಅವರದ್ದಾಗಿತ್ತು. ಇಂತಹ ಸ್ಪರ್ಧೆಯ ಜೊತೆಗೆ ಕೆಬಿಜೆ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಟ್ಟಿಕೊಂಡು ಹಳ್ಳಿ ಹಳ್ಳಿ ಆರೋಗ್ಯ ಭಾಷೆ ಬಳಕೆ ಬಗ್ಗೆ ಕ್ಯಾಪ್ ಕೂಡ ಮಾಡುತ್ತಾರೆ.

ಇದನ್ನೂ ಓದಿ: ಮನೆ-ಮರಗಳಲ್ಲಿ ಹಕ್ಕಿಗಳು ಗೂಡು ಕಟ್ಟತ್ತವೆ, ಸ್ಕೂಟಿಯಲ್ಲಿ ಪಕ್ಷಿ ಗೂಡು ಕಟ್ಟಿರುವುದು ನೋಡಿ

ಈಗಾಗಲೇ ಮಿಸ್ಸೆಸ್ ಇಂಡಿಯಾ ಆಗಿರುವ ಮೇಘನಾ ಅಂತರಾಷ್ಟ್ರೀಯ ಸ್ಪರ್ಧೆಗಳಿಗೆ ಇನ್ನೇರಡು ತಿಂಗಳಲ್ಲಿ ತೆರಳಲಿದ್ದಾರೆ. ಇದಕ್ಕೆ ಹೆಚ್ಚಿನ ತರಬೇತಿ ಕೂಡ ಬೇಕಾಗಿದೆ. ಇಂತಹ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕೆಲಸಂಸ್ಥೆಗಳು ಆರ್ಥಿಕ ಸಹಾಯ ಮಾಡಲು ಮುಂದೆ ಬಂದಿವೆ. ಭಾಷೆ ಬಗ್ಗೆ ಗಮನ ಹರಿಸಿ, ಜೊತೆಗೆ ಕಿಳುರಿಮೆಯಿಂದ ಹೊರಬರಬೇಕು. ಜೊತೆಗೆ ಅತಿ ಖರ್ಚಾಗುತ್ತದೆ ಎಂಬುದು ತಪ್ಪು.

ನಾನು ಸ್ಪರ್ಧೆಯಲ್ಲಿ ಅತಿ ಕಡಿಮೆ ಬೆಲೆಯ ಬಟ್ಟೆಗಳನ್ನ ಧರಿಸಿದ್ದೇನೆ. ನಿಮ್ಮ ಬಟ್ಟೆಗಿಂತ ನಿಮ್ಮ ಆತ್ಮವಿಶ್ವಾಸ ಬಹಳ ಮುಖ್ಯ ಎನ್ನುತ್ತಾರೆ ಮೇಘನಾ. ಕೆಲ ಯುವತಿಯರಿಗೆ ತರಬೇತಿ ನೀಡುವ ಉತ್ಸಾಹದಲ್ಲಿ ಸಹ ಇದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.