ದಾವಣಗೆರೆ: ಡ್ಯಾಂನಿಂದ ಹರಿದು ಬರುತ್ತಿರುವ ನೀರಿನಲ್ಲಿ ಮೀನು ಹಿಡಿಯುವ ಹುಚ್ಚು ಸಾಹಸಕ್ಕೆ ಇಳಿದು ಕೊಚ್ಚಿ ಹೋಗುತ್ತಿದ್ದ ಯುವಕ; ಅಪಾಯದಿಂದ ಪಾರು

| Updated By: sandhya thejappa

Updated on: Jul 24, 2021 | 12:05 PM

ಭಾರಿ ಮಳೆ ಹಿನ್ನೆಲೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂನ ಎಲ್ಲ ಗೇಟ್​ಗಳನ್ನ ಓಪನ್ ಮಾಡಲಾಗಿತ್ತು. ಜೋರಾಗಿ ಬರುತ್ತಿರುವ ನೀರಿನಲ್ಲಿ ಯುವಕ ಮೀನು ಹಿಡಿಯುತ್ತಿದ್ದ. ಮೀನು ಹಿಡಿಯುತ್ತಿದ್ದಾಗ ಇದ್ದಕ್ಕಿದ್ದಂತೆ ನೀರಿನಲ್ಲಿ ಕೊಚ್ಚಿಹೋದ.

ದಾವಣಗೆರೆ: ಡ್ಯಾಂನಿಂದ ಹರಿದು ಬರುತ್ತಿರುವ ನೀರಿನಲ್ಲಿ ಮೀನು ಹಿಡಿಯುವ ಹುಚ್ಚು ಸಾಹಸಕ್ಕೆ ಇಳಿದು ಕೊಚ್ಚಿ ಹೋಗುತ್ತಿದ್ದ ಯುವಕ; ಅಪಾಯದಿಂದ ಪಾರು
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕ
Follow us on

ದಾವಣಗೆರೆ: ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ಹಲವು ಕಡೆ ಹೊಲ, ಮನೆಗಳು ಜಲಾವೃತವಾಗಿದ್ದು, ಜನ ಪರದಾಡುತ್ತಿದ್ದಾರೆ. ಜೀವ ಉಳಿದರೆ ಸಾಕು ಅಂತ ಕಾಲಿ ಕೈಯಲ್ಲಿ ಮನೆ ಬಿಟ್ಟು ಹೊರಗೆ ಬಂದಿದ್ದಾರೆ. ಈ ನಡುವೆ ದಾವಣಗೆರೆಯಲ್ಲಿ ಯುವಕನೊಬ್ಬ ಹುಚ್ಚು ಸಾಹಸಕ್ಕೆ ಇಳಿದು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ. ಡ್ಯಾಂನಿಂದ ಹರಿದು ಬರುತ್ತಿರುವ ನೀರಿನಲ್ಲಿ ಯುವಕ ಮೀನು ಹಿಡಿಯುವ ಸಾಹಸಕ್ಕೆ ಕೈಹಾಕಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ. ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ.

ಭಾರಿ ಮಳೆ ಹಿನ್ನೆಲೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂನ ಎಲ್ಲ ಗೇಟ್​ಗಳನ್ನ ಓಪನ್ ಮಾಡಲಾಗಿತ್ತು. ಜೋರಾಗಿ ಬರುತ್ತಿರುವ ನೀರಿನಲ್ಲಿ ಯುವಕ ಮೀನು ಹಿಡಿಯುತ್ತಿದ್ದ. ಮೀನು ಹಿಡಿಯುತ್ತಿದ್ದಾಗ ಇದ್ದಕ್ಕಿದ್ದಂತೆ ನೀರಿನಲ್ಲಿ ಕೊಚ್ಚಿಹೋದ. ಸ್ವಲ್ಪ ಹೊತ್ತು ಈಜಾಡಿ ಬೇರೆಯವರ ಸಹಾಯ ಕೇಳಿದ. ಆಗ ಅಲ್ಲಿಯೇ ಇದ್ದ ಕೆಲ ಯುವಕರು ಹಗ್ಗ ಬಿಟ್ಟು ಯುವಕನನ್ನು ರಕ್ಷಣೆ ಮಾಡಿದ್ದಾರೆ. ಪಿಕಪ್ ಡ್ಯಾಂಗೆ ಭಾರಿ ನೀರು ಬಂದ ಹಿನ್ನೆಲೆ ಪೊಲೀಸ್ ಭದ್ರತೆ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕೊಚ್ಚಿ ಹೋಗುತ್ತಿದ್ದ ಕಾರು

ಕೊಚ್ಚಿ ಹೋಗುತ್ತಿದ್ದ ಕಾರು ಬಚಾವ್ 
ಕೊಚ್ಚಿಕೊಂಡು ಹೋಗುತ್ತಿದ್ದ ಕಾರ್​ನ ಸ್ಥಳೀಯರು ಬಚಾವ್ ಮಾಡಿದ ಘಟನೆ ನ್ಯಾಮತಿ ತಾಲೂಕಿನ ಹಿರೇಹಳ್ಳಿ- ಗಂಗನಕಟ್ಟೆ ಸೇತುವೆ ಮೇಲೆ ನಡೆದಿದೆ. ಸೇತುವೆ ಮೇಲೆ ಹೋಗುತ್ತಿದ್ದಂತೆ ಕಾರ್ ಆಫ್ ಆಗಿತ್ತು. ಆಗ ನೀರಿನ ರಬಸಕ್ಕೆ ಕಾರು ಕೊಚ್ಚಿ ಹೋಗುತ್ತಿತ್ತು. ಸ್ಥಳೀಯರು ಕೊಚ್ಚಿ ಹೋಗುತ್ತಿದ್ದ ಕಾರನ್ನು ನೀರಿನಿಂದ ಹೊರತಂದಿದ್ದಾರೆ.

70 ಗ್ರಾಮಗಳಲ್ಲಿ ಪ್ರವಾಹ ಭೀತಿ
ತುಂಗಭದ್ರಾ ನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆ ದಾವಣಗೆರೆ ಜಿಲ್ಲೆಯ 70 ಗ್ರಾಮಗಳಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಇಂದು ಬೆಳಿಗ್ಗೆಯಿಂದ 103 ಕ್ಯೂಸೆಕ್ಸ್ ನೀರು ಭದ್ರಾ ಡ್ಯಾಂನಿಂದ ತುಂಗಭದ್ರಾ ನದಿಗೆ ನೀರು ಬಿಡಲಾಗಿದೆ. ಹೀಗಾಗಿ ನದಿಪಾತ್ರದ ಜನರಿಗೆ ದಾವಣಗೆರೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಸೇತುವೆ ಮುಳುಗಡೆ
ಜಿಲ್ಲೆಯಲ್ಲಿ ಭಾರಿ ಮಳೆಗೆ ಸೇತುವೆ ಮುಳುಗಡೆಯಾಗಿವೆ. ಶ್ಯಾಗಲೆಹಳ್ಳದ ನೀರಿನಿಂದ ಸಂಕ್ಲಿಪುರ, ಗುಡದಳ್ಳಿ ಮುಳುಗಡೆಯಾಗಿವೆ. ಸೇತುವೆಗಳ ಮುಳುಗಡೆಯಿಂದ ಐದಕ್ಕೂ ಹೆಚ್ಚು ಗ್ರಾಮಗಳ ನಡುವೆ ರಸ್ತೆ ಸಂಪರ್ಕ ಕಡಿತವಾಗಿದೆ. ಜೊತೆಗೆ ಐದಕ್ಕೂ ಹೆಚ್ಚು ಗ್ರಾಮಗಳ ನಡುವೆ ರಸ್ತೆ ಸಂಪರ್ಕ ಕಡಿತವಾಗಿದ್ದು, ಅಪಾರ ಪ್ರಮಾಣದ ನೀರು ಬೆಳೆಗಳಿಗೆ ನುಗ್ಗಿ ರೈತರಿಗೆ ಸಂಕಷ್ಟ ಎದುರಾಗಿದೆ.

ಜಿಲ್ಲೆಯ ಹರಿಹರ ನಗರದ ಗಂಗಾನಗರದ ಕೆಲ ಮನೆಗಳಿಗೆ ನೀರು ನುಗ್ಗಿದೆ. ಹೀಗಾಗಿ 15 ಕುಟುಂಬಗಳನ್ನು ಸ್ಥಳಾಂತರಗೊಳಿಸಿದ ತಾಲೂಕು ಆಡಳಿತ ಗಂಜಿಕೇಂದ್ರ ಆರಂಭಿಸಿದೆ. ಹರಿಹರ ಎಪಿಎಂಸಿ ಕಟ್ಟಡದಲ್ಲಿ 15 ಕುಟುಂಬಗಳಿಗೆ ಆಸರೆ ನೀಡಲಾಗಿದೆ.

ಇದನ್ನೂ ಓದಿ

ಬೆಂಗಳೂರು-ಮುಂಬೈ ಹೆದ್ದಾರಿ ಮೇಲೆ ಗುಡ್ಡದ ಕಲ್ಲು ಮಣ್ಣು; ಬೈಕ್ ಸವಾರನ ರಕ್ಷಣೆ, 20ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

ಚಲಿಸುತ್ತಿದ್ದ ರೈಲಿನ ಮೇಲೆ ಕುಸಿದು ಬಿದ್ದ ಗುಡ್ಡ; ಪವಾಡ ಸದೃಶ ರೀತಿಯಲ್ಲಿ ಪಾರಾದ ಪ್ರಯಾಣಿಕರು

(Davanagere man who trying fishering in Devarabelakere Dam water after it reach dangerous level)

Published On - 11:56 am, Sat, 24 July 21