Davanagere News: ನಿರುದ್ಯೋಗ ಭತ್ಯೆ ನೀಡುವ ಸರ್ಕಾರ ನಮ್ಮನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದೆ; ಖಾಸಗಿ ಬಸ್ ಮಾಲೀಕರ ಅಳಲು

|

Updated on: Jun 06, 2023 | 2:44 PM

ಕೇವಲ ದಾವಣಗೆರೆ ಜಿಲ್ಲೆಯಲ್ಲಿಯೇ ನಿತ್ಯ 350 ಖಾಸಗಿ ಬಸ್ಸುಗಳು ಕಾರ್ಯಾಚರಿಸುತ್ತಿವೆ. ಕೆಎಎಸ್​​​ಆರ್​​ಟಿಸಿ ಬಸ್ಸುಗಳೂ ಅಷ್ಟೇ ಇವೆ. ದಶಕಗಳಿಂದ ಸೇವೆಯಲ್ಲಿ ಇರುವ ನಮ್ಮ ಖಾಸಗಿ ಬಸ್​​ಗಳನ್ನು ಉಳಿಸಿ ಎಂದು ದಾವಣಗೆರೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಸ್ ಮಲ್ಲೇಶಪ್ಪ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

Davanagere News: ನಿರುದ್ಯೋಗ ಭತ್ಯೆ ನೀಡುವ ಸರ್ಕಾರ ನಮ್ಮನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಿದೆ; ಖಾಸಗಿ ಬಸ್ ಮಾಲೀಕರ ಅಳಲು
ಸಾಂದರ್ಭಿಕ ಚಿತ್ರ
Follow us on

ದಾವಣಗೆರೆ: ಸರ್ಕಾರಿ ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿದಂತೆಯೇ ಖಾಸಗಿ ಬಸ್​​ಗಳಿಗೂ (Private Bus) ನಿಯಮ ರೂಪಿಸಿ. ಇಲ್ಲವಾದಲ್ಲಿ ದಶಕಗಳಿಂದ ನಡೆಯುತ್ತಿರುವ ನಮ್ಮ ಉದ್ಯಮಕ್ಕೆ ಹೊಡೆತ ಬೀಳಲಿದೆ ಎಂದು ದಾವಣಗೆರೆ (Davanagere) ಖಾಸಗಿ ಬಸ್ ಮಾಲೀಕರ ಸಂಘವು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡುವ ಸರ್ಕಾರ ನಮ್ಮನ್ನು ನಿರುದ್ಯೋಗಿಗಳನ್ನಾಗಿ ಮಾಡಲು ಹೊರಟಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಖಾಸಗಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿ. ಇದಕ್ಕೆ ಸರ್ಕಾರ ವಿಧಿಸುವ ನಿಯಮಗಳಿಗೆ ನಾವು ಬದ್ದ ಎಂದು ಅವರು ಹೇಳಿದ್ದಾರೆ.

ಕೇವಲ ದಾವಣಗೆರೆ ಜಿಲ್ಲೆಯಲ್ಲಿಯೇ ನಿತ್ಯ 350 ಖಾಸಗಿ ಬಸ್ಸುಗಳು ಕಾರ್ಯಾಚರಿಸುತ್ತಿವೆ. ಕೆಎಎಸ್​​​ಆರ್​​ಟಿಸಿ ಬಸ್ಸುಗಳೂ ಅಷ್ಟೇ ಇವೆ. ದಶಕಗಳಿಂದ ಸೇವೆಯಲ್ಲಿ ಇರುವ ನಮ್ಮ ಖಾಸಗಿ ಬಸ್​​ಗಳನ್ನು ಉಳಿಸಿ ಎಂದು ದಾವಣಗೆರೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಸ್ ಮಲ್ಲೇಶಪ್ಪ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ 15 ರಿಂದ 16 ಜಿಲ್ಲೆಗಳಲ್ಲಿ ಖಾಸಗಿ ಬಸ್​​ಗಳ ಸಂಚಾರ ಹೆಚ್ಚಾಗಿದೆ. ಜೂನ್ 11 ರಿಂದ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಸರ್ಕಾರ ಘೋಷಿಸಿದೆ. ‌ಇದೇ ರೀತಿ ಖಾಸಗಿ ಬಸ್​​ಗಳಲ್ಲಿ ಸಹ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ. ಸಾರಿಗೆ ಇಲಾಖೆಗೆ ನಿಗದಿ ಪಡಿಸಿದ ದರ ನೀಡಿ ಎಂದು ಅವರು ಹೇಳಿದ್ದಾರೆ.

ಪ್ರತಿ ಬಸ್ಸಿಗೆ ವರ್ಷಕ್ಕೆ ಎರಡು ಲಕ್ಷ ರೂಪಾಯಿ ತೆರಿಗೆ ಕಟ್ಟುತ್ತೇವೆ. ಎಲ್ಲಾ ಕಡೆ ಸರ್ಕಾರಿ ಬಸ್ಸುಗಳಿಲ್ಲ. ಇಂತಹ ಕಡೆ ನಮ್ಮನ್ನು ಸರ್ಕಾರ ಬಳಸಿಕೊಳ್ಳಬಹುದು. ಒಂದು ಬಸ್ಸಿನಿಂದ 20 ಜನ ಉದ್ಯೋಗ ಪಡೆದಿದ್ದಾರೆ. ಇವರೆಲ್ಲಾ ನಿರುದ್ಯೋಗಿಳಾಗುತ್ತಾರೆ. ನಿರುದ್ಯೋಗಿಗಳಿಗೆ ಸಹಾಯ ಧನ‌ ನೀಡುವ ಸರ್ಕಾರ ನಮ್ಮನ್ನ ನಿರುದ್ಯೋಗಿಗಳನ್ನಾಗಿ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: Mangaluru News: ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಸೌಲಭ್ಯ; ಕರಾವಳಿ ಜಿಲ್ಲೆಗಳ ಖಾಸಗಿ ಬಸ್​ಗಳಿಗೆ ನಷ್ಟದ ಆತಂಕ

ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ‘ಶಕ್ತಿ’ ಯೋಜನೆಯಿಂದ ಕರಾವಳಿ ಕರ್ನಾಟಕ ಭಾಗದ ಖಾಸಗಿ ಬಸ್​​ ಮಾಲೀಕರು ಚಿಂತೆಗೀಡಾಗಿರುವುದಾಗಿ ಇತ್ತೀಚೆಗೆ ವರದಿಯಾಗಿತ್ತು. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಿರುವುದು ಖಾಸಗಿ ಬಸ್​ಗಳಿಗೆ ಹೊರೆಯಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್​ಗಳ ಸಂಖ್ಯೆಯೇ ಹೆಚ್ಚಿದೆ. ಸರ್ಕಾರದ ಯೋಜನೆಯಿಂದ ಖಾಸಗಿ ಬಸ್‌ಗಳ ಲಾಭದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲಾ ಸಿಟಿ ಬಸ್ ಮಾಲೀಕರ ಸಂಘದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಡೀಸೆಲ್ ಸಬ್ಸಿಡಿ ರೂಪದಲ್ಲಿ ಪರಿಹಾರ ನೀಡುವ ಅಗತ್ಯವನ್ನು ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ